Advertisement

“ಒಲಿಂಪಿಕ್ಸ್‌ ಮತ್ತೆ ಮುಂದೂಡಲ್ಪಟ್ಟರೆ ಪ್ಲಾನ್‌ ಬಿ ಇಲ್ಲ: ರದ್ದಾಗಲಿದೆಯೇ ಮಹಾ ಕ್ರೀಡಾಕೂಟ?

03:11 PM Apr 16, 2020 | keerthan |

ಟೋಕ್ಯೋ: ಕೋವಿಡ್-19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಕಾರಣಕ್ಕೆ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಇನ್ನೊಂದು ಸಲ ಮುಂದೂಡಬೇಕಾದ ಪ್ರಮೇಯ ಒದಗಿದರೆ ಯಾವುದೇ ಪರ್ಯಾಯ ಯೋಜನೆ (ಪ್ಲಾನ್‌ ಬಿ) ಇಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

Advertisement

ಈಗಿನ ಯೋಜನೆಯಂತೆ ಮುಂದೂಡಲ್ಪಟ್ಟ ಒಲಿಂಪಿಕ್‌ ಕ್ರೀಡಾಕೂಟವು 2021ರ ಜುಲೈ 23ರಂದು ಆರಂಭವಾಗಲಿದೆ. ಆಗಸ್ಟ್‌ 24ರಿಂದ ಪ್ಯಾರಾಲಿಂಪಿಕ್ಸ್‌ ನಡೆಯಲಿದೆ. ಈ ಬೇಸಿಗೆಯಲ್ಲಿ ಒಲಿಂಪಿಕ್ಸ್‌ ಆಯೋಜಿಸಲು ಸಾಧ್ಯವಿಲ್ಲ ಎನ್ನುವುದು ಖಚಿತವಾದ ಬಳಿಕ ಮುಂದೂಡಿ, ಹೊಸ ದಿನಾಂಕವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಕಳೆದ ತಿಂಗಳು ನಿಗದಿಪಡಿಸಿತ್ತು  ಎಂದು ಟೋಕ್ಯೋ ಒಲಿಂಪಿಕ್ಸ್‌ನ ವಕ್ತಾರ ಮಸಾ ಟಕಾಯ ಹೇಳಿದ್ದಾರೆ.

ಮುಂದಿನ ಬೇಸಿಗೆಗಿಂತ ಹೆಚ್ಚು ಅವಧಿಗೆ ಕ್ರೀಡಾಕೂಟವನ್ನು ಮುಂದೂಡುವುದು ಸಾಧ್ಯವಿಲ್ಲ ಎಂದು ಜಪಾನ್‌ ಪ್ರಧಾನಿ ಶಿಂಜೊ ಅಬೆ ಹಾಗೂ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ನಿಗದಿಯಂತೆ ಒಲಿಂಪಿಕ್ಸ್‌ ಆಯೋಜಿಸಲು ನಾವು ಸಿದ್ಧತೆ ಕೈಗೊಳ್ಳುತ್ತಿದ್ದೇವೆ ಎಂದು ಮಸಾ ಟಕಾಯ ಸ್ಪಷ್ಟಪಡಿಸಿದ್ದಾರೆ.

ಹೆಚ್ಚುವರಿ ವೆಚ್ಚದ ಚಿಂತೆಯಲ್ಲಿ ಜಪಾನ್‌: ಸುಮಾರು 11 ಸಾವಿರ ಕ್ರೀಡಾಪಟುಗಳು, 4,400 ಪ್ಯಾರಾಲಿಂಪಿಕ್ ಪಟುಗಳು ಹಾಗೂ 206 ದೇಶಗಳ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಅವರ ಪ್ರಯಾಣ, ವಸತಿ, ಪ್ರೇಕ್ಷಕರು ಹಾಗೂ ಕ್ರೀಡಾಂಗಣ ಮರು ಸಿದ್ಧತೆಗಾಗಿ ಜಪಾನ್‌ 43,000 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next