Advertisement
ಹಿರಿಯ ವಕೀಲ ಓ.ಶಾಮಭಟ್ ಅವರ “ಬೆಂಕಿಯ ಚೆಂಡು ಕುಯಿಲಿ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜಕೀಯ ಅಂದರೇ ತುಂಬಾ ಕಷ್ಟ. ಬಹಳ ಪ್ರವಾಸ ಮಾಡುತ್ತಿದ್ದೇನೆ. ತಮಿಳುನಾಡಿನಲ್ಲಿ ಮೊದಲಿನಿಂದಲೂ ದ್ರಾವಿಡ ರಾಜಕಾರಣ ಇದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನಾಲ್ಕೈದು ದಶಕಗಳಿಂದ ವ್ಯಕ್ತಿಗತ ರಾಜಕಾರಣ ನಡೆದಿದೆ. ಎಂಜಿಆರ್, ಕರುಣಾನಿಧಿ, ಜಯಲಲಿತಾ ಹೀಗೆ ವ್ಯಕ್ತಿ ಆಧಾರಿತ ರಾಜಕಾರಣ ನಡೆದಿದೆ. ಈಗ ಅಂತಹ ಪರಿಸ್ಥಿತಿ ಇಲ್ಲ. ತಮಿಳುನಾಡಿನಲ್ಲಿ ಹಲವಾರು ಹಿರಿಯ ನಾಯಕರಿದ್ದಾರೆ. ಕೇಂದ್ರ ಸಚಿವರಾಗಿ ಕೆಲಸ ಮಾಡಿದವರೂ ಇದ್ದಾರೆ. ನಾನು ಸಾಮಾನ್ಯ ಕಾರ್ಯಕರ್ತ ಮಾತ್ರ. ನಮ್ಮೆಲ್ಲರ ನಾಯಕ ಪ್ರಧಾನಿ ಮೋದಿ ಮಾತ್ರ ಎಂದರು.
Related Articles
Advertisement
ನೋಟ್ ಬ್ಯಾನ್, ಸಿಎಎ, ಈಗ ಸರಳವಾದ ಕೃಷಿ ಕಾಯ್ದೆಗಳು ಹೀಗೆ ಪದೇ ಪದೇ ಪ್ರತಿಭಟನೆಗಳು ನಡೆಯುತ್ತಿವೆ. ಭಾರತದ ಬದಲಾಗುತ್ತಿದೆ. ಯುವ ಸಮೂಹ ಬದಲಾಗಲು ಇದು ಸಕಾಲ. ಯಾರ ಪರವಾಗಿ ನಿಲ್ಲಬೇಕು ಎಂಬುದು ನಿಮ್ಮ ನಿರ್ಧಾರ ಎಂದು ಮೈಸೂರಿನಲ್ಲಿ ಅಣ್ಣಮಲೈ ತಿಳಿಸಿದರು.
ಇದನ್ನೂ ಓದಿ: ಕೇಕ್ ಕತ್ತರಿಸಿ ಪೂಜೆ ಸಲ್ಲಿಸುವ ಮೂಲಕ ಕರುವಿನ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ ರೈತ