Advertisement

ಶಶಿಕಲಾಗೆ ಪೆರೋಲ್‌ ಇಲ್ಲ

11:42 AM Oct 04, 2017 | |

ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ನಟರಾಜನ್‌ ಸಲ್ಲಿಸಿದ್ದ ಪೆರೋಲ್‌ ಅರ್ಜಿಯನ್ನು ಜೈಲು ಅಧೀಕ್ಷಕರು ತಿರಸ್ಕರಿಸಿದ್ದಾರೆ. ತಮ್ಮ ಪತಿ ನಟರಾಜನ್‌ಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಅಧೀಕ್ಷಕ ಸೋಮಶೇಖರ್‌, ದಾಖಲೆಗಳು ನಿಯಮಾವಳಿ ಪ್ರಕಾರ ಇಲ್ಲ.

Advertisement

ಶಶಿಕಲಾ ವಿರುದ್ಧ ತಮಿಳುನಾಡಿನಲ್ಲಿ ಎರಡು ಕ್ರಿಮಿನಲ್‌ ಪ್ರಕರಣಗಳಿರುವ ಬಗ್ಗೆ ಉಲ್ಲೇಖೀಸಿಲ್ಲ. ಜತೆಗೆ ಪತಿ ಅನಾರೋಗ್ಯದ ಬಗ್ಗೆ ಸ್ಥಳೀಯ ವಕೀಲರಿಂದ ದೃಢೀಕರಣ ಮಾಡಿಸದ ಕಾರಣ ಅರ್ಜಿ ತಿರಸ್ಕರಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next