Advertisement

ಖಾಜಾನೆ ಕಾಯಲಿರುವ ಲೋಕಪಾಲಕ್ಕೆ ಅನಗತ್ಯ ವೆಚ್ಚ

09:52 AM Dec 02, 2019 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕಪ್ಪುಕುಳಗಳನ್ನು ಸದೆ ಬಡಿಯಲು ಸಂವಿಧಾನಾತ್ಮಕವಾಗಿ ಸ್ಥಾಪಿತವಾಗಿರುವ ಲೋಕಪಾಲ್ ಸಂಸ್ಥೆ ಸ್ವಂತ ಕಟ್ಟಡದ ಸಮಸ್ಯೆ ಎದುರಿಸುತ್ತಿದೆ. ಭ್ರಷ್ಟಾಚಾರಿಗಳನ್ನು ಮಟ್ಟ ಹಾಕಲು ದೇಶಾದ್ಯಂತ ಕಾರ್ಯ ನಿರ್ವಹಿಸುವ ಅಧಿಕಾರ ವ್ಯಾಪ್ತಿಯನ್ನು ಲೋಕಪಾಲ್ ಹೊಂದಿದೆ. ಆದರೆ ಸರಕಾರದ ಇಚ್ಚಾಶಕ್ತಿ ಕೊರತೆಯೋ ಅಥವ ಸೂಕ್ತವಾದ ಜಾಗದ ಸಮಸ್ಯೆಯೋ ಎಂಬಂತೆ ಈ ತನಕ ಸ್ವಂತ ಕಟ್ಟಡವನ್ನು ಹೊಂದುವ ಭಾಗ್ಯ ಲೋಕಪಾಲಕ್ಕೆ ಈ ತನಕ ಒದಗಿ ಬಂದಿಲ್ಲ.

Advertisement

ಈ ಕಾರಣಕ್ಕೆ ಬಾಡಿಗೆ ಕಟ್ಟಡದಲ್ಲೇ ಕಚೇರಿಯನ್ನು ತೆರೆಯಲಾಗಿದ್ದು, ಪ್ರತಿ ತಿಂಗಳು 50 ಲಕ್ಷ ರೂ. ಅನ್ನು ಬಾಡಿಗೆ ರೂಪದಲ್ಲಿ ತೆರಬೇಕಾಗಿದೆ. ಹೊಸದಿಲ್ಲಿಯ ಆಶೋಕ ಹೊಟೇಲ್ನಲ್ಲಿ ಲೋಕಪಾಲದ ಕಚೇರಿ ಇದ್ದು, ಅಲ್ಲಿದಂಲೇ ಕೆಲಸ ಕಾರ್ಯಗಳು ನಡೆಯುತ್ತಿದೆ.

ಮಾರ್ಚ್ 22, 2019ರಿಂದ ಅಕ್ಟೋಬರ್ 31ರ ವರೆಗೆ ಸುಮಾರು 3.85 ಕೋಟಿ ರೂ.ಗಳನ್ನು ಕೇವಲ ಅಶೋಕ ಹೊಟೇಲ್ ಒಂದಕ್ಕೆ ಲೋಕಪಾಲದ ಬಾಡಿಗೆ ರೂಪದಲ್ಲಿ ಪಾವತಿಸಲಾಗಿದೆ. ಇದನ್ನು ಉಲ್ಲೇಖೀಸಿ ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಈ ಉತ್ತರ ಲಭಿಸಿದೆ. ಈ ಅವಧಿಯಲ್ಲಿ ಸುಮಾರು 1,160 ದೂರುಗಳು ಲೋಕಪಾಲಕ್ಕೆ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 1000 ದೂರುಗಳ ವಿಚಾರಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next