Advertisement

ಕಾಂಗ್ರೆಸ್‌ ಬಿಡುವ ಯೋಚನೆ ಇದೆ ಬೇರೆ ಪಕ್ಷ ಸೇರಲ್ಲ: ಮಾಲಕರೆಡ್ಡಿ

01:06 PM Nov 12, 2017 | Team Udayavani |

ಕಲಬುರಗಿ: ಇಂದಿನ ರಾಜಕೀಯ ಬೆಳವಣಿಗೆಗಳಿಂದ ಅಸಮಾಧಾನ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ. ಜೊತೆಗೆ ರಾಜಕೀಯದಿಂದಲೇ ನಿವೃತ್ತಿಯಾಗುವ ಬಗ್ಗೆಯೂ ಚಿಂತಿಸುತ್ತಿದ್ದೇನೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಯಾದಗಿರಿ ಶಾಸಕ ಡಾ|ಎ.ಬಿ.ಮಾಲಕರೆಡ್ಡಿ ತಿಳಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ “ಉದಯವಾಣಿ’ ಜತೆ ಮಾತನಾಡಿ, ಕಾಂಗ್ರೆಸ್‌ನಲ್ಲೀಗ ಹಿರಿಯರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಈ ಬಗ್ಗೆ ಈಗಾಗಲೇ ಅನೇಕ ಸಲ ಅಸಮಾಧಾನ ಹೊರ ಹಾಕಿದ್ದೇನೆ. ಆದರೆ, 40 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷದೊಂದಿಗೆ ಬಂದಿದ್ದೇನೆ. ಪಕ್ಷ ಎಲ್ಲವನ್ನೂ ನೀಡಿದೆ. ಹೀಗಾಗಿ ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷ ಸೇರೋದಿಲ್ಲ. ಆದರೆ, ರಾಜಕೀಯದಿಂದ ದೂರ ಇರುವ ನಿಟ್ಟಿನಲ್ಲಿ ನಿವೃತ್ತಿ ಘೋಷಿಸಿ ಸಾಮಾನ್ಯ ನಾಗರಿಕನಾಗಿ ಇರಲು ಬಯಸಿದ್ದೇನೆ.

ಹಾಗಂತ ಈಗಲೇ ಪಕ್ಷ ಬಿಡುತ್ತಿದ್ದೇನೆ, ಬಿಜೆಪಿ ಅಥವಾ ಜೆಡಿಎಸ್‌ ಸೇರ್ತೇನೆ ಎಂಬುದು ಕೇವಲ ಊಹಾಪೋಹ. ಆದರೆ, ಚುನಾವಣೆ ಸಮಯದಲ್ಲಿ ಪಕ್ಷ ಬಿಡುವ ಹಾಗೂ ರಾಜಕೀಯ ನಿವೃತ್ತಿಯಾಗುವ ಬಗ್ಗೆ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಉದ್ದೇಶಿಸಿದ್ದೇನೆ ಎಂದು ಹೇಳಿದರು.

ಅಲ್ಲದೆ, ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಕಾಂಗ್ರೆಸ್‌ ಬಿಡುತ್ತಾರೆ ಎಂಬುದು ಊಹಾಪೋಹ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next