Advertisement

ಜಿಲ್ಲೆಯಲ್ಲಿ ಹೊಸ ಪ್ರಕರಣಗಳಿಗೆ ಬ್ರೇಕ್‌

06:43 PM Apr 11, 2020 | Suhan S |

ತುಮಕೂರು: ಕೋವಿಡ್‌-19 ಮಹಾಮಾರಿ ವ್ಯಾಪಕವಾಗಿ ಎಲ್ಲಾಕಡೆ ಹಬ್ಬುತ್ತಿದೆ ಆರಂಭದಲ್ಲಿ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟು ಇಬ್ಬರಲ್ಲಿ ರೋಗದ ಸೋಂಕು ಕಾಣಿಸಿ ಕೊಂಡಾಗ ಇಡೀ ಜಿಲ್ಲೆ ಬೆಚ್ಚಿ ಬಿದ್ದಿತ್ತು ನಂತರ ಜಿಲ್ಲಾಡಳಿತ ಕೈಗೊಂಡ ಹಲವು ಮುಂಜಾಗ್ರತಾ ಕ್ರಮದಿಂದ ಹೊಸ ಕೋವಿಡ್‌-19 ಪ್ರಕರಣಗಳು ಗೋಚರಗೊಂಡಿಲ್ಲ.

Advertisement

ಜಿಲ್ಲೆಗೆ ವಿದೇಶದಿಂದ 480 ಜನ ಬಂದಿದ್ದರೂ ಕೋವಿಡ್‌-19ರ ಹರಡುವಿಕೆ ನಿಯಂತ್ರಿಸಲು ಸಾಮಾಜಿಕ ಅಂತರ ಮುಖ್ಯ. ಸುರಕ್ಷತಾ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಿಲ್ಲಾ ಆರೋಗ್ಯ ಕಾರ್ಯಪಡೆ ಪ್ರತಿ ದಿನ ಸಭೆ ನಡೆಸಲು ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ವಿದೇಶದಿಂದ ಬಂದವರ ಮೇಲೆ ಮತ್ತು ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮೇಲೆ ನಿಗಾವಹಿಸಿದರು.

ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆ ಮಾಡಿದರು. ಅವರನ್ನು ಹಂತ ಹಂತ ವಾಗಿ ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿತ್ತು, ಅವರಿಗೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದೆಂದು ಜಿಲ್ಲಾಡಳಿತದಿಂದ ಕಟ್ಟು ನಿಟ್ಟಿನ ಸೂಚನೆ ನೀಡಿತ್ತು, ಸಂಶಯವಿರುವವರನ್ನು ಐಸೋಲೇಷನ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಿದರು.

ಈವರೆಗೂ 202 ಜನರ ಗಂಟಲುಸ್ರಾವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 188 ಮಾದರಿಗಳು ನೆಗೆಟಿವ್‌ ಎಂದು ದೃಢಪಟ್ಟಿದೆ. 2 ಪ್ರಕರಣಗಳು ಮಾತ್ರ ಪಾಸಿಟಿವ್‌ ಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. 3 ಮಾದರಿಗಳು ತಿರಸ್ಕೃತಗೊಂಡಿವೆ ಹಾಗೂ ಬಾಕಿ ಇದ್ದ 9 ತಪಾಸಣೆಯ ವರದಿಯೂ ಬಂದಿದ್ದು ಎಲ್ಲವೂ ನೆಗೆಟೀವ್‌ ಎಂದು ವರದಿ ಬಂದಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಆರ್‌.ಚಂದ್ರಿಕಾ.

ಕ್ರಿಮಿ ನಾಶಕ ಸಿಂಪಡನೆ: ನಗರದಲ್ಲಿ ಮಹಾ ನಗರ ಪಾಲಿಕೆ ವತಿಯಿಂದ ಕೋವಿಡ್‌-19 ವೈರಸ್‌ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಮತ್ತು ಶ್ರೀ ಕ್ಷೇತ್ರ ಸಿದ್ಧಗಂಗಾ ಮಠ ಮತ್ತು ಜನ ಹೆಚ್ಚು ಇರುವ ಪ್ರದೇಶಗಳಲ್ಲಿ ಕ್ರಿಮಿನಾಶಕ ಸಿಂಪಡನೆ ಮಾಡಲಾಗಿದೆ.

Advertisement

ದ್ರೋಣ್‌ ಕ್ಯಾಮೆರಾ ಕಣ್ಗಾವಲು: ಜಿಲ್ಲಾದ್ಯಂತ ಲಾಕ್‌ಡೌನ್‌ ವಿಧಿಸಿರುವ ಹಿನ್ನೆಲೆ ನಗರದಲ್ಲಿ ದ್ರೋಣ್‌ ಕ್ಯಾಮೆರಾ ಕಣ್ಗಾವಲನ್ನು ಎಸ್ಪಿ ಡಾ.ಕೊ.ನ.ವಂಸಿಕೃಷ್ಣ ಮಾಡಿದ್ದರು. ನಗರದಲ್ಲಿ ಸುಖಾಸುಮ್ಮನೆ ತಿರುಗಾಡುವವರ ಚಲನ- ವಲನವನ್ನು ಸೆರೆ ಹಿಡಿದು ಕ್ರಮ ಕೈಗೊಂಡು ದ್ವಿಚಕ್ರ ವಾಹನ ವಶಪಡಿಸಿ ಕೊಂಡು ಲಾಕ್‌ ಡೌನ್‌ ಮುಗಿಯುವ ವರೆಗೆ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಸ್ಮಾರ್ಟ್‌ ಸಿಟಿ ಯೋಜನೆಯನ್ನು ಬಳಸಿ ಕೊಂಡಿರುವುದಕ್ಕೆ ಕೇಂದ್ರ ಆರೋಗ್ಯ ಸಚಿವರಿಂದಲೂ ಮೆಚ್ಚುಗೆ ಬಂದಿದೆ. ನಿರಾಶ್ರಿತರಿಗೆ, ವಲಸಿಗರಿಗೆ ಊಟ ವಸತಿಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ.

ಕೋವಿಡ್‌-19ವೈರಸ್‌ ಎಲ್ಲಾ ಕಡೆ ವ್ಯಾಪಕವಾಗಿ ಹರಡುತ್ತಿರುವ ಈವೇಳೆಯಲ್ಲಿ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೆಯೇ ಜಿಲ್ಲೆಯ ಕೆಲ ಜನರು ಅಂತರವಿಲ್ಲದೆ ಓಡಾಡಿದ್ದು ಬಿಟ್ಟರೆ ಎಲ್ಲಾ ಕಡೆ ಸಹಕಾರ ನೀಡಿದ್ದಾರೆ.ಡಾ.ಕೆ.ರಾಕೇಶ್‌ಕುಮಾರ್‌, ಜಿಲ್ಲಾಧಿಕಾರಿ

 

-ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next