Advertisement

ಪೇಜಾವರ ಶ್ರೀ ಮಾರ್ಗದರ್ಶನ ಅವಶ್ಯವಿಲ್ಲ: ಸಚಿವ ವಿನಯ

03:33 PM Oct 20, 2017 | |

ಧಾರವಾಡ: “ಲಿಂಗಾಯತ ಸಮಾಜದ ಬಗ್ಗೆ ನಮಗೆ ಅರಿವಿದೆ. ಪೇಜಾವರ ಶ್ರೀಗಳು ಈ ಸಂಬಂಧ ಪದೇ ಪದೆ ಹೇಳಿಕೆ ನೀಡುವ ಆವಶ್ಯಕತೆ ಇಲ್ಲ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಹೇಳಿದರು.

Advertisement

ನ.5ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಲಿಂಗಾಯತ ರ್ಯಾಲಿಯ ಪೋಸ್ಟರನ್ನು ನಗರದ ಮುರುಘಾ ಮಠದಲ್ಲಿ ಬಿಡುಗಡೆಗೊಳಿಸಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, “ಪೇಜಾವರ ಶ್ರೀಗಳು ಲಿಂಗಾಯತ ಧರ್ಮದ ಬಗ್ಗೆ ಅನಾ ವಶ್ಯಕ ಹೇಳಿಕೆಯಿಂದ ಗೊಂದಲ ಉಂಟು ಮಾಡುತ್ತಿರುವುದು ಸರಿಯಲ್ಲ. ಶ್ರೀಗಳ ಮಾರ್ಗದರ್ಶನದ ಅವಶ್ಯಕತೆ ನಮಗಿಲ್ಲ. ವೀರಶೈವ ಎಂಬುದು ಲಿಂಗಾಯತದ ಒಳ ಪಂಗಡ ಹೊರತು ಪ್ರತ್ಯೇಕ ಧರ್ಮ ವಲ್ಲ. ವೀರಶೈವ ಹಾಗೂ ಲಿಂಗಾಯತ ಒಂದೇ ಆಗಲು ಸಾಧ್ಯವೇ ಇಲ್ಲ. ವೀರಶೈವ ಪದದ ಪ್ರತಿಪಾದಕರು ತಮ್ಮ ಶಾಲೆ ದಾಖಲೆಗಳಲ್ಲಿ ವೀರಶೈವ ಎಂದು ಇದ್ದರೆ ತಂದು ತೋರಿಸಲಿ’ ಎಂದು ಸವಾಲು ಹಾಕಿದರು.

ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, “ಪೇಜಾವರ ಶ್ರೀಗಳ ಬಗ್ಗೆ ಗೌರವವಿದೆ. ಆದರೆ, ಒಂದು ಮತ, ಸಿದ್ಧಾಂತದ ಗುರುಗಳಾಗಿರುವ ಅವರು ಇಡೀ ಸಮಾಜದ ಗುರುಗಳಲ್ಲ. ಲಿಂಗಾಯತ ಪ್ರತ್ಯೇಕ ಧರ್ಮವಾಗಲು ಅದಕ್ಕೆ ತನ್ನದೆ ಆದ ಸಿದ್ಧಾಂತಗಳಿವೆ. ಹೀಗಾಗಿ ಪೇಜಾವರ ಶ್ರೀಗಳ ಮಾರ್ಗದರ್ಶನದ ಆವಶ್ಯಕತೆ ಇಲ್ಲ. ಸತ್ಯದ ಪ್ರತಿಪಾದಕರಾಗಿರುವ ಪೇಜಾವರ ಶ್ರೀಗಳು ಲಿಂಗಾಯತ ಧರ್ಮದ ಸತ್ಯತೆ ಬಗ್ಗೆ ತಿಳಿಸುವ ಕೆಲಸ ಮಾಡಬೇಕೇ ಹೊರತು ಗೊಂದಲ ಸೃಷ್ಟಿಸಬಾರದು. ಲಿಂಗಾ ಯತ ಧರ್ಮದ ಹೋರಾಟಕ್ಕೆ ಬೆಂಬಲ ನೀಡಿ, ಅದಕ್ಕೆ ಒತ್ತಾಯ ವ್ಯಕ್ತಪಡಿಸಬೇಕು. ಇಲ್ಲವೇ ಈ ವಿಷಯದಲ್ಲಿ ತಲೆ ಹಾಕಬಾರದು’  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next