ಎಲ್ಲಿ ನೋಡಿದ್ರೂ ಹುಡ್ಗೀರೇ ಹುಡ್ಗೀರು! ಹಳ್ಳಿಯಲ್ಲಿನ ಪ್ರತಿ ದಂಪತಿಗೂ ಹುಡುಗಿಯೇ! ಹುಡುಗರು ಹುಟ್ಟಿಯೇ ಇಲ್ಲ! ಇದು ಒಂದೆರಡು ವರ್ಷಗಳ ಕಥೆಯಲ್ಲಿ ಬರೋಬ್ಬರಿ 2 ದಶಕಗಳ ಕಥೆ! ಈ ಕಾರಣದಿಂದ ಗಂಡು ಮಗು ಕಾಣದೇ ಗ್ರಾಮಸ್ಥರಿಗೆ ಬೇಜಾರಾಗಿದ್ದು, ಗಂಡು ಮಗು ಇಲ್ಲದೇ ಕೊರಗುತ್ತಿದ್ದಾರೆ. ಇನ್ನಾದರೂ ಇಲ್ಲೊಂದು ಮನೆಯಲ್ಲಿ ಗಂಡು ಮಗು ಆಗಲಿ ಎಂದು ಗ್ರಾಮಸ್ಥರ ಆಸೆಯಂತೆ.
ಅಂದಹಾಗೆ ಇಂತಹದ್ದೊಂದು ವಿಚಿತ್ರ ಸಮಸ್ಯೆ ಹೊಂದಿರುವ ಗ್ರಾಮದ ಹೆಸರು ಮಿಜೆಸ್ ಆರ್ಡ್‌ಝಾನ್ಸೆ. ಇದು ಪೋಲಂಡ್ ದೇಶದ ಒಂದು ಊರು. ಇಲ್ಲಿ ಗಂಡು ಮಕ್ಕಳು ಹುಟ್ಟದೇ ಇರುವುದರಿಂದ ಕೃಷಿ ಕಾರ್ಯಕ್ಕೆ, ಹೆಚ್ಚು ಶ್ರಮದ ಕೆಲಸಕ್ಕೆ ತೊಂದರೆಯಾಗುತ್ತಿದೆಯಂತೆ. ಆದರೂ ಎಲ್ಲವನ್ನೂ ಹೆಣ್ಮಕ್ಕಳೇ ನಿಭಾಯಿಸಿ ಭೇಷ್ ಎನಿಸಿಕೊಂಡಿದ್ದಾರಂತೆ. ಹಾಂ! ಈಗ ಮತ್ತೆ ಗಂಡು ಮಗು ವಿಷ್ಯಕ್ಕೆ ಬರೋಣ. ಗಂಡು ಮಗು ಯಾವುದಾದರೂ ದಂಪತಿಗೆ ಹುಟ್ಟಿದರೆ, ಆ ಮಗುವಿನ ಹೆಸರು ಇಲ್ಲಿನ ಪ್ರಮುಖ ರಸ್ತೆಯೊಂದಕ್ಕೆ ಇಡುವುದಾಗಿ ಇಲ್ಲಿನ ಮೇಯರ್ ಹೇಳಿದ್ದಾರಂತೆ.
ಇಲ್ಲಿ ಗಂಡು ಮಗು ಆಗದೇ ಇರುವುದಕ್ಕೆ ಕಾರಣ ಏನು ಎಂಬುದು ವೈದ್ಯಕೀಯ ವಿಜ್ಞಾನಿಗಳಿಗೂ ಕುತೂಹಲ ಮೂಡಿಸಿದೆ. ಅವರಲ್ಲಿ ಕೆಲವರು ಊರಿನ ದಂಪತಿ ಹೆಚ್ಚು ಕ್ಯಾಲಿÒಯಮ್ ಇರುವ ಆಹಾರ ಸೇವಿಸಬೇಕು ಎಂದು ಹೇಳಿದ್ದಾರಂತೆ. ಸದ್ಯ ಇಲ್ಲಿ 300 ಮಂದಿಯಿದ್ದು, ಗ್ರಾಮದ ಪ್ರತಿಯೊಂದು ಹುದ್ದೆ, ಕೆಲಸದಲ್ಲೂ ಮಹಿಳೆಯರೇ ಇದ್ದಾರೆ.