Advertisement
ಮಹಾರಾಷ್ಟ್ರ ಸಹಿತ ಶೇ.90ರಷ್ಟು ಕನ್ನಡಿಗರು ವಾಸವಿರುವ ಆರು ರಾಜ್ಯಗಳ ಗಡಿಗಳಲ್ಲಿ ಮಾತೃ ಭಾಷೆ ಕನ್ನಡವಾಗಿದೆ. ಆದರೆ ಅಲ್ಲಿ ಒಂದೇ ಒಂದು ಕನ್ನಡ ಅಂಗನವಾಡಿ ಕೇಂದ್ರಗಳಿಲ್ಲ. ಪರಿಣಾಮ ಮಾತೃಭಾಷೆ ಕಲಿಕೆಗೆ ಅಲ್ಲಿ ಅವಕಾಶವೇ ಇಲ್ಲವಾಗಿದೆ.
“ಮಹಾರಾಷ್ಟ್ರ ಮಾತ್ರವಲ್ಲ, ಆಂಧ್ರಪ್ರದೇಶದ ಮೆಹಬೂಬನಗರ, ರಾಯದುರ್ಗ, ಗೋವಾ ಪಟ್ಟಣ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ತಳವಾಡಿ, ನೀಲಗಿರಿ ಸಹಿತ ಹಲವು ತಾಲೂಕುಗಳಲ್ಲೂ ಒಂದೇ ಒಂದು ಕನ್ನಡ ಅಂಗನವಾಡಿ ಕೇಂದ್ರಗಳಿಲ್ಲ. ಮನೆಯಲ್ಲಿ ಕನ್ನಡ ಕಲಿತು 3ನೇ ವರ್ಷಕ್ಕೆ ಅಂಗನವಾಡಿಗೆ ಬರುವ ಮಗುವಿಗೆ ತನಗೆ ತಿಳಿಯದ ಭಾಷೆ ಕಲಿಯಬೇಕಿದೆ. ಹೇಗೋ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಬಂದರೆ, ಪ್ರೌಢಶಾಲೆಯಲ್ಲಿ ಮತ್ತದೇ ಸಮಸ್ಯೆ ಎದುರಿಸಬೇಕಿದೆ. ಈ ಬಗ್ಗೆ ಆಯಾ ರಾಜ್ಯಗಳ ಸರಕಾರಕ್ಕೆ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಕರ್ನಾಟಕ ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ’ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ತಿಳಿಸುತ್ತಾರೆ.
Related Articles
Advertisement
ಸಂವಿಧಾನದಲ್ಲೇ ನಿರ್ದೇಶನಭಾಷಾ ಅಲ್ಪಸಂಖ್ಯಾಕರಿಗೆ ಅವರ ಮಾತೃ ಭಾಷೆಯಲ್ಲಿ ಕಲಿಕೆಗೆ ಅವಕಾಶ ಸಹಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಂವಿ ಧಾನದ ಕಲಂ 29ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಬಗ್ಗೆ ಕೇಂದ್ರದ ಗೃಹ ಸಚಿವಾಲಯದ ಭಾಷಾ ಅಲ್ಪಸಂಖ್ಯಾಕರ ವಿಭಾಗವೂ ನಿರ್ದೇಶನ ಕೂಡ ನೀಡಿದೆ. ಅದ್ಯಾವುದೂ ಪ್ರಯೋಜನವಾಗಿಲ್ಲ. ಮಹಾರಾಷ್ಟ್ರ – ಕರ್ನಾಟಕ ಗಡಿ ಭಾಗದಲ್ಲಿ ಕನ್ನಡ ಕಲಿಯಲು ಅವಕಾಶ ಇಲ್ಲದಿರುವುದರಿಂದ ಕನ್ನಡ ಕಳೆದುಹೋಗುತ್ತಿದೆ ಎಂದು ಸೊಲ್ಲಾಪುರದ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕ್‌ಜಾನ್ ಶೇಖ್ ಕಳವಳ ವ್ಯಕ್ತಪಡಿಸುತ್ತಾರೆ. - ವಿಜಯಕುಮಾರ ಚಂದರಗಿ