Advertisement

“ಕಡತಗಳ ಶಾಸ್ತ್ರಿ’ಖ್ಯಾತಿಯ ಅನಂತ ಕೃಷ್ಣ ಶಾಸ್ತ್ರಿ ಇನ್ನಿಲ್ಲ

10:40 PM Jan 04, 2020 | Lakshmi GovindaRaj |

ಶಿರಸಿ: ಪ್ರಸಿದ್ಧ ಇತಿಹಾಸ ತಜ್ಞ, ತಾಳೆಗರಿಗಳ ಸಂಶೋಧಕ, ಕಡತಗಳ ಶಾಸ್ತ್ರಿ ಎಂದೇ ಹೆಸರಾಗಿದ್ದ ಇಲ್ಲಿನ ಅನಂತ ಕೃಷ್ಣ ಶಾಸ್ತ್ರಿ (80) ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು. 15ರಿಂದ 19ನೇ ಶತಮಾನದ ತನಕ ಮೋಡಿಲಿಪಿಯಲ್ಲಿರುವ ಕಡತಗಳನ್ನು ಅಧ್ಯಯನ ಮಾಡಿದ್ದ ಇವರು, ರಾಜ್ಯದ ಪ್ರಮುಖ ಇತಿಹಾಸಕಾರ ಹಾಗೂ ಸಂಶೋಧಕರಾಗಿ ಗುರುತಿಸಿ ಕೊಂಡಿದ್ದರು. ಸಾರಸ್ವತ ಲೋಕಕ್ಕೆ 30ಕ್ಕೂ ಹೆಚ್ಚು ಅಮೂಲ್ಯ ಕೃತಿ ನೀಡಿದ್ದರು.

Advertisement

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಮಾಡಿದ ನಂತರ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಶಾಸ್ತ್ರಿಗಳು, ಕವಿವಿಯಿಂದ ಶೃಂಗೇರಿ ಮಠದ ಚರಿತ್ರೆ ಮೇಲೆ ಪಿಎಚ್‌ಡಿ ಪಡೆದಿದ್ದರು. ಸ್ವರ್ಣವಲ್ಲೀ, ಇಡಗುಂಜಿ ಸೇರಿ ಪೌರಾಣಿಕ, ಧಾರ್ಮಿಕ ಕ್ಷೇತ್ರಗಳ ಅಧ್ಯಯನ ಮಾಡಿದ್ದರು. ಅವರಿಗೆ ಅನೇಕ ಪ್ರಶಸ್ತಿ-ಪುರಸ್ಕಾರ ದೊರೆತಿದ್ದವು. ಶೋಕ: ಎ.ಕೆ.ಶಾಸ್ತ್ರಿಗಳ ನಿಧನಕ್ಕೆವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ದಂಟ್ಕಲ್‌ ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next