Advertisement

ಪರ್ತ್‌ನಲ್ಲಿ ಭಾರತ-ಆಸ್ಟ್ರೇಲಿಯ ಪಂದ್ಯವಿಲ್ಲ

06:14 PM Sep 07, 2020 | mahesh |

ಮೆಲ್ಬರ್ನ್: ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ಕ್ರಿಕೆಟ್‌ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ಕ್ವಾರಂಟೈನ್‌ ಬಿಸಿ ತೀವ್ರವಾಗಿಯೇ ತಟ್ಟಲಿದೆ. ಹೀಗಾಗಿ ಪರ್ತ್‌ ಬದಲು ಅಡಿಲೇಡ್‌ ಅಥವಾ ಬ್ರಿಸ್ಬೇನ್‌ನಲ್ಲಿ ಈ ಸರಣಿ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.

Advertisement

ವೆಸ್ಟರ್ನ್ ಆಸ್ಟ್ರೇಲಿಯದಲ್ಲಿ ಕೋವಿಡ್‌-19 ಕ್ವಾರಂಟೈನ್‌ ನಿಯಮ ಆಸ್ಟ್ರೇಲಿಯದ ಉಳಿದೆಲ್ಲ ಪ್ರಾಂತ್ಯಗಳಿಗಿಂತ ಹೆಚ್ಚು ಕಟ್ಟುನಿಟ್ಟಿನಿಂದ ಕೂಡಿದೆ. ಇದನ್ನು ಯಾವುದೇ ಕಾರಣಕ್ಕೆ ಸಡಿಲಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ. ಹೀಗಾಗಿ ಇದರ ರಾಜಧಾನಿಯಾದ ಪರ್ತ್‌ನಲ್ಲಿ ಈ ಸರಣಿಯ ಪಂದ್ಯ ನಡೆಯುವ ಸಾಧ್ಯತೆ ದೂರವಾಗಿದೆ.

ಒಂದು ವೇಳೆ ಮೆಲ್ಬರ್ನ್ನಲ್ಲಿ “ಬಾಕ್ಸಿಂಗ್‌ ಡೇ ಟೆಸ್ಟ್‌’ ನಡೆಯದೇ ಹೋದರೆ ಆಗ ಇದನ್ನು ಪರ್ತ್‌ನಲ್ಲಿ ಆಯೋಜಿಸುವುದು ಆಸ್ಟ್ರೇಲಿಯದ ಯೋಜನೆಯಾಗಿತ್ತು. ಆದರೀಗ ಅಡಿಲೇಡ್‌ ಓವಲ್‌ ಸತತ ಎರಡು ಟೆಸ್ಟ್‌ ಪಂದ್ಯಗಳಿಗೆ ಅಣಿಯಾಗಬೇಕಿದೆ. ಡೇ-ನೈಟ್‌ ಟೆಸ್ಟ್‌ ಪಂದ್ಯದ ಬಳಿಕ ಅದು ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನೂ ಆಯೋಜಿಸಬೇಕಾಗಬಹುದು.

ಪರ್ತ್‌ನಲ್ಲಿ ಅಭ್ಯಾಸವೂ ಇಲ್ಲ
ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ಕೆಲವು ಆಟಗಾರರು ಐಪಿಎಲ್‌ ಮುಗಿಸಿ ನೇರವಾಗಿ ಯುಎಇಯಿಂದ ಕಾಂಗರೂ ನಾಡಿಗೆ ಬಂದಿಳಿಯಲಿವೆ. ಯುಎಇಯಲ್ಲಿ ಮತ್ತೂಂದು ಸುತ್ತಿನ ಕೋವಿಡ್‌-19 ಕೇಸ್‌ಗಳು ಕಂಡುಬರುತ್ತಿರುವುದರಿಂದ ಅಪಾಯ ಹೆಚ್ಚು ಎಂಬುದಾಗಿ ವೆಸ್ಟರ್ನ್ ಆಸ್ಟ್ರೇಲಿಯದ ಪ್ರೀಮಿಯರ್‌ ಮಾರ್ಕ್‌ ಮೆಕ್‌ಗೋವನ್‌ ಅಭಿಪ್ರಾಯಪಟ್ಟಿದ್ದಾರೆ.

ಎರಡೂ ತಂಡಗಳಿಗೆ ಪರ್ತ್‌ನಲ್ಲಿ ಕ್ವಾರಂಟೈನ್‌ ನಡೆಸಿ, ಅಭ್ಯಾಸ ಆಯೋಜಿಸಿ ಇಲ್ಲಿಂದ ಉಳಿದ ಪ್ರಾಂತ್ಯಗಳಿಗೆ ಸರಣಿಯನ್ನಾಡಲು ಕಳುಹಿಸುವುದು ಕ್ರಿಕೆಟ್‌ ಆಸ್ಟ್ರೇಲಿಯದ ಯೋಜನೆಯಾಗಿತ್ತು. ಸರಣಿಯ ನೂತನ ವೇಳಾಪಟ್ಟಿ ಈ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next