Advertisement

ಪಾಕ್‌ಗೆ ಸದ್ಯಕ್ಕಿಲ್ಲ IMF ನೆರವು!: ಬಜೆಟ್‌ ಅಂಶಗಳ ಬಗ್ಗೆ ಹಲವು ತಕರಾರು

10:03 PM Jun 15, 2023 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ದಿವಾಳಿಯಂಚಿನಲ್ಲಿರುವ ಪಾಕಿಸ್ತಾನದ ಸ್ಥಿತಿ ಸದ್ಯಕ್ಕೆ ದುರಸ್ತಿಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ವಾರವಷ್ಟೇ ಮಂಡಿಸಲಾಗಿದ್ದ 14.4 ಟ್ರಿಲಿಯನ್‌ ಪಾಕಿಸ್ತಾನಿ ರೂ.ಗಳ ಬಜೆಟ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಕರಾರು ತೆಗೆದಿದೆ. ಆದರೆ, ಪಾಕಿಸ್ತಾನಕ್ಕೆ ಬೇಕಾಗಿರುವ ನೆರವು ನೀಡುವುದಾಗಿಯೂ ಹೇಳಿದೆ.

Advertisement

ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ಲಾಮಾಬಾದ್‌ನಲ್ಲಿರುವ ಐಎಂಎಫ್ ಪ್ರತಿನಿಧಿ ಏಸ್ತರ್‌ ಪರೇಜ್‌ ರೂಯಿಜ್‌ ಹೊಸತಾಗಿ ಪಾಕ್‌ ಸರ್ಕಾರ ಪರಿಚಯಿಸಿರುವ ತೆರಿಗೆ ಕ್ಷಮಾದಾನ ಯೋಜನೆ ಕೆಟ್ಟ ಉದಾಹರಣೆಯಾಗಿದೆ ಎಂದಿದ್ದಾರೆ. ತೆರಿಗೆ ನೆಲೆಯನ್ನು ಇನ್ನಷ್ಟು ವಿಸ್ತೃತಗೊಳಿಸುವ ಅವಕಾಶವನ್ನು ಈ ಬಜೆಟ್‌ ಕಳೆದುಕೊಂಡಿದೆ. ಹಾಗೆಯೇ ಹೊಸ ತೆರಿಗೆ ವೆಚ್ಚಗಳ ದೀರ್ಘ‌ಪಟ್ಟಿಯು, ತೆರಿಗೆ ಪದ್ಧತಿಯಲ್ಲಿ ಕ್ರಮಬದ್ಧತೆ ತರುವ ಅವಕಾಶವನ್ನು ಇಲ್ಲ ಮಾಡಿದೆ ಎಂದು ಹೇಳಿದ್ದಾರೆ. ಇಷ್ಟರ ನಡುವೆಯೂ ಪಾಕ್‌ ಸರ್ಕಾರಕ್ಕೆ ಬಜೆಟ್‌ ಪರಿಷ್ಕರಣೆ ಮಾಡಲು ನೆರವು ನೀಡುವುದಾಗಿ ಐಎಂಎಫ್ ಹೇಳಿದೆ. ಅಲ್ಲಿಗೆ ಪಾಕ್‌ಗೆ ಹಣ ಸದ್ಯಕ್ಕಂತೂ ಸಿಗುವುದಿಲ್ಲ ಎಂದು ಖಾತ್ರಿಯಾಗಿದೆ.

ಐಎಂಎಫ್ ಪಾಕಿಸ್ತಾನ ಪ್ರತಿನಿಧಿ ಎಸ್ತರ್‌ ಪೆರೆಜ್‌ ರೂಯಿಜ್‌ ಬಜೆಟ್‌ ಮಂಡನೆಗೆ ಹಿಂದಿನ ದಿನವೇ, ಪಾಕ್‌ ಸರ್ಕಾರ ಮೂರು ವಿಷಯಗಳಲ್ಲಿ ಐಎಂಎಫ್ ಅನ್ನು ಸಮಾಧಾನಪಡಿಸಬೇಕಾಗಿದೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next