Advertisement
ಅಮ್ಮ ಎಂದರೆ ಏನೋ ಉಲ್ಲಾಸ ಹೊಸ ಹರುಷ. ಅಮ್ಮ ಕಣ್ಣಿಗೆ ಕಾಣದಿದ್ದರೆ ಏನೋ ಕಳೆದುಕೊಂಡ ಅನುಭವ. ಅಮ್ಮ ನೀನಿರು ಜತೆಗೆ ಜಗವ ಗೆಲ್ಲುವೇ? ತಾಯಿಯ ಪ್ರೀತಿ ಪಡೆಯೋಕೆ ಏಳೇಳು ಜನ್ಮದ ಪುಣ್ಯ ಮಾಡಿರಬೇಕು. ತಾಯಿಯ ಕೈ ರುಚಿಗೆ ಸರಿಸಾಟಿ ಇನ್ಯಾವ ರುಚಿ?
Related Articles
Advertisement
ತಾಯಿಗೆ ಎಲ್ಲವನ್ನೂ ಸಹಿಸುವ ಶಕ್ತಿ ಇದೆ. ತನ್ನ ಮಕ್ಕಳಿಗೆ ಪ್ರೀತಿಯನ್ನು ಧಾರೆ ಎರೆಯುತ್ತಾಳೆ. ಸ್ವಾರ್ಥವಿಲ್ಲದ ಸಹನೆ ಕರುಣೆಯ ಮಮತೆಯ ಮಹಾಮೂರ್ತಿ ಅಮ್ಮ. ಅಮ್ಮ ಬೇಸರದಲ್ಲೊ ಅಸಮಧಾನದಲ್ಲಿ ಒಮ್ಮೊಮ್ಮೆ ಅಡುಗೆ ಮಾಡಿದಾಗ ರುಚಿಕರವಿರುವುದಿಲ್ಲ. ಹಾಗೆಂದು ಅವಳ ಮುಂದೆ ಹೇಳಿದಾಗ ಎಷ್ಟು ಮನಸು ನೊಂದುಕೊಳ್ಳುತ್ತದೆ ಬಡಜೀವ ಅಲ್ವಾ?ತಾಯಿಯು ಅಡುಗೆ ಮಾಡುವಾಗ ಕರ್ತವ್ಯ ಎಂದು ಮಾಡುವುದಿಲ್ಲ. ಪ್ರೀತಿ ಧಾರೆಯೆರೆದು ಬಹು ಕಾಳಜಿಯ ಮಹಾಪೂರ ಹರಿಸಿ ಮಾಡುತ್ತಾಳೆ. ಅದಕ್ಕೆ ಅವಳಿಗೆ ಚೆನ್ನಾಗಿಲ್ಲ ಎಂದರೆ ನೋವಾಗುವುದು. ಅಮ್ಮ ಮಾಡಿದ ಅಡುಗೆ ರುಚಿಕರವಿಲ್ಲದಿದ್ದರೆ ರುಚಿಯಾಗಿದೆ ಎಂದು ಹೇಳಿಬಿಡಿ ಅವಳ ಮುಖದಲ್ಲಿ ಒಂದು ಕಿರುನಗೆ ಎಷ್ಟು ಸಮಾಧಾನ ಅನಿಸುತ್ತೆ ಗೊತ್ತಾ?
ಅಮ್ಮನ ಕೈ ರುಚಿ ಹಿತವೇ. ಏಕೆಂದರೆ ಅಮ್ಮನ ಕೈರುಚಿಯಲ್ಲಿ ಪ್ರೀತಿ, ಮಮತೆ, ಬಾಂಧವ್ಯದ ಸವಿಜೇನು ಇದೆ. ಅಮ್ಮನ ಪ್ರೀತಿ ವರ್ಣಿಸಲು ಪದಗಳೇ ಸಾಲದು.
-ವಾಣಿ
ಮೈಸೂರು