Advertisement
ಅದರ ಬೆನ್ನಲ್ಲೇ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳನ್ನೂ ಶಸ್ತ್ರಸಜ್ಜಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಇದುವರೆಗೆ ಇನ್‌ಸ್ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಮತ್ತು ಅವರಿಗಿಂತ ಮೇಲಾಧಿಕಾರಿಗಳಿಗೆ ಮಾತ್ರ ಸೀಮಿತವಾಗಿದ್ದ ರಿವಾಲ್ವರ್ ಹಾಗೂ ಪಿಸ್ತೂಲ್ ಸಹಾಯಕ ಸಬ್ ಇನ್‌ಸ್ಪೆಕ್ಟರ್(ಎಎಸ್‌ಐ)ಗಳಿಗೂ ನೀಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿರುವ 500ಕ್ಕೂ ಹೆಚ್ಚು ಮಂದಿ ಎಎಸ್‌ಐಗಳಿಗೆ ಈಗಾಗಲೇ ನಗರ ಸಶಸ್ತ್ರ ಪಡೆ (ಸಿಎಆರ್)ಯಲ್ಲಿ ಪಿಸ್ತೂಲ್ ಹಾಗೂ ರಿವಲ್ವಾರ್ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.
Related Articles
Advertisement
45ಕ್ಕೂ ಹೆಚ್ಚು ಮಂದಿಗೆ ರಿವಾಲ್ವರ್ ವಿತರಣೆ: ಈಗಾಗಲೇ ತರಬೇತಿ ಪಡೆದಿರುವ 500ಕ್ಕೂ ಹೆಚ್ಚು ಮಂದಿ ಎಎಸ್‌ಐಗಳ ಪೈಕಿ 45ಕ್ಕೂ ಹೆಚ್ಚು ಮಂದಿಗೆ ಪಿಸ್ತೂಲ್ ಅಥವಾ ರಿವಾಲ್ವಾರ್ ವಿತರಣೆ ಮಾಡಲಾಗಿದೆ. ಹಂತ-ಹಂತವಾಗಿ ಇನ್ನುಳಿದ ಎಲ್ಲ ಎಎಸ್‌ಐಗಳಿಗೆ ಸದ್ಯದಲ್ಲೇ ವಿತರಿಸಲಾಗುವುದು. ತನಿಖೆ ಉದ್ದೇಶದಿಂದ ಬೇರೆ ಕಡೆ ಹೋಗುವಾಗ ಹಾಗೂ ಬೀಟ್ ವೇಳೆ ಕಡ್ಡಾಯವಾಗಿ ಪಿಸ್ತೂಲ್ ಅಥವಾ ರಿವಾಲ್ವಾರ್ ಕೊಂಡೊಯ್ಯುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತ್ಮಸ್ಥೈರ್ಯ ಹೆಚ್ಚಿದೆ: ಎಎಸ್‌ಐಗಳಿಗೂ ಪಿಸ್ತೂಲ್ ಹಾಗೂ ರಿವಲ್ವಾರ್ ತರಬೇತಿ ಕೊಡುತ್ತಿರುವುದಕ್ಕೆ ತುಂಬ ಖುಷಿಯಾಗಿದೆ. ಇಲಾಖೆಗೆ ಸೇರುವಾಗಲೇ ನಾವು 302 ರೈಫಲ್ ತರಬೇತಿ ಪಡೆದಿರುತ್ತೇವೆ. ಹೀಗಾಗಿ ರಿವಲ್ವಾರ್ ಹಾಗೂ ಪಿಸ್ತೂಲ್ ತರಬೇತಿ ಹೆಚ್ಚು ಕಷ್ಟವಾಗುವುದಿಲ್ಲ. ಈ ಹಿಂದೆ ಪ್ರಕರಣಗಳ ತನಿಖೆಗಾಗಿ ಬೇರೆ ಬೇರೆ ಕಡೆ ಹೋಗುವಾಗ ಆತಂಕ ಇತ್ತು. ಇದೀಗ ರಿವಲ್ವಾರ್ ವಿತರಣೆ ಮಾಡಿರುವುದು ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದು ಹೆಸರೆಳಲಿಚ್ಛಿಸದ ಎಎಸ್‌ಐ ಒಬ್ಬರು ಹೇಳಿದರು.
500 ಮಂದಿಗೆ ತರಬೇತಿ: ಈಗಾಗಲೇ ನಗರದ ಎಲ್ಲ ಠಾಣೆಗಳಲ್ಲಿರುವ ಸುಮಾರು 500ಕ್ಕೂ ಹೆಚ್ಚು ಮಂದಿ ಎಎಸ್‌ಐಗಳಿಗೆ ಎರಡು ಹಂತಗಳಲ್ಲಿ ರಿವಾಲ್ವರ್ ಬಳಕೆ ಕುರಿತು ತರಬೇತಿ ನೀಡಲಾಗಿದೆ. ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಪಡೆಯ(ಸಿಎಆರ್) ಸಣ್ಣ ಶಸ್ತ್ರಾಸ್ತ್ರ ವಿಭಾಗದ ಅಧಿಕಾರಿಗಳು ಇಲ್ಲಿರುವ ಒಳಾಂಗಣದಲ್ಲಿ ಪಿಸ್ತೂಲ್ ಮತ್ತು ರಿವಲ್ವಾರ್‌ಗಳ ಬಳಕೆ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡುತ್ತಿದ್ದಾರೆ. ರಿವಲ್ವಾರ್‌ಗೆ ಗುಂಡುಗಳನ್ನು ಹೇಗೆ ತುಂಬುವುದು? ಪಿಸ್ತೂಲ್‌ಗಳಿಗೆ ಮ್ಯಾಗಜಿನ್‌ಗಳನ್ನು ಹೇಗೆ ಭರ್ತಿ ಮಾಡಬೇಕು. ಜತೆಗೆ ಪಿಸ್ತೂಲ್‌ನಲ್ಲಿರುವ ಆಟೊ ಫೈರಿಂಗ್ ಹಾಗೂ ಮಾನವ ಚಾಲಿತ ಫೈರಿಂಗ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಈಗಾಗಲೇ ಸಣ್ಣ-ಪುಟ್ಟ ಪ್ರಕರಣಗಳನ್ನು ಎಎಸ್‌ಐಗಳೇ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಪೆಟ್ರೋಲಿಂಗ್ ಹೋಗುವ ವೇಳೆ ಆತ್ಮರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇವರಿಗೆ ಪಿಸ್ತೂಲ್ ಹಾಗೂ ರಿವಾಲ್ವಾರ್ ತರಬೇತಿ ನೀಡಲಾಗಿದ್ದು, ಶೀಘ್ರದಲ್ಲಿಯೇ ಎಲ್ಲ ಎಎಸ್‌ಐಗಳಿಗೆ ವಿತರಿಸಲಾಗುವುದು.-ಟಿ. ಸುನಿಲ್ ಕುಮಾರ್, ನಗರ ಪೊಲೀಸ್ ಆಯುಕ್ತ * ಮೋಹನ್ ಭದ್ರಾವತಿ