Advertisement

ಬೀಜಾಡಿ ಅಂಗನವಾಡಿಯಲ್ಲಿ ಪೂರ್ಣಕಾಲಿಕ ಶಿಕ್ಷಕಿಯಿಲ್ಲ

06:00 AM Jun 05, 2018 | Team Udayavani |

ಕುಂದಾಪುರ: ಬೀಜಾಡಿ ಗ್ರಾಮದ ಬ್ಯಾಲೆಹಿತ್ಲು -1 ಅಂಗನವಾಡಿಯಲ್ಲಿ ಕಳೆದ 10 ತಿಂಗಳಿನಿಂದ ಶಿಕ್ಷಕಿಯಿಲ್ಲ.ಐದು ಅಂಗನವಾಡಿ ಬೀಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಅಂಗನವಾಡಿಗಳಿವೆ. ಸುಮಾರು 1 ಸಾವಿರ ಜನಸಂಖ್ಯೆ ಇದ್ದು ಗ್ರಾಮದ ಬೇಡಿಕೆಯಂತೆ ಅಂಗನವಾಡಿಯಿದೆ. ಬ್ಯಾಲೆಹಿತ್ಲು ಅಂಗನವಾಡಿಯಲ್ಲಿ 25 ಮಕ್ಕಳಿದ್ದಾರೆ. ಕಳೆದ ವರ್ಷ 35 ಮಕ್ಕಳಿದ್ದು ಈ ವರ್ಷ 13 ಮಂದಿ ಶಾಲೆಗೆ ಸೇರ್ಪಡೆಯಾಗಿದ್ದಾರೆ.

Advertisement

ಎಲ್ಲ ಸೌಲಭ್ಯಗಳಿವೆ
ಬ್ಯಾಲೆಹಿತ್ಲು ಅಂಗನವಾಡಿಯಲ್ಲಿ ಎಲ್ಲ ಸೌಲಭ್ಯಗಳಿವೆ. ಊರವರ ವತಿಯಿಂದ ಅಂಗಳಕ್ಕೆ ಇಂಟರ್‌ಲಾಕ್‌, ಜಾರುಬಂಡಿ ಮಾಡಿಕೊಡಲಾಗಿದೆ. ಕಂಪೌಂಡ್‌ ಗೋಡೆಯ ನಿರ್ಮಾಣ ತಾ. ಪಂ. ಅನುದಾನದಲ್ಲಿ ನಡೆದಿದೆ.  

ಪ್ರತಿದಿನ ಮಕ್ಕಳಿಗೆ ಊಟಕ್ಕೆ ತರಕಾರಿಯನ್ನು ಊರವರೇ ಪೂರೈಸುತ್ತಿದ್ದಾರೆ. ಸಮೀಪದ ಒಂದು ಹೋಟೆಲ್‌ನವರು ಪ್ರತಿ ವಾರ ತರಕಾರಿ ತಂದು ಕೊಡುತ್ತಾರೆ. ಜತೆಗೆ ಐದು ಸೆಂಟ್ಸ್‌ ಜಾಗ ಹೊಂದಿದ ಸುಸಜ್ಜಿತ ಕಟ್ಟಡ ಹೊಂದಿದ ಈ ಅಂಗನವಾಡಿಯ ಜಾಗದಲ್ಲಿ ಕೃಷಿ ಮಾಡಲಾಗುತ್ತಿದ್ದು ನುಗ್ಗೆಕಾಯಿ ಬೆಳೆದಿದೆ.

ಶಿಕ್ಷಕಿಯಿಲ್ಲ
ಈ ಅಂಗನವಾಡಿಯಲ್ಲಿ ಕಳೆದ ಆಗಸ್ಟ್‌ನಿಂದ ಶಿಕ್ಷಕಿಯಿಲ್ಲ. ಇದ್ದ ಶಿಕ್ಷಕಿ ಯಾವುದೋ ಕಾರಣದಿಂದ ಗೈರಾಗಿದ್ದಾರೆ. ಸಮೀಪದ ಇತರ 4 ಅಂಗನವಾಡಿಗಳಿಂದ ವಾರಕ್ಕೆ ಮೂರು ದಿನದಂತೆ ಶಿಕ್ಷಕಿ ನಿಯೋಜನೆ ಮೇಲೆ ಬರುತ್ತಿದ್ದಾರೆ. ಆದರೆ ಆಗ ಅವರ ಅಂಗನವಾಡಿಯಲ್ಲಿ ಶಿಕ್ಷಕಿ ಇಲ್ಲದಂತಾಗುತ್ತದೆ. ಶಿಕ್ಷಕಿ ಇಲ್ಲದಿದ್ದರೂ ಆ ಕೊರತೆ ಆಗದಂತೆ ಆಯಾ ನೋಡಿಕೊಳ್ಳುತ್ತಿದ್ದಾರೆ. ಆದರೆ ಇಲಾಖೆ ವತಿಯಿಂದ ಮಾಡಬೇಕಾದ ಅನೇಕ ಕಾರ್ಯಗಳನ್ನು , ದಾಖಲೆಗಳನ್ನು ಅಂಗನವಾಡಿ ಕಾರ್ಯಕರ್ತೆಯರೇ ಮಾಡಬೇಕಾಗುತ್ತದೆ. ಜತೆಗೆ ಮಕ್ಕಳಿಗೆ ಒಂದಷ್ಟಾದರೂ ಪ್ರಾಥಮಿಕ ತರಬೇತಿ, ಪೂರ್ವ ಪ್ರಾಥಮಿಕ ಹಂತದ ಶಿಕ್ಷಣ, ಆಟ, ಮನರಂಜನಾ ತರಬೇತಿಗೆ ಶಿಕ್ಷಕಿ ಬೇಕಾಗುತ್ತದೆ. ಇಲ್ಲಿರುವ ಮಕ್ಕಳಿಗೆ ಪೂರ್ಣಕಾಲಿಕ ಶಿಕ್ಷಕಿಯ ಕೊರತೆ ಕಾಡುತ್ತಿದೆ. ಊರವರ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.

ಅಂತಿಮ ನೊಟೀಸ್‌ ಜಾರಿ
ಕಳೆದ ಆಗಸ್ಟ್‌ನಿಂದ ಈ ವರೆಗೆ ಅನಧಿಕೃತ ಗೈರು ಹಾಜರಾದ ಕಾರಣ ಜೂ. 5ರ ಒಳಗೆ ಉತ್ತರಿಸುವಂತೆ ಅಂತಿಮ ನೊಟೀಸ್‌ ಕೊಡಲಾಗಿದೆ. ಇದಕ್ಕೆ ಉತ್ತರಿಸದಿದ್ದರೆ ಅವರನ್ನು ಕೆಲಸದಿಂದ ತೆಗೆಯಲು ಡಿಸಿಯವರಿಗೆ ಶಿಫಾರಸ್ಸು ಮಾಡಿ ಬೇರೆ ಕಾರ್ಯಕರ್ತೆಯನ್ನು ನೇಮಿಸಲಾಗುವುದು.
– ನಿರಂಜನ ಭಟ್‌,ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ 

Advertisement

ನೇಮಿಸಿಲ್ಲ
ಅನೇಕ ಬಾರಿ ಶಿಕ್ಷಕಿ ಬೇಕೆಂದು ಬೇಡಿಕೆ ಇಟ್ಟಿದ್ದೇವೆ. ಸಭೆ ಮಾಡಿ ಶಿಕ್ಷಕಿ ಒದಗಿಸುವ ಭರವಸೆ ಮಾತ್ರ ದೊರೆತಿದ್ದು ಪೂರ್ಣಕಾಲಿಕ ಶಿಕ್ಷಕಿ ನೇಮಕವಾಗಿಲ್ಲ. ನಾನು ಮಗಳ ಮಗನನ್ನು ಕರೆತರುತ್ತೇನೆ ಇಲ್ಲಿಗೆ. ನಾನು ಗಮನಿಸಿದ ಮಟ್ಟಿಗೆ ಬೇರೆ ಯಾವುದೇ ಕೊರತೆ ಇಲ್ಲಿಲ್ಲ.
– ರಾಧಾ,ಪೋಷಕರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next