Advertisement
ಅಂಗನವಾಡಿ ಕೇಂದ್ರದ ಕಿಟಕಿ ಬಾಗಿಲುಗಳು ಸಂಪೂರ್ಣ ಹಾಳಾಗಿರುವುದರಿಂದ ಅಂಗನವಾಡಿ ಕೇಂದ್ರದ ಒಳಗಿರುವ ಮಕ್ಕಳ ಪೌಷ್ಟಿಕ ಆಹಾರ ಇನ್ನಿತರ ಇಲಾಖೆ ದಾಖಲೆಗಳ ರಕ್ಷಣೆ ಹಾಗೂ ಭದ್ರತೆಗೋಸ್ಕರ ಕಿಟಕಿ ಬಾಗಿಲುಗಳನ್ನು ಸರಿಪಡಿಸಿಕೊಡುವಂತೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಮಾಡಿದ ಮನವಿ ಮೇರೆಗೆ ಗಂಗೊಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಕಿಟಕಿ ಬಾಗಿಲುಗಳನ್ನು ಆ. 3ರಂದು ದುರಸ್ತಿಪಡಿಸಿ ಕಿಟಿಕಿಗೆ ಮೆಶ್ ಅಳವಡಿಸಲಾಗಿತ್ತು.
9 ವರ್ಷಗಳಿಂದ ಗಂಗೊಳ್ಳಿಯ ಸಂತ ಜೋಸೆಫರ ಶಾಲೆಯ ಕಟ್ಟಡದ ಒಂದು ಕೊಠಡಿಯಲ್ಲಿ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿದೆ. ಕಳೆದೆರಡು ವರ್ಷಗಳಿಂದ ಮಲ್ಯರಬೆಟ್ಟು ಅಂಗನ ವಾಡಿ ಕೇಂದ್ರವನ್ನು ಸ್ಥಳಾಂತರಿಸ ಬೇಕೆಂದು ಶಾಲೆಯ ಆಡಳಿತ ಮಂಡಳಿ ನಿರಂತರವಾಗಿ ಒತ್ತಡ ಹೇರುತ್ತಿದ್ದು, ಅಂಗನವಾಡಿ ಕಟ್ಟಡ ನಿರ್ಮಿಸಲು ನಿವೇಶನ ದೊರೆಯುವ ತನಕ ಈಗಿರುವ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸಲು ಅವಕಾಶ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆ ಅ ಧಿಕಾರಿಗಳು ಮನವಿ ಮಾಡಿದ್ದರು. ಆದರೆ ಹೇಗಾ¨ರೂ ಮಾಡಿ ಅಂಗನವಾಡಿ ಕೇಂದ್ರವನ್ನು ತೆರವು ಗೊಳಿಸಲೇಬೇಕು ಎಂದು ಹಠಕ್ಕೆ ಬಿದ್ದಂತೆ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರುತ್ತಿರುವ ಶಾಲೆಯ ಆಡಳಿತ ಮಂಡಳಿ ಈ ಕೃತ್ಯ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
Related Articles
ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಅಂಗನವಾಡಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಅಂಗನವಾಡಿ ಕಟ್ಟಡದ ಕಿಟಿಕಿಗಳಿಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿನ ಕಾನೂನು ಕ್ರಮ ಜರಗಿಸಬೇಕೆಂದು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.
Advertisement