Advertisement

ಈ ವರ್ಷ ನಡೆಯಲ್ಲ ಐಪಿಎಲ್: ಮುಂದಿನ ವರ್ಷ ಬೃಹತ್‌ ಹರಾಜು ಇಲ್ಲ?

06:19 PM Mar 31, 2020 | keerthan |

ಮುಂಬೈ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಭಾರತದ ವರ್ಣರಂಜಿತ ಕ್ರೀಡಾಕೂಟ ಐಪಿಎಲ್ ಈಗಾಗಲೇ ಆರಂಭವಾಗಬೇಕಿತ್ತು. ಆದರೆ ಕೋವಿಡ್-19 ಸೋಂಕಿನ ಕಾರಣ ಐಪಿಎಲ್ ಈ ವರ್ಷ ನಡೆಯುವುದು ಬಹುತೇಕ ಅನುಮಾನ.

Advertisement

ಮುಂದಿನ ವರ್ಷದ ಐಪಿಎಲ್‌ ಗ‌ೂ ಮುನ್ನ ಪೂರ್ಣ ಪ್ರಮಾಣದ ಹರಾಜು ನಡೆಸಲು, ಈ ಮುಂಚೆ ನಿರ್ಧರಿಸಲಾಗಿತ್ತು. ಅಂದರೆ ಫ್ರಾಂಚೈಸಿಗಳು ತಮ್ಮ ಆಯ್ಕೆಯ ಕೆಲವೇ ಆಟಗಾರರನ್ನು ಉಳಿಸಿಕೊಂಡು, ಉಳಿದವರನ್ನೆಲ್ಲ ಹರಾಜಿಗೆ ಬಿಡಬೇಕು. ನಂತರ ಫ್ರಾಂಚೈಸಿಗಳು ಹೊಸ ಆಟಗಾರರೊಂದಿಗೆ ಹೊಸರೂಪ ತಳೆಯುತ್ತವೆ.

ಈ ಹಿಂದೆಯೂ ಮೂರು ಬಾರಿ ಈ ರೀತಿಯ ಹರಾಜು ನಡೆದಿತ್ತು. ಅದನ್ನು ಮುಂದಿನ ವರ್ಷಾರಂಭದಲ್ಲಿ ನಡೆಸುವ ಯೋಚನೆಯಿತ್ತು. ಆದರೆ ಸದ್ಯ ಈ ವರ್ಷ ಐಪಿಎಲ್ ನಡೆಯದ ಕಾರಣ ಈಗ ಇರುವ ತಂಡವನ್ನೇ ಉಳಿಸಿಕೊಂಡು ಮುಂದಿನ ವರ್ಷ ಐಪಿಎಲ್ ಆಡುವ ಗುರಿ ಬಿಸಿಸಿಐ ಮುಂದಿದೆ ಎನ್ನಲಾಗಿದೆ.

ಹಾಗಾಗಿ ಪೂರ್ಣ ಪ್ರಮಾಣದ ಹರಾಜು ಈಗ ರದ್ದಾಗಿದೆ. ಹರಾಜು ಮುಂದಿನ ವರ್ಷದ ಕೊನೆಗೆ ಅಥವಾ ಅದರ ಮುಂದಿನ ವರ್ಷ ನಡೆಯುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next