Advertisement
ನಿರ್ಲಕ್ಷ್ಯ: ಯಾವುದೇ ಒಂದು ಗಡ್ಡೆ ಕ್ಯಾನ್ಸರ್‌ಕಾರಕ ಆಗಿರಬಹುದು. ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಬಹಳವಾಗಿದೆ. ಕ್ಯಾನ್ಸರ್ ಆರಂಭದಲ್ಲಿಯೇ ನೋವು ಸಹಿತ ಕಂಡುಬರುತ್ತದೆ ಎಂದು ಅನೇಕರು ತಿಳಿದುಕೊಂಡಿರುತ್ತಾರೆ. ನಿಜವಾಗಿ ಕ್ಯಾನ್ಸರ್ ಮುಂದುವರಿದ ಹಂತಗಳಲ್ಲಿ ಮಾತ್ರ ನೋವಿನಿಂದ ಕೂಡಿರುತ್ತದೆ. ಯಾವುದೇ ಶಂಕಾಸ್ಪದ ಲಕ್ಷಣ, ಗಡ್ಡೆಗಳು, ಬೆಳವಣಿಗೆಗಳು ಇದ್ದರೆ ಮುಚ್ಚುಮರೆ ಇಲ್ಲದೆ ಆದಷ್ಟು ಬೇಗನೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ತನದಲ್ಲಿ ಗಡ್ಡೆ, ಸ್ತನದ ಚರ್ಮದಲ್ಲಿ ಬದಲಾವಣೆ, ಸ್ತನತೊಟ್ಟುಗಳು ಅಸಹಜವಾಗಿ ಹಿಂದಕ್ಕೆ ಜರುಗಿ ಮುದುಡಿಕೊಂಡಿರುವುದು, ಸ್ತನ ತೊಟ್ಟು ಮತ್ತು ಅದರ ಸುತ್ತುವರಿದ ಭಾಗದ ತ್ವಚೆಯ ಬಣ್ಣದಲ್ಲಿ ಬದಲಾವಣೆಗಳು ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಾಗಿದ್ದು, ಎಚ್ಚರಿಕೆಯಿಂದ ತಪಾಸಣೆ ಮಾಡಿಸಿಕೊಳ್ಳಬೇಕು.
Related Articles
Advertisement
ಆಕ್ಸಿಲರಿ ಡಿಸೆಕ್ಷನ್ ಕೈಗೊಂಡಾಗ ಲಿಂಫೊ ಎಡೆಮಾ ಅಥವಾ ದುಗ್ಧರಸ ಗ್ರಂಥಿಗಳ ಊತದಿಂದಾಗಿ ದೀರ್ಘಕಾಲಿಕ ತೋಳುಗಳ ಊತಕ್ಕೆ ಕಾರಣವಾಗಬಹುದು. ಆಕ್ಸಿಲರಿ ಡಿಸೆಕ್ಷನ್‌ಗೆ ಒಳಗಾಗುವ ಶೇ. 20ರಷ್ಟು ಮಂದಿಯಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಈಚೆಗೆ ತಜ್ಞರು ಈ ಬಗ್ಗೆಯೂ ಗಮನ ಹರಿಸಿದ್ದು, ವೈಜ್ಞಾನಿಕವಾಗಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಆಕ್ಸಿಲರಿ ನೋಡ್‌ಗಳು ಒಳಗೊಂಡಿದ್ದಾಗ ಮಾತ್ರ ಆಕ್ಸಿಲರಿ ಡಿಸೆಕ್ಷನ್ ಕೈಗೊಳ್ಳಲಾಗುತ್ತದೆ. ಇತರ ರೋಗಿಗಳಲ್ಲಿ ಸಮರ್ಪಕವಾದ ಆಯ್ಕೆಯ ಬಳಿಕ ಸೆಂಟಿನಲ್ ನೋಡ್ ಬಯಾಪ್ಸಿಯ ಫಲಿತಾಂಶ ನೆಗೆಟಿವ್ ಇದ್ದಾಗ ಆಕ್ಸಿಲರಿ ಡಿಸೆಕ್ಷನ್ ಮಾಡದೆ ಇರಬಹುದು. ಸೆಂಟಿನಲ್ ನೋಡ್ ಎಂದರೆ ದುಗ್ಧರಸ ಹರಿಯುವ ನೋಡ್‌ಗಳ ಗುಂಪು ಅಥವಾ ಏಕ ನೋಡ್. ಶಸ್ತ್ರಚಿಕಿತ್ಸೆಯ ಮೂಲಕ ಈ ನೋಡನ್ನು ಗುರುತಿಸಬಹುದು, ಅವುಗಳ ಬಯಾಪ್ಸಿ ನಡೆಸಬಹುದು ಮತ್ತು ಫಲಿತಾಂಶ ನೆಗೆಟಿವ್ ಇದ್ದರೆ ಆಕ್ಸಿಲರಿ ಡಿಸೆಕ್ಷನ್ ಮಾಡದೆ ಇರಬಹುದು.
ಒಟ್ಟು ಸಾರಾಂಶವಾಗಿ ಹೇಳಬಹುದಾದರೆ, ಸ್ತನವು ಮಹಿಳೆಯರಿಗೆ ಸಹಜ ಸೌಂದರ್ಯವನ್ನು ಒದಗಿಸುವ ಒಂದು ಬಾಹ್ಯ ಅಂಗವಾಗಿದ್ದು, ಸ್ತನ ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವ ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ತಪಾಸಣೆಗೆ ಒಳಗಾಗುವುದನ್ನು ಜನಪ್ರಿಯಗೊಳಿಸುವ ಅಗತ್ಯ ಇದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯ ಸುಲಭ ವಿಧಾನಗಳ ಬಗ್ಗೆ ಜನರು ಅರಿತುಕೊಳ್ಳುವ ಮೂಲಕ ಅದು ಎಲ್ಲರ ಕೈಗೆಟಕಬೇಕಾಗಿದೆ. ಚಿಕಿತ್ಸೆಯ ಉತ್ತಮ ಆಯ್ಕೆಗಳು, ವಿಧಾನಗಳ ಬಗ್ಗೆ ಜನರು ಅರಿವು ಮೂಡಿಸಿಕೊಂಡು ಅವುಗಳ ಉಪಯೋಗ ಪಡೆದುಕೊಳ್ಳಬೇಕು.
ಸ್ತನ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವುದೇ ಗುರಿಯಾಗಿದೆ. ಇದನ್ನು ಸಾಧಿಸುವುದು ಹೇಗೆ?
1. ಸ್ತನ ಕ್ಯಾನ್ಸರ್ ಉಂಟಾಗುವುದನ್ನು ಕಡಿಮೆ ಮಾಡುವುದು: ಕ್ಯಾನ್ಸರ್ ಪ್ರಕರಣಗಳು ಕಡಿಮೆಯಾದರೆ ಮರಣ ಪ್ರಮಾಣವೂ ಕಡಿಮೆಯಾಗುತ್ತದೆ.
2. ತಪಾಸಣೆ ಮತ್ತು ಬೇಗನೆ ರೋಗ ಪತ್ತೆಯನ್ನು ಉತ್ತೇಜಿಸುವುದು: ಕ್ಯಾನ್ಸರ್ ಅದರ ಪ್ರಾಥಮಿಕ ಹಂತಗಳಲ್ಲಿ ಹೆಚ್ಚು ಚೆನ್ನಾಗಿ ಚಿಕಿತ್ಸೆಗೆ ಬಗ್ಗುತ್ತದೆ, ಇದರಿಂದ ಚಿಕಿತ್ಸೆಯ ಬಳಿಕ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.
ಮ್ಯಾಮೊಗ್ರಾಮ್ ಮೂಲಕ ತಪಾಸಣೆಯನ್ನು 40 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತೀ ವರ್ಷವೂ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಸಮುದಾಯದಲ್ಲಿ ಮ್ಯಾಮೊಗ್ರಾಮ್ ತಪಾಸಣೆ ತುಂಬಾ ಉಪಯುಕ್ತವಾಗಿದೆ.
3. ರೋಗಲಕ್ಷಣಗಳುಳ್ಳ ಮಹಿಳೆಯರು ಆದಷ್ಟು ಬೇಗನೆ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ, ತಪಾಸಣೆಗೆ ಒಳಗಾಗುವುದನ್ನು ಉತ್ತೇಜಿಸಬೇಕು. ನಿರ್ಲಕ್ಷ್ಯ ಮತ್ತು ನಿರಾಕರಣೆ ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ತುಂಬಾ ಹಿನ್ನಡೆ ಉಂಟುಮಾಡುತ್ತದೆ. -ಡಾ| ಕಾರ್ತಿಕ್ ಕೆ.ಎಸ್.
ಸರ್ಜಿಕಲ್ ಓಂಕಾಲಜಿ,
ಕೆಎಂಸಿ ಆಸ್ಪತ್ರೆ, ಮಂಗಳೂರು