ಬೆಂಗಳೂರು: ಕಳೆದ ಮಾರ್ಚ್, ಏಪ್ರಿಲ್ ತಿಂಗಳ ವಿದ್ಯುತ್ ಬಳಕೆಗೆ ಸಂಬಂಧಪಟ್ಟಂತೆ ಎಸ್ಕಾಂಗಳು ರಾಜ್ಯಾದ್ಯಂತ ವಿತರಿಸಿರುವ ಬಿಲ್ ಸಮರ್ಪಕ ವಾಗಿದ್ದು, ಯಾವುದೇ ಲೋಪವಾಗಿಲ್ಲ. ಲೆಕ್ಕಾಚಾರ ತಪ್ಪಾಗಿದೆ ಎನಿಸಿ ದರೆ ಎಸ್ಕಾಂನಿಂದ ಸ್ಪಷ್ಟನೆ ಪಡೆದು ನಂತರವೇ ಪಾವತಿ ಸಬಹುದು ಎಂದು ಇಂಧನ ಇಲಾಖೆ ಸ್ಪಷ್ಪಡಿಸಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್, ಸೀಲ್‌ಡೌನ್ ಪ್ರದೇಶದ ಬಳಕೆದಾರರು ಹಾಗೂ ಮೀಟರ್ ಮಾಪನ ಸಾಧ್ಯವಾಗದ, ಬಳಕೆದಾರರಿ ಲ್ಲದ ಸಂಪರ್ಕಗಳಿಗೂ ಸರಾ ಸರಿ ಮೊತ್ತದ ಬಿಲ್ ನೀಡಲಾಗಿದ್ದು, ಆ ಬಳಕೆದಾರ ರಿಗೆ ಜೂ. 30ರವರಗೆ ಬಿಲ್ ಪಾವತಿಗೆ ಅವಕಾಶ ನೀಡ ಲಾಗಿದೆ.
ಗ್ರಾಹಕರು ಫೆಬ್ರವರಿ ತಿಂಗಳ ವಿದ್ಯುತ್ ಬಳಕೆ ಹಾಗೂ ಮೇ ತಿಂಗಳ ಬಳಕೆ ಪ್ರಮಾಣವನ್ನು ತಾಳೆ ಹಾಕಿ ದರೆ ಮಾರ್ಚ್, ಏಪ್ರಿಲ್ ತಿಂಗಳ ಒಟ್ಟು ಬಳಕೆ ಪ್ರಮಾಣ ತಿಳಿಯಬಹುದು. ನಂತರ ಅದಕ್ಕೆ ನಿಗದಿತ ಶುಲ್ಕ ಅನ್ವ ಯಿಸಿದರೆ ಸ್ಪಷ್ಟ ಲೆಕ್ಕ ಸಿಗಲಿದೆ ಎಂದು ಇಲಾಖೆ ತಿಳಿಸಿದೆ. ಲೋಪವಾಗಿದ್ದರೆ ಎಸ್ಕಾಂ ಸಂಪರ್ಕಿಸಬಹುದು. ಗೊಂದಲಗಳಿ ದ್ದಲ್ಲಿ ಬಿಲ್ ಪಾವತಿಗೆ ಜೂ. 30ರವರೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಬುಧ ವಾರ ಪತ್ರಿಕಾಗೋಷ್ಠಿ ನಡೆಸಿದ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಲಾಕ್‌ಡೌನ್ ನಿಂದಾಗಿ ಮಾರ್ಚ್ ತಿಂಗಳ ವಿದ್ಯುತ್ ಬಳಕೆಗೆ ಸಂಬಂಧಪಟ್ಟಂತೆ ಮೀಟರ್ ಮಾಪ ಕರು ಮನೆ ಮನೆಗೆ ತೆರಳಿ ಬಿಲ್ ಸಿದಟಛಿಪಡಿ ಸಲು ಸಾಧ್ಯವಾಗಿರಲಿಲ್ಲ.
ಆ ಹಿನ್ನೆಲೆ ಯಲ್ಲಿ ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳ ವಿದ್ಯುತ್ ಬಳಕೆ ಸರಾಸರಿ ಬಿಲ್ ವಿಧಸಲಾಗಿತ್ತು. ಮೇ ಮೊದಲ ವಾರದಲ್ಲಿ ಮೀಟರ್ ಮಾಪನ ನಡೆಸಿ ಎರಡು ತಿಂಗಳ ವಾಸ್ತವ ಬಳಕೆಗೆ ನಿಖರ ಬಿಲ್ ನೀಡಲಾಗಿದೆ ಎಂದು ತಿಳಿಸಿದರು. ಮೀಟರ್ ದೋಷದಿಂದ ಬಿಲ್ ಮೊತ್ತ ವ್ಯತ್ಯಾಸ, ಸ್ಯಾಬ್‌ಗ ಅನುಗುಣವಾಗಿ ಶುಲ್ಕ ನಿಗದಿಯಲ್ಲಿ ವ್ಯತ್ಯಯ ವಾಗಿದ್ದರೆ, ಲೆಕ್ಕಾಚಾರ ಏರುಪೇರಾಗಿದ್ದರೆ ಹೊಸ ಬಿಲ್ ನೀಡಲಾಗುವುದು. ಎಂಎಸ್‌ಎಂಇ ಕೈಗಾರಿಕಾ ಬಳಕೆದಾರರಿಗೆ ಏಪ್ರಿಲ್, ಮೇ ತಿಂಗಳ ಬಿಲ್‌ಗಳಿಗೆ ನಿಗದಿತ ಶುಲ್ಕವನ್ನು ಸರ್ಕಾರ ಮನ್ನಾ ಮಾಡಿದೆ. ಹಾಗಾಗಿ ಮಾರ್ಚ್ ತಿಂಗಳ ಶುಲ್ಕ ನಿಗದಿತ ಶುಲ್ಕದ ಜತೆಗೆ ಉಳಿದ ಬಿಲ್ ಮೊತ್ತವನ್ನಷ್ಟೇ ಪಾವತಿಸಬೇಕು ಎಂದರು.
ಮಾಸಿಕ 4,235 ಕೋಟಿ ರೂ. ವೆಚ್ಚ: ವಿದ್ಯುತ್ ಪೂರೈಕೆ ಸೇರಿದಂತೆ ಇತರೆ ವೆಚ್ಚಕ್ಕಾಗಿ ಎಲ್ಲ ಎಸ್ಕಾಂಗಳಿಗೂ ಮಾಸಿಕ 4,235 ಕೋಟಿ ರೂ. ವಿನಿಯೋಗವಾಗುತ್ತದೆ. ಎಸ್ಕಾಂಗಳು ವಿದ್ಯುತ್ ಖರೀದಿಗೆ 2,956 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ನೌಕರರ ವೇತನ ಪಾವತಿಗೆ 650 ಕೊಟಿ ರೂ., ಸಾಲದ ಮೇಲಿನ ಬಡ್ಡಿ ಪಾವತಿಗೆ 727 ಕೋಟಿ ರೂ. ಭರಿಸಬೇಕಾಗುತ್ತದೆ. ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ 700 ಕೋಟಿ ರೂ. ಮಾತ್ರ ಸಿಗಲಿದೆ. ಹಣ ಪಾವತಿಸದೆ ವಿದ್ಯುತ್ ಖರೀದಿಗೆ ಅವಕಾಶ ವಿರುವುದಿಲ್ಲ. ಆ ಹಿನ್ನೆಲೆಯಲ್ಲಿ ಸರಾಸರಿ ಬಿಲ್ ನೀಡುವುದು ಅನಿವಾರ್ಯ ಎಂದು ಮಹೇಂದ್ರ ಜೈನ್ ತಿಳಿಸಿದರು.
ಕರೆಂಟ್ ಬಳಕೆ ಹೆಚ್ಚಾಗಿದೆ: ಒಂದೆಡೆ ಬೇಸಿಗೆ, ಮತ್ತೂಂದೆಡೆ ಲಾಕ್‌ಡೌನ್ ಜಾರಿಯಿಂದಾಗಿ ಎಲ್ಲ ಜನ ಮನೆಯಲ್ಲಿದ್ದುದರಿಂದ ವಿದ್ಯುತ್ ಬಳಕೆ ಹೆಚ್ಚಾಗಿರುವ ಸಾಧ್ಯತೆ ಇದೆ. ಐಟಿ-ಬಿಟಿ ಸೇರಿದಂತೆ ಇತರ ವಲಯದ ಉದ್ಯೋಗಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸಿರುವುದ ರಿಂದ ವಿದ್ಯುತ್ ಬಳಕೆ ಹೆಚ್ಚಾಗಿರಬಹುದು. ಹಾಗಾಗಿ ಬೆಸ್ಕಾಂನಿಂದ ಯಾವುದೇ ಲೋಪವಾಗಿಲ್ಲ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ಎಂದರು.
1.8 ಲಕ್ಷ ಮನೆಗೆ ಬೀಗ- ಸರಾಸರಿ ಬಿಲ್: ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 79.80 ಲಕ್ಷ ಗ್ರಾಹಕರಿಗೆ ಬಿಲ್ ನೀಡಲಾಗಿದೆ. ಮನೆಗಳಿಗೆ ಬೀಗ ಹಾಕಿದ್ದರೂ ಹೊರಭಾಗದಲ್ಲಿ ಮೀಟರ್ ಇರುವ ಕಡೆ ಬಿಲ್ ಇಡಲಾಗಿದೆ. ಆದರೆ ಮೀಟರ್ ಒಳಭಾಗದಲ್ಲಿರುವುದು ಸೇರಿದಂತೆ ಮೀಟರ್ ಮಾಪನಕ್ಕೆ ಅವಕಾಶ ಸಿಗದ ಕಡೆ “ಮನೆ ಬೀಗ’ ಎಂದು ನಮೂದಿಸಿ ಸರಾಸರಿ ಬಿಲ್ ವಿಧಿಸಲು ಅವಕಾಶವಿದೆ ಎಂದರು. ಕಂಟೈನ್ಮೆಂಟ್ ಪ್ರದೇಶ, ಸೀಲ್‌ಡೌನ್ ಪ್ರದೇಶದವರಿಗೂ ಸರಾಸರಿ ಬಿಲ್ ನೀಡಿರುವ ಸಾಧ್ಯತೆ ಇದೆ. ಊರಿಗೆ ತೆರೆಳಿದ್ದವರು ಮರಳಿದ ಬಳಿಕ ಸಮೀಪದ ಕಚೇರಿಗೆ ಮಾಹಿತಿ ನೀಡಬಹುದು. ಇಲ್ಲವೇ ಮೀಟರ್‌ನ ಪ್ರಸ್ತುತ ರೀಡಿಂಗ್‌ನ ಫೋಟೋ ತೆಗೆದು ಬೆಸ್ಕಾಂ ವಾಟ್ಸ್ ಆ್ಯಪ್ ಸಂಖ್ಯೆ 94498 44640ಗೆ ಕಳುಹಿಸಿದರೆ ನಿಖರ ಬಿಲ್ ವಿವರ ನೀಡಲಾಗುತ್ತದೆ ಎಂದರು.