Advertisement
ಸೋಮವಾರ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿ ವಿದ್ಯುತ್ ತಂತಿ ಭೂಗತಗೊಳಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡಿದ ಅವರು, ಸುಮಾರು 82 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಕೈಗೊಳ್ಳಲಾಗುತ್ತಿದೆ. ಇದು ಸ್ಮಾರ್ಟ್ ಸಿಟಿಯ ಕಾಮಗಾರಿ ಅಲ್ಲ. ರಾಜ್ಯ ಸರ್ಕಾರ ನೀಡಿದ ಹಣದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆರಂಭದಲ್ಲಿ ಪಿಬಿ ರಸ್ತೆಯ ಕೇಬಲ್ ಭೂಗತಗೊಳಿಸಲಿದ್ದು, ಇನ್ನೂ 450 ಕೋಟಿ ರೂ. ಬರಲಿದ್ದು, ಅದರಲ್ಲಿ ನಗರದ ಎಲ್ಲಾ ಭಾಗದ ಪ್ರಮುಖ ರಸ್ತೆಗಳ ತಂತಿ ಭೂಗತಗೊಳಿಸಲಾಗುವುದು. ಒಟ್ಟು 532 ಕೋಟಿ ರೂ.ನ ಕಾಮಗಾರಿ ನಡೆಯಲಿದೆ ಎಂದರು.
180 ಕಿಮೀ ರಸ್ತೆ ಕಾಂಕೀಟ್ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ, ಎಪಿಎಂಸಿ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ ಬಂದ ಅನುದಾನದಲ್ಲಿ ನಗರವನ್ನು ಸುಂದರಗೊಳಿಸಲಾಗುತ್ತಿದೆ. ಪಿಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಿದೇಶದಿಂದ ತರಿಸಿದ ಸಸಿಗಳನ್ನು ನೆಡಲಾಗುತ್ತಿದೆ ಎಂದು ಅವರು ಹೇಳಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ನಾನು ನಗರ ಸಭೆ ಅಧ್ಯಕ್ಷನಾಗಿದ್ದಾಗ 1975ರಲ್ಲೇ ಈ ಯುಜಿ ಕೇಬಲಿಂಗ್ ಪ್ರಸ್ತಾವನೆ ಬಂದಿತ್ತು. ಆಗ 9 ಕೋಟಿ ರೂ. ಅಂದಾಜು ಪಟ್ಟಿ ಮಾಡಲಾಗಿತ್ತು. ಆದರೆ, ಆಗ ಇಷ್ಟು ಅನುದಾನ ಕೊಡಲು ಸಾಧ್ಯವಿದ್ದಿಲ್ಲ. ಈಗ 600 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲು ನಮ್ಮ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿದೆ ಎಂದರು. ಮೇಯರ್ ಅನಿತಾಬಾಯಿ, ಪಾಲಿಕೆ ಸದಸ್ಯರಾದ ಎಂ. ಬಸಪ್ಪ,ದಿನೇಶ್ ಕೆ. ಶೆಟ್ಟಿ,ಶಿವನಹಳ್ಳಿ ರಮೇಶ್, ಎಂ. ಹಾಲೇಶ್, ಚಂದ್ರಶೇಖರ್, ಸುರೇಂದ್ರ ಮೊಯಿಲಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್, ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ ವೇದಿಕೆಯಲ್ಲಿದ್ದರು. ಬಾತಿಕೆರೆ ಅಭಿವೃದ್ಧಿ
ಬಾತಿ ಕೆರೆಯನ್ನು ಬೋಟಿಂಗ್ ಸ್ಪಾಟ್ ಮಾಡಿ, ಪಕ್ಕದಲ್ಲೊಂದು ಬೊಟಾನಿಕಲ್ ಗಾರ್ಡನ್ ನಿರ್ಮಾಣ ಮಾಡಲು
ನಿರ್ಧರಿಸಲಾಗಿದೆ. ಕೆ.ಆರ್. ಮಾರುಕಟ್ಟೆಯನ್ನು 25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಶೀಘ್ರದಲ್ಲಿ ಈ ಎಲ್ಲಾ ಕಾಮಗಾರಿ ಕೈಗೊಳ್ಳಲಾಗುವುದು. ಇದರ ಜೊತೆಗೆ ಪಿಬಿ ರಸ್ತೆಗೆ ಎರಡೂ ಕಡೆ ಫುಟ್‌ಪಾತ್
ನಿರ್ಮಿಸಲಾಗುವುದು. ಲೋಕಿಕೆರೆ ರಸ್ತೆ ಅಗಲೀಕರಿಸಿ, ಅಲ್ಲಿಯೂ ಪಾದಾಚಾರಿ ರಸ್ತೆ ನಿರ್ಮಿಸಲಾಗುವುದು.
ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವ ಡೂಡಾದಿಂದ ಬಡಾವಣೆ ಡೂಡಾದಿಂದ 400-500 ಎಕರೆ ಜಮೀನು ಖರೀದಿಸಿ, ಬಡ, ಮಧ್ಯಮ ವರ್ಗದ ಜನರಿಗಾಗಿ ಬಡಾವಣೆ ನಿರ್ಮಿಸಲಾಗುವುದು. ಈ ಹಿಂದೆ ಬಿಜೆಪಿಯವರು
ಮಾಡಿದಂತೆ ನಾವು 25 ಸಾವಿರ ಕಮೀಷನ್ ಇಸ್ಕೊಂಟು ಸೈಟು ಹಂಚಲ್ಲ, ಅರ್ಹರನ್ನು ಆಯ್ಕೆಮಾಡಿ, ಅವರಿಗೆ
ನಿವೇಶನ ಕೊಡ್ತೇವೆ ಎಂದು ಮಲ್ಲಿಕಾರ್ಜುನ್ ಭಾಷಣದಲ್ಲಿ ತಿಳಿಸಿದರು.