Advertisement

ವಿದ್ಯುತ್‌ ಸಂಪರ್ಕವಿಲ್ಲದೆ ಕಗ್ಗತ್ತಲಲ್ಲಿ ಮುಳುಗಿದ ಕೆಂಗೇರಿ ಮೇಲ್ಸೇತುವೆ

12:41 PM Oct 10, 2020 | Suhan S |

ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ವಲಯ ರಾಜಕೀಯವಾಗಿ ಬಲಗೊಳ್ಳುತ್ತಿದೆ ಆದರೆ, ಸೌಲಭ್ಯಗಳ ನಿರ್ವಹಣೆಯಲ್ಲಿ ಸೋಲುತ್ತಿರುವ ಲಕ್ಷಣ ಗೋಚರವಾಗುತ್ತಿದೆ. ಇದಕ್ಕೆ ಉಹಾಹರಣೆ ಎಂಬಂತೆ ಉಪನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ವರ್ಷಗಳಿಂದ ವಿದ್ಯುತ್‌ ಸಂಪರ್ಕವಿಲ್ಲದೆಕಗ್ಗತ್ತಲಲ್ಲಿ ಮುಳುಗಿರುವುದು.

Advertisement

ಸೇತುವೆಯ ಕಾಮಗಾರಿ 2010ರಲ್ಲಿ ಪ್ರಾರಂಬಿಸಿದ್ದು, ಪ್ರಾರಂಭ ‌ದಿಂದಲೇ ಕಾಮಗಾರಿ ಕುಂಟುತ್ತಾ ತೆವಳುತ್ತಾ ಪೂರ್ಣಗೊಂಡರು ಉದ್ಘಾಟನೆ ಭಾಗ್ಯ ಇನ್ನೂ ದೊರೆತಿಲ್ಲ. ಕಾಮಗಾರಿ ಪೂರ್ಣವಾದ ಬಳಿಕ 1 ವರ್ಷಗಳ‌ವರೆಗೆ ಬೆಳಕಿನಿಂದ ಜಗಮಗಿಸಿದ

ಸೇತುವೆ ನಂತರ ‌ ದಿನಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲದೆ ದ್ವಿಚಕ್ರ, ತ್ರಿಚಕ್ರ, ಲಘು ವಾಹನ ಸವಾರರು ರಾತ್ರಿಯ ವೇಳೆ‌ಯ‌ಲ್ಲಿ ಸಂಚರಿಸುವಂತಾಗಿದೆ. ಕೂಗಳತೆಯ ದೂರದಲ್ಲಿ ಕೆಂಗೇರಿ ಪೊಲೀಸ್‌ ಠಾಣೆಯಿದ್ದರೂ ಸೇತುವೆಯ ಮೇಲೆ ಕ ಳ್ಳರ ಕಾಟ ಹೆಚ್ಚಿದೆ. ರಾತ್ರಿ ವೇಳೆ ಕುಡುಕರು ಕುಡಿದು ಬಾಟಲ್‌ಗ‌ಳನ್ನು ಆಲ್ಲೆಎಸೆಯುವುದು ಸೇರಿದಂತೆ ಆನೇಕ ಕಾನೂನು ಬಾಹಿರ‌ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದೆ. ಇಲ್ಲಿಯ ವರೆಗೆ ಆನೇಕ ‌ ಅಪಘಾತಗ ಳು ಸಂಭವಿಸಿದ್ದು ಸಾವು-ನೋವು ಉಂಟಾಗಿದ್ದರೂ ಸ್ಥಳೀಯ ಮತ್ತು ಪಾಲಿಕೆಯಿಂದ ಯಾವುದೇ ಕ್ರಮ ಜರುಗಿಸದಿರುವುದು ವಿಪರ್ಯಾಸವಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿಗಮವು ಕಾಮಗಾರಿಯಉಸ್ತುವಾರಿಯನ್ನುಹೊಂದಿದ್ದು, 5-6ವರ್ಷಗಳ ನಂತರ ಪಾಲಿಕೆ ಸುಪರ್ದಿಗೆ ನೀಡಿದೆ. ಸೇತುವೆಯ ವಿದ್ಯುತ್‌ ಸಂಪರ್ಕ ಸೇರಿ ನಿರ್ವಹಣೆಗೆ ಸುಮಾರು10 ಲಕ್ಷ ರೂ.ಗಳು ವೆಚ್ಚ ಮಾಡಿದ್ದು, ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು ಎಂದು ಪಾಲಿಕೆ ಮಾಜಿ ಸದಸ್ಯವಿ.ವಿ.ಸತ್ಯನಾರಾಯಣ ತಿಳಿಸಿದ್ದರು. ಪಾಲಿಕೆ ಅವಧಿ ಮುಗಿದು ತಿಂಗಳಾದರೂ ಇದನ್ನು ಯಾರು ಯಾವ ರೀತಿ ನಿರ್ವಹಣೆ ಮಾಡುತ್ತಾರೆ ಎಂಬ ಮಾಹಿತಿಯೇ ಇಲ್ಲ. ಇನ್ನು ಮುಂದಾದರೂ ಪಾಲಿಕೆ ನೂತನಆಡಳಿತಾಧಿಕಾರಿ ಮೇಲ್ಸೇತುವೆ ಬಗ್ಗೆ ಗಮನ ಹರಿಸಿ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಲೋಕಾರ್ಪಣೆಯೇ ಆಗಿಲ್ಲ: ಕೆಂಗೇರಿ ಮೇಲ್ಸೇತುವೆ ಇದುವರೆವಿಗೂ ಯಾರೂ ಉದ್ಘಾಟಿಸಿಲ್ಲ. ನಗರದ ಎಲ್ಲಾ ಸೇತುವೆಯ ಮೇಲೆ ಉದ್ಘಾಟಕರ ಹೆಸರು, ಪ್ರಾರಂಭದ ದಿನಾಂಕ, ಅಂದಾಜು ವೆಚ್ಚ ಇನ್ನಿತರ ಮಾಹಿತಿ ಇರುತ್ತದೆ. ಆದರೆ, ಈ ಸೇತುವೆಗೆ ಯಾವುದೇ ನಾಮಫ‌ಲಕವನ್ನೂ ಹಾಕಿಲ್ಲ ಎಂದು ಶ್ರೀರಾಮ ಬಡಾವಣೆಯ ನಿವಾಸಿ ಶಿವಕುಮಾರ್‌ ತಿಳಿಸುತ್ತಾರೆ. ರಿಫ್ಲೆಕ್ಟರ್‌ಗಳನ್ನೂ ಅಳವಡಿಸಿಲ್ಲ: ಕೆಂಗೇರಿಉಪನಗರದಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೆ ಮಳೆ ಬಂದರೆ ನೀರು ನಿಂತು ದ್ವಿಚಕ್ರ ವಾಹನ ಸವಾರರು ಜಾರಿಬಿದ್ದಂತಹ ಘಟನೆಗಳು ಸಾಕ ಷ್ಟಿವೆ. ಜತೆಗೆ ಮೇಲ್ಸೇತುವೆ ರಸ್ತೆಗಳಿಗೆ ರಿಫ್ಲೆಕ್ಟರ್‌ಗಳನ್ನೂ ಅಳವಡಿಸಿಲ್ಲ. ಮೇಲ್ಸೇತುವೆ ಕಳಗಿನ ರಸ್ತೆಯಲ್ಲಿ ವಿದ್ಯುತ್‌ ದೀಪಗಳ ಅಭಾವದಿಂದ ಅಪಘಾತಗಳು ಹೆಚ್ಚುತ್ತಿವೆ. ಕೂಗಳತೆ ದೂರದಲ್ಲಿ ಪೊಲೀಸ್‌ ಠಾಣೆಯಿದ್ದು ಕ್ರಮ ಜರುಗಿಸುತ್ತಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ.

Advertisement

ಪೊಕರಿಗಳಿಂದ ಬರ್ತಡೇ ಆಚರಣೆ :  ಮೇಲ್ಸೇತುವೆ ಪುಂಡ ಪೋಕರಿಗಳ ಅಡ್ಡಿಯಾಗಿದ್ದು, ಸ್ಥಳದಲ್ಲಿ ಪೋಕರಿಗಳು ಜೂಜು, ಮದ್ಯ ಸೇವನೆ, ಧೂಮಪಾನ ಮಾಡುತ್ತಾರೆ. ಅಲ್ಲದೆ ಕೆಲವೊಮ್ಮೆ ತಮ್ಮ ಪ್ರಿಯತಮೆಯರನ್ನು ಕರೆದುಕೊಂಡು ಬಂದು ಮೇಲ್ಸೇತುವೆಯಲ್ಲಿ ಬರ್ತಡೇ ಆಚರಿಸು ವುದೂ ಇದೆ. ಸ್ಥಳೀಯ ಆಡಳಿತ ಈ ಕುರಿತು ನಿಗಾ ವಹಿಸುತ್ತಿಲ್ಲ. ಪೊಲೀಸರು ಗಮನಹರಿ ಸುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸ್ಥಳಿಯ ನಿವಾಸಿಗಳು ತಿಳಿಸಿದರು.

 

ರವಿ ವಿ.ಆರ್‌. ಕೆಂಗೇರಿ

Advertisement

Udayavani is now on Telegram. Click here to join our channel and stay updated with the latest news.

Next