Advertisement
ಸಮೀಪದ ಹನಗಂಡಿ ಗ್ರಾಮದ ಜೀವಜಲ ವಿಶಾಲ ಕೆರೆ ಜುಲೈ ತಿಂಗಳು ಮುಗಿಯುತ್ತ ಬಂದರೂ ಕೆರೆಗೆ ಒಂದು ಹನಿ ನೀರು ಕೂಡಾ ಬಂದಿಲ್ಲ. ಹೀಗಾಗಿ ಕೆರೆ ಬಣಗುಡುತ್ತಿದೆ. ಈ ಕೆರೆ ತುಂಬಿದರೆ ಗ್ರಾಮದ ಅನೇಕ ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿ ನೀರಿನ ಕೊರತೆಯನ್ನು ನೀಗಿಸುತ್ತದೆ. ಈ ಹಿಂದೆ ಕೆರೆ ತುಂಬಾ ಹೂಳು ತುಂಬಿಕೊಂಡಿತ್ತು.ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಪಂದವರು ಹೂಳು ತೆಗೆಯಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ಮಾಡಿದ್ದಾರೆ. ಆದರೆ ಹೆಚ್ಚಿನ ಪ್ರಮಾಣ ಮಳೆಯಾಗದ ಕಾರಣ ಕೆರೆಗೆ ಹನಿ ನೀರೂ ಹರಿದು ಬಂದಿಲ್ಲ. ಇದರಿಂದ ಈ ಭಾಗದ ರೈತರ ಹೊಲ ಗದ್ದೆಗಳಲ್ಲಿನ ಬೋರವೆಲ್ಗಳಲ್ಲಿ ನೀರಿಲ್ಲದೆ, ಸಮಯಕ್ಕೆ ಸರಿಯಾಗಿ ಮಳೆಯೂ ಬಾರದೇ ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಕಬ್ಬು, ತೊಗರಿ ಬೆಳೆ, ಹೆಸರು, ಕಾಯಿಪಲ್ಲೆ ಬೆಳೆಗಳು ಸಂಪೂರ್ಣ ಒಣಗಲು ಆರಂಭಿಸಿವೆ. Advertisement
ಹನಗಂಡಿ ಕೆರೆಯಲ್ಲಿ ಹನಿ ನೀರಿಲ್ಲ..!
08:26 AM Jul 12, 2019 | Suhan S |
Advertisement
Udayavani is now on Telegram. Click here to join our channel and stay updated with the latest news.