Advertisement

ವೈದ್ಯಾಧಿಕಾರಿ ಇಲ್ಲದೆ ರೋಗಿಗಳ ಪರದಾಟ

04:15 PM Aug 29, 2022 | Team Udayavani |

ಚೇಳೂರು: ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ತಿಂಗಳಿಂದ ವೈದ್ಯಾಧಿಕಾರಿಗಳಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ನೂತನ ತಾಲೂಕು ಕೇಂದ್ರವಾದ್ರೂ ಸೂಕ್ತ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ.

Advertisement

ತಿಂಗಳ ಹಿಂದೆ ಚೇಳೂರಿಗೆ ಬಂದಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಗೆ ದಸಂಸ ಚೇಳೂರು ತಾಲೂಕು ಅಧ್ಯಕ್ಷ ಜಲಿಪಿಗಾರಪಲ್ಲಿ ನರಸಿಂಹಮಪ್ಪ ಅವರ ನೇತೃತ್ವದಲ್ಲಿ ವೈದ್ಯಾಧಿಕಾರಿಗಳನ್ನು ನೇಮಿಸಲು ಮನವಿ ಸಲ್ಲಿಸಲಾಗಿತ್ತು. ಸಚಿವರು ಭರವಸೆ ನೀಡಿದಂತೆ ಐದು ದಿನಗಳಲ್ಲೇ ವೈದ್ಯಾಧಿಕಾರಿ ಡಾ.ಸತೀಶ್‌ ಅವರನ್ನು ನೇಮಕ ಮಾಡಿದ್ದರು. 13 ದಿನ ಕಾರ್ಯನಿರ್ವಹಿಸಿದ ಡಾ.ಸತೀಶ್‌, ನಾಲ್ಕು ದಿನಗಳ ಹಿಂದೆ ವರ್ಗಾವಣೆ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಚೇಳೂರನ್ನು ನೂತನ ತಾಲೂಕಾಗಿ ಘೋಷಣೆ ಮಾಡಿದ ಸರ್ಕಾರ, ಸೌಲಭ್ಯಗಳನ್ನು ಕಲ್ಪಿಸದೇ ತೀರಾ ಹಿಂದುಳಿಯುವಂತೆ ಮಾಡಿದೆ. ಅಧಿಕಾರಿಗಳಿಲ್ಲದೇ ಎಲ್ಲಾ ಇಲಾಖೆಗಳು ಖಾಲಿ ಹೊಡೆಯುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ವೈದ್ಯಾಧಿಕಾರಿಗಳಿಲ್ಲದೆ, ಮತ್ತಷ್ಟು ತೊಂದರೆಯಾಗಿದೆ.

ಆರೋಗ್ಯ ಸಚಿವರ ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ಇದ್ರೆ, ಉಳಿದ ತಾಲೂಕುಗಳ ಗತಿ ಏನು ಎಂಬುದನ್ನು ಊಹಿಸಲು ಅಸಾಧ್ಯ. ಈ ಕೂಡಲೇ ವೈದ್ಯಾಧಿಕಾರಿಗಳನ್ನು ನೇಮಿಸಲು ಚೇಳೂರು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಜಲಿಪಿಗಾರಪಲ್ಲಿ ನರಸಿಂಹಮಪ್ಪ ಆಗ್ರಹಿಸಿದ್ದು, ಈ ಸಂಬಂಧ ಹೋರಾಟ ನಡೆಸಲು ಪುಣ್ಯಕ್ಷೇತ್ರ ಕೊಂಡಿಕೊಂಡ ಗಂಗಾಭವಾನಿ ಬೆಟ್ಟದಲ್ಲಿ ತುರ್ತು ಸಭೆ ನಡೆಸಿ, ಚರ್ಚೆ ನಡೆಸಿದರು.

ಈ ಸಮಯದಲ್ಲಿ ಕಾರ್ಯಕರ್ತರಾದ ಗುಂತೂರುಪಲ್ಲಿ ನಾರಾಯಣಪ್ಪ, ನರಸಿಂಹಪ್ಪ, ಊದವಾರಪಲ್ಲಿ ಜಿಲಕರ ಗಂಗುಲಪ್ಪ, ಬತ್ತಲವಾರಪಲ್ಲಿ ಈರಪ್ಪ, ಆರ್‌ .ನರಸಿಂಹಪ್ಪ, ಕೊತ್ತೂರುಪಲ್ಲಿ ಸೋಮಶೇಖರ್‌, ಪೋಲನಾಯಕನಹಳ್ಳಿ ಮಂಜುನಾಥ್‌, ದುಗೇನೇಪಲ್ಲಿ ನಾರಾಯಣಸ್ವಾಮಿ, ಗೊಲ್ಲಪಲ್ಲಿ ಗಂಗುಲಪ್ಪ, ರಾಚವಾರಪಲ್ಲಿ ಗಂಗಾಧರ್‌ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next