Advertisement

GOA: ಪ್ರವಾಸಿಗರ ಕೊರತೆಯಿಂದ ಅವಧಿಗೂ ಮುನ್ನವೇ ಮುಚ್ಚುತ್ತಿದೆ ಶಾಕ್ಸ್ ಗಳು

05:40 PM Jun 01, 2024 | Team Udayavani |

ಪಣಜಿ: ಗೋವಾ ರಾಜ್ಯ ಪ್ರವಾಸೋದ್ಯಮವು ಪ್ರಸಕ್ತ ವಿದೇಶಿ ಪ್ರವಾಸಿಗರ ಕೊರತೆ ಎದುರಿಸುತ್ತಿದೆ. ಪ್ರಸಕ್ತ ಪ್ರವಾಸೋದ್ಯಮ ಸೀಸನ್ ನಲ್ಲಿ ವಿದೇಶಿ ಪ್ರವಾಸಿಗರ ಕೊರತೆಯಿಂದಾಗಿ ಅವಧಿಗೂ ಮುನ್ನವೇ ಬೀಚ್‍ಗಳಲ್ಲಿರುವ ಶಾಕ್ಸ್ ಗಳನ್ನು (ಬೀಚ್‍ಗಳಲ್ಲಿನ ಬಾರ್ ಮತ್ತು ರೆಸ್ಟೋರೆಂಟ್) ಪ್ರವಾಸಿಗರ ಕೊರತೆಯಿಂದಾಗಿ ಬಂದ್ ಮಾಡಲಾಗಿದೆ. ಗೋವಾದ ಕಾಂದೋಳಿ, ಬಾಗಾ, ಸೇರಿದಂತೆ ಪ್ರಮುಖ ಬೀಚ್‍ಗಳಲ್ಲಿ ಪ್ರವಾಸಿಗರ ಕೊರತೆಯಿಂದಾಗಿ ಪ್ರವಾಸೋದ್ಯಮ ವ್ಯವಹಾರಸ್ಥರು ನಷ್ಠ ಅನುಭವಿಸುವಂತಾಗಿದೆ.

Advertisement

ಕಳೆದ ಅಕ್ಟೋಬರ್ ನಲ್ಲಿ ಪ್ರವಾಸೋದ್ಯಮ ಸೀಸನ್ ಆರಂಭಗೊಂಡ ನಂತರವೂ ಶಾಕ್ಸ್ ಗಳಿಗೆ ಪರವಾನಗಿ ನೀಡಲು ಪ್ರವಾಸೋದ್ಯಮ ಇಲಾಖೆ ವಿಳಂಬ ಮಾಡಿತ್ತು ಎಂದು ಶಾಕ್ಸ್ ವ್ಯವಹಾರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಶಾಕ್ಸ್ ಮಾಲೀಕರಿಗೆ ಪರವಾನಗಿ ಶುಲ್ಕ ಪಡೆಯಲಾಗುತ್ತಿದೆ. ಆದರೆ ಬೀಚ್ ಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ಹೈಮಾಸ್ಟ್ ದೀಪಗಳನ್ನು ಅಳವಡಿಸಿಲ್ಲ. ಇದರಿಂದಾಗಿಯೂ ರಾತ್ರಿಯ ಸಂದರ್ಭದಲ್ಲಿ ಪ್ರವಾಸಿಗರು ಸುರಕ್ಷತೆಯ ದೃಷ್ಠಿಯಿಂದ ಶಾಕ್ಸ್ ಗಳಿಗೆ ಆಗಮಿಸಲು ಭಯಪಡುವಂತಾಗಿದೆ. ಈ ಎಲ್ಲ ಕಾರಣಗಳಿಂದ ಶಾಕ್ಸ್ ಮಾಲೀಕರು ಪ್ರವಾಸಿಗರ ಕೊರತೆ ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರಸಕ್ತ ವರ್ಷ ಶಾಕ್ಸ್ ಆರಂಭಿಸಲು ಪರವಾನಗಿ ನೀಡಲು ವಿಳಂಬ ಮಾಡಿದ್ದರಿಂದ ಜೂನ್ 10 ರವರೆಗೆ ನಡೆಸಲು ಪ್ರವಾಸೋದ್ಯಮ ಇಲಾಖೆ ಪರವಾನಗಿ ನೀಡುವಂತೆ ಮನವಿ ಮಾಡಿದ್ದಾರೆ.

ಸುರಕ್ಷತೆಯ ದೃಷ್ಠಿಯಿಂದ ಸರ್ಕಾರವು ಬೀಚ್‍ ಗಳಲ್ಲಿ ಹೈಮಾಸ್ಟ್ ದೀಪ, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಶಾಕ್ಸ್ ಮಾಲೀಕರು ಆಗ್ರಹಿಸಿದ್ದಾರೆ. ಗೋವಾ ಪ್ರವಾಸೋದ್ಯಮವು ವಿದೇಶಿ ಪ್ರವಾಸಿಗರನ್ನು ಅವಲಂಬಿಸಿದೆ. ಇದರಿಂದಾಗಿ ಪ್ರವಾಸಿಗರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ಆದರೆ ಪ್ರವಾಸೋದ್ಯಮ ಇಲಾಖೆಯು ಇವನ್ನೆಲ್ಲ ಅಲಕ್ಷಿಸಿದೆ ಎಂದು ಗೋವಾ ಪಾರಂಪರಿಕ ಶಾಕ್ಸ್ ಅಸೋಸಿಯೇಶನ್ ಅಧ್ಯಕ್ಷ ಮಾಮ್ಯುಎಲ್ ಕಾರ್ದೋಜ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next