Advertisement
12ನೇ ಶತಮಾನದ ಬಸವಣ್ಣರು ಹಾಗೂ ನವಯುಗದ ಕುವೆಂಪು ಎಂದೂ ಸಹ ಜಾತಿ ಜನಾಂಗಗಳಿಗೆ ಮಹತ್ವವನ್ನು ಕೊಟ್ಟಿರಲ್ಲಿಲ್ಲ, ಬಸವಣ್ಣ ಮತ್ತು ಕುವೆಂಪು ಸಾರಿರುವ ಸಂದೇಶಗಳನ್ನು ಪಾಲನೆ ಮಾಡಿದರೆ ಇಂದು ಸಮಾಜದಲ್ಲಿ ನಡೆಯುತ್ತಿರುವ ಜಾತಿ ಧರ್ಮಗಳೆಂಬ ಕಲಹ, ಜಾತಿ ಜನಾಂಗದ ಹೆಸರಿನಲ್ಲಿ ರಾಜಕಿಯವಾಗುತ್ತಿರಲ್ಲಿಲ್ಲ ಎಂದು ವಿಷಾಧಿಸಿದರು. ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ-ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿ ಧರ್ಮ ಜಾತಿ ಜನಾಂಗಕ್ಕಿ ದೊಡ್ಡದ್ದು, ಈ ಉದ್ದೇಶದಿಂದ ಕನ್ನಡ ಸಾಹಿತ್ಯ ಜಾತ್ರೆಯನ್ನು ನಡೆಸಲಾಗುತ್ತದೆ ಎಂದರು. ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ ಕನ್ನಡ ಭಾಷೆಯನ್ನು ವಿದ್ಯಾರ್ಥಿ ಹಂತದಲ್ಲೆ ಪರಿಚಯಿಸಬೇಕಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್‌ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ.ಸದಸ್ಯೆ ಸರೋಜಮ್ಮ, ಕಲ್ಮಠದ ಮಹಾಂತಸ್ವಾಮೀಜಿ, ತಾ.ಪಂ.ಸದಸ್ಯೆ ಲೀಲಾವತಿ, ಗ್ರಾ.ಪಂ.ಅಧ್ಯಕ್ಷೆ ವೀಣಾ, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಕೆ.ಚಂದ್ರಶೇಖರ್, ಗ್ರಾಮದ ಹಿರಿಯ ಸಿದ್ದಮಲ್ಲಯ್ಯ, ಕಸಾಪ ಕೋಶಾಧಿಕಾರಿ ಎಸ್.ಎ.ಮುರುಳೀಧರ್, ಉಪನ್ಯಾಸಕ ಕೆ.ಪಿ.ಜಯಕುಮಾರ್, ಕಸಾಪದ ಎಲ್.ಎಂ.ಪ್ರೇಮಾ ಪ್ರಮುಖ ರಾದ ನಾಗರಾಜಶೆಟ್ಟಿ, ದೀಪಕ್, ರವಿ ಸುಬ್ಬಯ್ಯ, ಪ್ರವೀಣ್‌ಉತ್ತಪ್ಪ, ಕವನ್ ಕಾರ್ಯಪ್ಪ, ಮಾಧ್ಯಮಕಾಯದರ್ಶಿ ಎನ್. ಎ.ಅಶ್ವಥ್, ಕಸಾಪದ ಜವರಪ್ಪ, ವಸತಿ ಪ್ರಾಂಶುಪಾಲೆ ಕೆ.ಎನ್.ಭಾರತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಪಿಡಿಒ ಚಂದ್ರೇಗೌಡ ವೇದಿಕೆಯಲ್ಲಿದ್ದರು. ಉದ್ಘಾಟನೆ
ವಸತಿ ಶಾಲೆಯ ಆವರಣದಲ್ಲಿ ತಹಶೀಲ್ದಾರ್ ಮಹೇಶ್ ಧjಜಾ ರೋಹಣ ಮೂಲಕ ಚಾಲನೆ ನೀಡಿದರು.ಕ್ಯಾಪ್ಟನ್ ಚಿಣ್ಣಪ್ಪ ದ್ವಾರ,ಕೈಸರವಳ್ಳಿ ಬಸಪ್ಪದ್ವಾರ,ಎಂ.ಡಿ.ಸುಬ್ಬಯ್ಯ ದ್ವಾರ,ಮುಕ್ಕಾಟಿ ಗಣಪತಿ ದ್ವಾರ,ಎಚ್.ಎಂ,.ಶಾಂತ ವೀರಪ್ಪ ದ್ವಾರಗಳನ್ನು ಸ್ಥಳೀಯ ಜನ ಪ್ರತಿನಿಧಿಗಳು ಉದ್ಘಾಟಿಸಿದರು. ಕ್ಯಾಪ್ಟನ್ ಸಿ.ಕೆ.ಶಿವರಾಮ್ ಸಭಾಂಗಣ ಹಾಗೂ ಜಂಗಮರ ಶರಣೆ ಲಿಂಗೈಕ್ಯ ಶಾಂತಮ್ಮ ಪ್ರಧಾನ ವೇದಿಕೆಯನ್ನು ಕೂಡ ಉದ್ಘಾಟಿಸಲಾಯಿತು.
Related Articles
ಸಮ್ಮೇಳನಾಧ್ಯಕ್ಷೆ ಜಲ ಕಾಳಪ್ಪ ಅವರ ಮರೆವಣಿಗೆಯನ್ನು ತೆರದ ವಾಹನದಲ್ಲಿ ಆಲೂರುಸಿದ್ದಾಪುುರ ಪೆಟ್ರೋಲ್‌ಬಂಕ್ ಮಾರ್ಗವಾಗಿ ಮುಖ್ಯರಸ್ತೆಯ ಮೂಲಕ ವಸತಿ ಶಾಲೆಯಲ್ಲಿ ನಿರ್ಮಿಸಿದ್ದ ಜಂಗಮರ ಶರಣೆ ಲಿಂಗೈಕ್ಯಶಾಂತಮ್ಮ ಪ್ರಧಾನ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯು ಮಂಗಳವಾದ್ಯ,ಪೂರ್ಣಕುಂಭ, ಡೊಳ್ಳುಕುಣಿತ, ಕಂಸಾಳೆ, ಸ್ತ್ರೀಶಕ್ತಿ, ಧರ್ಮಸ್ಥಳ ಸಂಘ,ಹಾಗೂ ಕನ್ನಡಪರ ಸಂಘಟನೆಗಳು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರ ಸಂಘ, ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾಡ ದೇವತೆ ಭುವನೇಶ್ವರಿಯ ಕನ್ನಡ ತೇರಿನೊಂದಿಗೆ ಮಳೆಯ ನುಡುವೆ ಅದ್ದೂರಿಯಾಗಿ ಸಾಗಿತು.
Advertisement