ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಆದರೆ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿಯೇ ಕೋವಿಡ್ ಪರೀಕ್ಷೆಗೆ ಅಗತ್ಯವಾದ ಪ್ರಯೋಗಾಯಲಯ ಸ್ಥಾಪನೆ ಕನಾಸಗಿಯೇ ಇದೆ.
ಜಿಲ್ಲೆಯಲ್ಲಿ ಕೋವಿಡ್ 19 ಪ್ರಯೋಗಾಲಯ ಸ್ಥಾಪನೆಗೆ ಜಿಲ್ಲಾ ಆರೋಗ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಸರ್ಕಾರ ಮಾತ್ರ ಸ್ಪಂದಿಸಿಲ್ಲ. ಹೀಗಾಗಿ ಕೋವಿಡ್ ವೈದ್ಯಕೀಯ ಪರೀಕ್ಷೆಗೆ ಜಿಲ್ಲೆಯ ಆರೋಗ್ಯ ಇಲಾಖೆ ನಿತ್ಯ ಬೆಂಗಳೂರಿಗೆ ಸುತ್ತಾಡಬೇಕಿದೆ.
ಅಸಮಾಧಾನ: ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಸರ್ಕಾರ ಈಗಾಗಲೇ ಮಂಡ್ಯ ಮತ್ತಿತರ ಜಿಲ್ಲೆ ಗಳಲ್ಲಿ ಕೋವಿಡ್ 19 ವೈದ್ಯಕೀಯ ಪರೀಕ್ಷೆಗಾಗಿ ಸುಸಜ್ಜಿತ ಪ್ರಯೋಗಾಲಯಗಳ ಸ್ಥಾಪನೆಗೆ ಮುಂದಾ ಗಿದೆ. ಆದರೆ ವಿಪರ್ಯಾಸ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರು ಜಿಲ್ಲೆಯವರೇ ಆದರೂ ಜಿಲ್ಲೆಯಲ್ಲಿ ಕೊರೊನಾ ಪ್ರಯೋಗಾಲಯಕ್ಕೆ ಸರ್ಕಾರ ಗ್ರೀನ್‌ಸಿಗ್ನಲ್ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರು ಒಂದೆಡೆ ಚೇತರಿಕೆ, ಮತ್ತೂಂದು ಕಡೆ ಸೋಂಕಿತರ ಸಂಖ್ಯೆ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹೀಗಾಗಿ ಜಿಲ್ಲೆಗೆ ಕೋವಿಡ್ 19 ಸೋಂಕು ಪತ್ತೆಗೆ ಅಗತ್ಯವಾದ ಪ್ರಯೋಗಾಲಯ ಅವಶ್ಯಕವಾದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ.
ಜಿಲ್ಲೆಗೆ ಕೋವಿಡ್ ಪ್ರಯೋಗಾಲಯ ಬೇಕೆಂದು ಸರ್ಕಾರಕ್ಕೆ ಆರಂಭದಲ್ಲಿಯೇ ಆರೋಗ್ಯ ಇಲಾಖೆಯಿಂದ ಪ್ರಸ್ತಾವನೆ ಕಳಿಸಿ ದ್ದೇವೆ. ಆದರೆ ಸರ್ಕಾರ ಅದಕ್ಕೆ ಬೇಕಾದ ಯಂತ್ರೋ ಪಕರಣ ಒದಗಿಸಬೇಕು. ಸದ್ಯಕ್ಕೆ ಬೆಂಗ ಳೂರಿಗೆ ವರದಿಗಳನ್ನು ಕಳುಹಿಸಿ ಕೊಡಲಾಗುತ್ತಿದೆ.
–ಡಾ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ
–ಕಾಗತಿ ನಾಗರಾಜಪ್ಪ