Advertisement
ತಿರಸ್ಕಾರ ಮನೋಭಾವ: ಕೋವಿಡ್ ವೈರಸ್ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕಾರಣ ಮಾಡಬೇಡಿ ಎಂದು ಹೇಳುವ ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳು ಕಾಂಗ್ರೆಸ್ ನಾಯಕರು ನೀಡುವ ಸಲಹೆ ಗಳನ್ನು ತಿರಸ್ಕರಿಸಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ಅನೇಕ ನಾಯಕರು ಸಲಹೆ ನೀಡಿದರೂ ಅವುಗಳನ್ನು ಬಿಜೆಪಿ ನಾಯಕರು ಅನುಷ್ಠಾನಗೊಳಿಸುವುದರ ಬದಲು ತಿರಸ್ಕಾರ ಮನೋಭಾವದಿಂದ ನೋಡಲಾಗುತ್ತಿದೆ ಎಂದು ಕಿಡಿ ಕಾರಿದರು. ಬಿಜೆಪಿ ನಾಯಕಯರು ಕೋವಿಡ್ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜನರಿಗೆ ಅಗತ್ಯ ಸೌಲಭ್ಯ ಒದಗಿ ಸುತ್ತಿಲ್ಲ. ತಪಾ ಸಣೆಗೆ ಬೇಕಾದ ಕಿಟ್ ನೀಡುತ್ತಿಲ್ಲ. ಬರೀ ಲಾಕ್‌ಡೌನ್ ಘೋಷಣೆ ಮಾಡಿದರೆ ಸಾಕೆ ಎಂದು ರೇವಣ್ಣ ಸರ್ಕಾರದ ಧೋರಣೆಯನ್ನು ಪ್ರಶ್ನಿಸಿದರು.
ಮಾಜಿ ಸಚಿವ ಹಾಗೂ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾಗಿ ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಬಡವರಿಗೆ ಊಟಕ್ಕೆ ಕನಿಷ್ಠ ಸರ್ಕಾರ ಇದುವರೆಗೂ ಏನು ಸಹಾಯ ಮಾಡಿಲ್ಲ. ಬಡವರೇನು ಬಿರಿಯಾನಿ ಕೊಡಿ ಎಂದು ಕೇಳುತ್ತಿಲ್ಲ. ಅನ್ನ, ಸಾಂಬಾರು ಕೊಟ್ಟರು. ಸಾಕು. ಆದರೆ ಸರ್ಕಾರ ಈ ಬಗ್ಗೆ ಕನಿಷ್ಠ ಕಾರ್ಯಕ್ರಮ ರೂಪಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಇಂತಹ ಜನ ವಿರೋಧಿ, ಬಡವರ ವಿರೋಧಿ ಸರ್ಕಾರ ಮತ್ತೂಂದಿಲ್ಲ ಎಂದರು.