Advertisement

ಕಲಬುರಗಿಗೆ ಹೋಗಿ ಅಡುಗೆ ಮಾಡೋದು ಇರಲ್ಲ

10:50 PM Jan 26, 2020 | Lakshmi GovindaRaj |

ಬಾಗಲಕೋಟೆ: ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉಸ್ತುವಾರಿ ಸಚಿವನಾಗಿ ಈಗಾಗಲೇ 3-4 ಬಾರಿ ಹೋಗಿದ್ದೇನೆ. ಸಮಿತಿಗಳ ಸಭೆಯೂ ನಡೆಸಿದ್ದು, ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸಿದ್ದೇನೆ. ನಾವೇನು ಅಲ್ಲಿ ಹೋಗಿ ಅಡುಗೆ ಮಾಡೋದು ಇರುವುದಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

Advertisement

ಭಾನುವಾರ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿ, ನಾನು ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆ ಕುರಿತು ಮುತುವರ್ಜಿ ವಹಿಸಲಿಲ್ಲ ಎಂಬುದು ಸರಿಯಲ್ಲ. ಸಿಎಂ ಜತೆಗೆ ಚರ್ಚಿಸಿ ಈಗಾಗಲೇ ಸರ್ಕಾರದಿಂದ ಅನುದಾನ ಕೊಡಿಸಿದ್ದೇನೆ. ನಾನೂ ಹಲವು ಬಾರಿ ಅಲ್ಲಿ ವಿವಿಧ ಸಮಿತಿಗಳ ಸಭೆ ನಡೆಸಿ, ಪೂರ್ವ ತಯಾರಿ ಕುರಿತು ಚರ್ಚಿಸಿದ್ದೇನೆ ಎಂದರು.

ವಿಶ್ವನಾಥ ಅವರಿಗೆ ಸಚಿವ ಸ್ಥಾನ ಕೊಡಲು ಎಸ್‌.ಟಿ. ಸೋಮಶೇಖರ್‌ ವಿರೋಧ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದರು.ನೀಡಲಾಗಿತ್ತು. ಈ ಸಂದರ್ಭದಲ್ಲಿ ಜೈಲು ಆವರಣದಲ್ಲಿದ್ದ ತೆಂಗಿನ ಮರವೇರಿದ್ದ ಕೈದಿ ಅಲ್ಲಿಂದ ಆಯತಪ್ಪಿ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next