Advertisement

ಮುಚ್ಚಳಗುಡ್ಡ ಕ್ಯಾಂಪ್‌ನಲ್ಲಿ ಸ್ಮಶಾನ ಇಲ್ಲ

12:42 PM Jan 04, 2020 | Suhan S |

ಸಿರವಾರ: ಪಟ್ಟಣದ 11ನೇ ವಾರ್ಡ್‌ ವ್ಯಾಪ್ತಿಯ ಮುಚ್ಚಳಗುಡ್ಡ ಕ್ಯಾಂಪ್‌ಗೆ ಸ್ಮಶಾನ ಜಾಗವಿಲ್ಲದೆ ಶವ ಸಂಸ್ಕಾರಕ್ಕೆ ಸ್ಥಳೀಯರು ಪರಿತಪಿಸುವಂತಾಗಿದೆ. ಪಟ್ಟಣದಿಂದ 2 ಕಿ.ಮೀ. ಅಂತರದಲ್ಲಿರುವ ಮುಚ್ಚಳಗುಡ್ಡ ಕ್ಯಾಂಪ್‌ ನಲ್ಲಿ 1500 ಜನಸಂಖ್ಯೆ ಇದೆ. ಇಲ್ಲಿ ಹಿಂದಿನಿಂದಲೂ ಸ್ಮಶಾನಕ್ಕೆ ಜಾಗೆ ಇಲ್ಲ. ಜಾಗೆ ಒದಗಿಸುವಂತೆ ಸ್ಥಳೀಯರು ದಶಕದಿಂದಲೂ ಆಗ್ರಹಿಸುತ್ತ ಬಂದಿದ್ದರೂ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಸ್ಪಂದಿಸಿಲ್ಲ.

Advertisement

ಗುಡ್ಡ-ಕಾಲುವೆ ದಂಡೆ ಜಾಗ: ಮುಚ್ಚಳಗುಡ್ಡ ಕ್ಯಾಂಪ್‌ ನಲ್ಲಿ ಯಾರಾದರೂ ಮೃತಪಟ್ಟರೆ ರುದ್ರಭೂಮಿ ಇಲ್ಲದೇ ಇರುವುದರಿಂದ ಪಕ್ಕದ ಗುಡ್ಡದ ಪ್ರದೇಶ ಇಲ್ಲವೇ ಕಾಲುವೆ ದಂಡೆಯಲ್ಲಿ ಶವ ಹೂಳುವ ಇಲ್ಲವೇ ಸುಟ್ಟು ಸಂಸ್ಕಾರ ನೆರವೇರಿಸಲಾಗುತ್ತಿದೆ. ಅಧಿಕಾರಿಗಳಿಗೆ ಮನವಿ: ಮುಚ್ಚಳಗುಡ್ಡ ಕ್ಯಾಂಪ್‌ಗೆ ಸ್ಮಶಾನ ಜಾಗೆ ಒದಗಿಸುವಂತೆ ಸ್ಥಳೀಯರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತಹಶೀಲ್ದಾರ್‌ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಸ್ಪಂದಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ತಾಲೂಕು ಆಡಳಿತ ಇನ್ನಾದರೂ ಇತ್ತ ಗಮನಹರಿಸಿ ಸ್ಥಳೀಯರಿಗೆ ಸ್ಮಶಾನಕ್ಕಾಗಿ ಜಾಗೆ ನೀಡಬೇಕಿದೆ.

ಮುಚ್ಚಳಗುಡ್ಡ ಕ್ಯಾಂಪ್‌ನಲ್ಲಿ ಯಾರಾದರೂ ನಿಧನರಾದರೆ ಶವ ಸಂಸ್ಕಾರಕ್ಕೆ ಜಾಗೆ ಇಲ್ಲದಾಗಿದೆ. ಮೊದಲಿನಿಂದಲೂ ಗುಡ್ಡ ಅಥವಾ ಕಾಲುವೆ, ರಸ್ತೆ ಪಕ್ಕ ಶವ ಸಂಸ್ಕಾರ ನೆರವೇರಿಸಲಾಗುತ್ತಿದೆ. ಸರ್ಕಾರ ಸ್ಮಶಾನಕ್ಕೆ ಜಾಗೆ ನೀಡಬೇಕಿದೆ.- ದೇವರಾಜ, ಸ್ಥಳೀಯ ನಿವಾಸಿ

 

‌-ಮಹೇಶ ಪಾಟೀಲ

Advertisement
Advertisement

Udayavani is now on Telegram. Click here to join our channel and stay updated with the latest news.

Next