Advertisement
ದೂರು ಬಂದಿಲ್ಲದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನಗದು ಹಣದ ಕೊರತೆ ಕಂಡುಬಂದ ಬಗ್ಗೆ ಲೀಡ್ ಬ್ಯಾಂಕಿಗೆ ಯಾವುದೇ ದೂರು ಬಂದಿಲ್ಲ ಎಂದು ದ.ಕ. ಜಿಲ್ಲೆಯ ಲೀಡ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜರ್ ರಾಘವ ಯಜಮಾನ್ಯ ತಿಳಿಸಿದ್ದಾರೆ.
ಎಟಿಎಂಗಳಲ್ಲಿ ಹಣ ಖಾಲಿಯಾಗದಂತೆ ನೋಡಿಕೊಳ್ಳಬೇಕು ಹಾಗೂ ಬುಧ ವಾರ ರಜೆಯಿದ್ದರೂ ಎಲ್ಲ ಎಟಿಎಂಗಳಿಗೆ ನೋಟು ತುಂಬಿಸಬೇಕು ಎಂದು ಎಸ್‌ಬಿಐ ಕಾರ್ಪೊರೇಟ್ ಕಚೇರಿ ಯಿಂದ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಮಂಗಳೂರಿನ ಎಲ್ಲ ಎಟಿಎಂಗಳಿಗೆ ನೋಟುಗಳನ್ನು ಪೂರೈಕೆ ಮಾಡಲಾಗಿದೆ ಎಂದು ಎಸ್‌ಬಿಐ ಮಂಗಳೂರು ಕಚೇರಿಯ ಮೂಲಗಳು ತಿಳಿಸಿವೆ. ಸಮಸ್ಯೆ ಇಲ್ಲ
ಮಂಗಳೂರಿನಲ್ಲಿ ಕಾರ್ಪೊರೇಶನ್ ಬ್ಯಾಂಕ್ ಅಧಿಕ ಸಂಖ್ಯೆಯಲ್ಲಿ ಎಟಿಎಂ ಹೊಂದಿದ್ದು, ಯಾವುದೇ ಈ ಎಟಿಎಂಗಳಲ್ಲಿ ನೋಟ್‌ಗಳ ಅಭಾವ ಕಂಡು ಬಂದಿಲ್ಲ. ಬುಧವಾರ ಬೆಳಗ್ಗೆ ಎಲ್ಲ ಎಟಿಎಂಗಳಿಗೆ ಹಣ ತುಂಬಿಸಲಾಗಿದೆ. ಉತ್ತರ ಭಾರತದ ಕೆಲವೆಡೆ ಕೆಲವು ಬ್ಯಾಂಕ್‌ಗಳಲ್ಲಿ ನಗದು ಸಮಸ್ಯೆ ಇತ್ತು. ಮಂಗಳೂರಿನಲ್ಲಿ ಆ ಸಮಸ್ಯೆ ಇಲ್ಲ ಎಂದು ಕಾರ್ಪ್ ಬ್ಯಾಂಕ್ ಐಟಿ ವಿಭಾಗದ ಡಿಜಿಎಂ ಶ್ರೀಧರ್ ತಿಳಿಸಿದ್ದಾರೆ.
Related Articles
ಸರಣಿ ರಜೆ ಸಂದರ್ಭದಲ್ಲಿ ಆ ದಿನಗಳಿಗೆ ಅಗತ್ಯವಿರುವ ನಗದನ್ನು ಮುಂಗಡವಾಗಿಯೇ ಎಟಿಎಂಗಳಿಗೆ ಹಣ ತುಂಬಿಸುವ ಏಜೆನ್ಸಿಗಳಿಗೆ ನೀಡಲಾಗುತ್ತದೆ ಎನ್ನುತ್ತಾರೆ ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳು.
Advertisement
ಕ್ಯಾಶ್‌ಗೆ ತೊಂದರೆ ಇಲ್ಲವಿಜಯ ಬ್ಯಾಂಕಿನ ಎಟಿಎಂಗಳಲ್ಲಿ ನಗದು ತುಂಬಿಸಲಾಗಿದೆ. ಯಾವುದೇ ಕೊರತೆ ಇಲ್ಲ ಎಂದು ಬ್ಯಾಂಕಿನ ಪ್ರಾದೇ ಶಿಕ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ. ಗಾಬರಿ ಬೇಡ
ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ ಅವರು, ಸಾಮಾನ್ಯವಾಗಿ ಅಖೀಲ ಭಾರತ ಮಟ್ಟದಲ್ಲಿ ಶೇ. 10ರಿಂದ 20ರಷ್ಟು ಎಟಿಎಂಗಳಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ನಗದು ವಿತರಣೆಯಲ್ಲಿ ಆಗುತ್ತಿರುವ ಏರು-ಪೇರು ಇದಕ್ಕೆ ಒಂದು ಕಾರಣ. ಕೆಲವು ರಾಜ್ಯಗಳ ಎಟಿಎಂಗಳಲ್ಲಿ ಯಾವತ್ತೂ ಹಣದ ಕೊರತೆ ಕಂಡು ಬರುವುದೇ ಇಲ್ಲ. ನಗದು ವಿತರಣೆ ಯನ್ನು ಪರಿಣಾಮ ಕಾರಿಯಾಗಿ ಮಾಡಿದರೆ ಈ ಸಮಸ್ಯೆ ಬರಲಾರದು’ ಎಂದು ತಿಳಿಸಿದ್ದಾರೆ. ನಗದು ಪೂರೈಕೆ ವಿಳಂಬ
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನಗದು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ. ಕೆಲವೊಮ್ಮೆ ನಗದು ಕೊರತೆ ಉಂಟಾಗುವ ಆತಂಕ ಎದುರಾಗಿದ್ದುಂಟು. ಆದರೂ ಅದನ್ನು ಸಮತೋಲನ ಗೊಳಿಸಲಾಗಿದೆ. ಮತ್ತೆ ಪೂರೈಕೆಯಲ್ಲಿ ಹೆಚ್ಚಳವಾಗಬಹುದೆಂಬ ನಿರೀಕ್ಷೆ ಇದೆ ಎಂದು ಜಿಲ್ಲೆಯ ಪ್ರಮುಖ ಬ್ಯಾಂಕ್‌ಗಳ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.