Advertisement
ನಗರದ ಕ್ವೀನ್ಸ್ ರಸ್ತೆಯ ಖಾಸಗಿ ಭವನದಲ್ಲಿ ಗುರುವಾರ ಬಿಎಸ್‌ಪಿ ಹಮ್ಮಿಕೊಂಡಿದ್ದ ಮುಸ್ಲಿಂ ಮುಖಂಡ ಶಹರಿಯಾರ್ ಖಾನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಮೂರನೇ ಅತಿ ದೊಡ್ಡ ಪಕ್ಷ ಬಿಎಸ್ಪಿ ಆಗಿದೆ. ಅಲ್ಲದೆ, ಪಕ್ಷಕ್ಕೆ ತನ್ನದೇ ಆದ ಮತಬ್ಯಾಂಕ್ ಇದೆ. ಹೀಗಾಗಿ, ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸ್ವತಂತ್ರವಾಗಿ 28 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಹೇಳಿದರು.
Related Articles
Advertisement
ಅದೇ ರೀತಿ, ಸಾಚಾರ್ ಸಮಿತಿ ವರದಿ ಜಾರಿ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಹೋರಾಟ ನಡೆಸಲಾಗುವುದು ಎಂದರು. ಬಿಎಸ್‌ಪಿ ರಾಜ್ಯ ಘಟಕ ಅಧ್ಯಕ್ಷ ಪ್ರೊ.ಹರಿರಾಂ, ರಾಜ್ಯ ಉಸ್ತುವಾರಿ ಎಂ.ಎಲ್. ತೋಮರ್, ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಖಜಾಂಚಿ ಸಲ್ಮಾ ಸೇರಿದಂತೆ ಪ್ರಮುಖರಿದ್ದರು.
ಏಪ್ರಿಲ್ 10ಕ್ಕೆ ಮೈಸೂರಿಗೆ ಮಾಯಾವತಿ: ಏಪ್ರಿಲ್ 10ರಂದು ರಾಜ್ಯದಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಅಂದು ಮೈಸೂರಿನಲ್ಲಿ ಲೋಕಸಭಾ ಚುನಾವಣೆ ಪ್ರಚಾರ ನಡೆಸಲಿದ್ದು, ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ ಎಂದು ಅಶೋಕ್ ಸಿದ್ಧಾರ್ಥ ಮಾಹಿತಿ ನೀಡಿದರು.