Advertisement

ಮಕ್ಕಳಿಗೆ ಪುಸ್ತಕ ಇಲ್ಲ ; ಶಿಕ್ಷಕರಿಗೆ ನೆಟ್‌ವರ್ಕ್‌ ಇಲ್ಲ 

06:25 AM Aug 31, 2017 | |

ಬೆಳ್ತಂಗಡಿ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ದೈನಂದಿನ ಹಾಜರಾತಿಯನ್ನು ಮುಖ್ಯ ಶಿಕ್ಷಕರು ಪ್ರತಿದಿನ ಮೊಬೈಲ್‌ ಮೂಲಕ ಕಳುಹಿಸಲು ಶಿಕ್ಷಣ ಇಲಾಖೆ ಕಡ್ಡಾಯ ಮಾಡಿದೆ. ಹಾಗೂ ಎಲ್ಲ ವಿದ್ಯಾರ್ಥಿಗಳ ದಾಖಲಾತಿ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ಗೆ ಕಳುಹಿಸುವಂತೆ ತಾಕೀತು ಮಾಡಿದೆ. ಆದ್ದರಿಂದ ಮುಖ್ಯ ಶಿಕ್ಷಕರು ಈಗ ನೆಟ್‌ವರ್ಕ್‌ಗಾಗಿ ಊರೂರು ಅಲೆಯುತ್ತಿದ್ದಾರೆ. ಪಾಠವಾದರೂ ಮಾಡಲು ಇನ್ನೂ ಪೂರ್ಣಪ್ರಮಾಣದಲ್ಲಿ ಪುಸ್ತಕಗಳೇ ಬಂದಿಲ್ಲ. ಹೀಗಿದೆ ಶಿಕ್ಷಣ ಇಲಾಖೆಯ ಗೊಂದಲಗಳು.

Advertisement

ಶಾಲಾ ಬಿಸಿಯೂಟದ ಮಾಹಿತಿಯನ್ನು ಶಾಲೆ, ಶಿಕ್ಷಕರ ಕೋಡ್‌, ದಿನಾಂಕ, ಹಾಜರಾದ ಶಿಕ್ಷಕರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನು ಮಧ್ಯಾಹ್ನ 2.30ರ ಒಳಗೆ ಶಿಕ್ಷಕರು 15,544 ಸಂಖ್ಯೆಗೆ ಎಸ್‌ಎಂಎಸ್‌ ಮಾಡಬೇಕು. ಸಂಜೆಯ ಒಳಗೆ ಮಾಹಿತಿ ನೀಡದಿದ್ದರೆ ಶಿಕ್ಷಣ ಇಲಾಖೆಯಿಂದ ನೋಟಿಸ್‌ ಬರು ತ್ತದೆ. ಆ ದಿನದ ಬಿಸಿಯೂಟದ ಖರ್ಚು ಶಿಕ್ಷಕರ ತಲೆಮೇಲೆ ಬೀಳುತ್ತದೆ, ಅಪೂರ್ಣ ಮಾಹಿತಿ ಯಿದ್ದರೆ ಬಿಸಿಯೂಟದ ಸಾಮಗ್ರಿ ಮಂಜೂ ರಾಗುವು ದಿಲ್ಲ ಎಂದು ಎಚ್ಚರಿಸಲಾಗಿದೆ. ಮಾಹಿತಿ ನೀಡುವಾಗ ಎಡವಟ್ಟಾದರೂ, ಎಚ್ಚರ ತಪ್ಪಿದರೂ, ಪೂರ್ಣವಿರಾಮ, ಅಲ್ಪ ವಿರಾಮ ಹಾಕುವುದು ವ್ಯತ್ಯಾಸವಾದರೂ ಮೆಸೇಜ್‌ ಸ್ವೀಕಾರಾರ್ಹವಲ್ಲ. 1ರಿಂದ 10ನೇ ತರಗತಿ ವರೆಗಿನ ಮಾಹಿತಿ ಕಡ್ಡಾಯ. ಕಡಿಮೆ ತರಗತಿ ಗಳಿದ್ದರೆ ಅನಂತರದ ತರಗತಿಗಳ ಹಾಜ ರಾತಿ 0 ಎಂದು ನಮೂದಿಸಬೇಕು. ದ.ಕ., ಉಡುಪಿ ಜಿಲ್ಲೆಯ ಬಹುತೇಕ ಶಾಲೆ ಗಳು ಗ್ರಾಮಾಂತರ ಪ್ರದೇಶ ಗಳಲ್ಲಿದ್ದು ಮೊಬೈಲ್‌ ನೆಟ್‌ ವರ್ಕ್‌ ಸಮರ್ಪಕ ವಾಗಿಲ್ಲ. ಹಾಗಾಗಿ ಮುಖ್ಯ ಶಿಕ್ಷಕರು ಕೈಯಲ್ಲಿ ಮೊಬೈಲ್‌ ಎತ್ತಿ ಹಿಡಿದು ನೆಟ್‌ವರ್ಕ್‌ ಗಾಗಿ ಅಲೆದಾಡುತ್ತಿದ್ದಾರೆ.

ಮಕ್ಕಳ ದಾಖಲಾತಿ
ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಕ್ಕಳ ದಾಖಲಾತಿ ವಿವರಗಳನ್ನು ಆನ್‌ಲೆ„ನ್‌ ಮೂಲಕವೇ ಎಂಟ್ರಿ ಮಾಡಬೇಕು. ಶಿಕ್ಷಣ ಇಲಾಖೆ ಆಯುಕ್ತರ ಈ ಆದೇಶ ಶಿಕ್ಷಕ ರಿಗೆ ಉರುಳಾಗಿದೆ. ಆನ್‌ಲೆ„ನ್‌ ಮೂಲಕ ದಾಖಲು ಮಾಡದ ಯಾವುದೇ ದಾಖಲಾತಿ ಅಸಿಂಧುವಾಗುತ್ತದೆ. ಯಾವುದೇ ಕಾರಣಕ್ಕೂ ದಾಖಲಾತಿ ಪುಸ್ತಕದಲ್ಲಿ ಮಾತ್ರ ದಾಖಲು ಮಾಡಬಾರದು. ವಿದ್ಯಾರ್ಥಿಗಳಿಗೆ ಸರಕಾರದಿಂದ ದೊರೆಯುವ ವಿದ್ಯಾರ್ಥಿವೇತನ ಸಹಿತ ಎಲ್ಲ ಸೌಲಭ್ಯಕ್ಕೂ ಈ ದಾಖಲಾತಿ ಮೂಲಕ ದೊರೆಯುವ ಗುರುತಿನ ಸಂಖ್ಯೆಯೇ ಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಸೌಲಭ್ಯಕ್ಕೆ ಕತ್ತರಿ.

ಸರಕಾರ ಕೊಟ್ಟಿಲ್ಲ
ಪ್ರಾಥಮಿಕ ಶಾಲೆಗಳಿಗೆ ಶಿಕ್ಷಣ ಇಲಾಖೆ ಕಂಪ್ಯೂಟರ್‌ ಕೊಟ್ಟಿಲ್ಲ, ಕೆಲವೆಡೆ ದಾನಿಗಳಿಂದ ಕಂಪ್ಯೂಟರ್‌ ವ್ಯವಸ್ಥೆಯಾಗಿದ್ದರೂ ಒಂದಷ್ಟು ನಿರ್ವಹಣೆ ಇಲ್ಲದೆ ಹಾಳಾಗಿದೆ. ಸರಕಾರದಿಂದ ಇಂಟರ್‌ನೆಟ್‌ ವ್ಯವಸ್ಥೆಯಂತೂ ಇಲ್ಲ. ಸರಕಾರ ಇದಕ್ಕಾಗಿ ಅನುದಾನವನ್ನೂ ನೀಡಿಲ್ಲ. ಹಾಗಿದ್ದರೂ ಕಂಪ್ಯೂಟರ್‌ ಸೆಂಟರ್‌ ಗಳಿಗೆ ಅಥವಾ ಶಿಕ್ಷಣ ಸಂಪನ್ಮೂಲ ಕೇಂದ್ರ ಗಳಿಗೆ ಎಡತಾಕುವ ಮೂಲಕ ಶಿಕ್ಷಕರು ದಿನ ಗಟ್ಟಲೆ ಕುಳಿತು ವಿದ್ಯಾರ್ಥಿಗಳ ಮಾಹಿತಿ ತುಂಬ ಬೇಕು. ಗ್ರಾಮಾಂತರದ ಇಂಟರ್‌ ನೆಟ್‌ ಸಮಸ್ಯೆ ಈ ಡಿಜಿಟಲ್‌ ಇಂಡಿಯಾ ಕಾಲ ದಲ್ಲೂ ಸುಧಾರಿ ಸದ ಕಾರಣ ಕಾಯು ವಿಕೆ ಗಿಂತನ್ಯ ತಪವು ಇಲ್ಲ ಎನ್ನುವುದೇ ನಿತ್ಯಜಪವಾಗಿರುತ್ತದೆ.

ವ್ಯವಸ್ಥೆ  ಮಾಡಲಿ
ಶಾಲೆಗಳಲ್ಲಿ ಇಂಟರ್‌ನೆಟ್‌ ವ್ಯವಸ್ಥೆ ಇಲ್ಲ. ಕಂಪ್ಯೂಟರ್‌ ವ್ಯವಸ್ಥೆ ಇಲ್ಲ ಎಂದು ಇಲಾಖೆಗೆ ತಿಳಿದಿಲ್ಲವೇ. ಹಾಗಿದ್ದೂ ಇಂತಹ ಸುತ್ತೋಲೆ ನೀಡುವ ಮೂಲಕ ಶಿಕ್ಷಕರನ್ನು ಗೋಳು ಹೊಯ್ದುಕೊಳ್ಳಲಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು. ಇಂಟರ್‌ನೆಟ್‌ ಹಾಗೂ ಮೊಬೆ„ಲ್‌ ನೆಟ್‌ವರ್ಕ್‌ ವ್ಯವಸ್ಥೆ ಎಲ್ಲ ಗ್ರಾಮೀಣ ಭಾಗ ದಲ್ಲಿ ಇಂದಿಗೂ ಸಮರ್ಪಕವಾಗಿ ಆಗದೇ ಇರು ವುದರಿಂದ ಶಿಕ್ಷಕರ ಚಿತ್ತ ನೆಟ್‌ವರ್ಕ್‌ ಹುಡುಕಾಟದತ್ತ ಸಾಗಿದೆ. ಸೆ„ಬರ್‌ ಕೇಂದ್ರ ಗಳಲ್ಲಿ ಶಾಲಾ ದಾಖಲಾತಿಯನ್ನು ಕಳು ಹಿಸುವುದಕ್ಕೆ ಹಣ ಪಾವತಿಸಬೇಕಾಗಿದ್ದು ಇಲಾಖೆಯಿಂದ ದೊರೆಯುವುದಿಲ್ಲ. ಹೆಚ್ಚಿನ ಶಾಲೆಗಳ ಮುಖ್ಯ ಶಿಕ್ಷಕರು ತಾಲೂಕು ಕೇಂದ್ರಕ್ಕೆ ಅಥವಾ ಬಿಆರ್‌ಸಿಗೆ ಕಡತಗಳನ್ನು ತಂದು ದಾಖಲಿಸಬೇಕಾಗಿದೆ. ತಾಲೂಕಿನ ಎಲ್ಲ ಶಾಲೆಗಳ ದಾಖಲಾತಿ ಕಡತಗಳು ಬಿಆರ್‌ಸಿ ಕೇಂದ್ರಗಳಿಗೆ ತಂದಲ್ಲಿ ಅದನ್ನು ದಾಖಲು ಮಾಡಲು ಹಲವು ದಿನಗಳು ಬೇಕಾಗುತ್ತದೆ.

Advertisement

ಪಠ್ಯ ಪುಸ್ತಕ ಬಂದಿಲ್ಲ ; ಪಾಠ ಇಲ್ಲ
ಶಾಲೆ ಆರಂಭವಾಗಿ ಎರಡೂವರೆ ತಿಂಗಳಾಗುತ್ತಾ ಬಂದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ವಿತರಣೆಯೇ ನಡೆದಿಲ್ಲ. ಇನ್ನೂ ಶೇ.10ರಷ್ಟು ಪುಸ್ತಕಗಳು ವಿತರಣೆಗೆ ಬಾಕಿ ಇದೆ. ನವಂಬರ್‌ ಅನಂತರ ಮಾಡಬೇಕಾದ ಪಾಠಗಳ ಪುಸ್ತಕಗಳು ಬಂದಿದ್ದರೂ ಜೂನ್‌ನಿಂದಲೇ ಮಾಡಬೇಕಾದ ಪಾಠಗಳ ಪುಸ್ತಕಗಳಿನ್ನೂ ಬಂದಿಲ್ಲ.

ಸಮಸ್ಯೆ ಹೇಳಿಕೊಳ್ಳಲು ತಂತ್ರಜ್ಞಾನ
ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆಯ ಸಮಸ್ಯೆಗಳನ್ನು ಹೇಳಿಕೊಂಡರೆ ಅದಕ್ಕೆ ಪರಿಹಾರ ಕೊಡುವವರೇ ಇಲ್ಲ ಎಂಬ ಸ್ಥಿತಿ ಇತ್ತು. ಇದಕ್ಕಾಗಿ ಎಸ್‌ಡಿಎಂಸಿ ಸದಸ್ಯರ ಜತೆ ನೇರ ಸಂಪರ್ಕ ತಾಳಲು ಹೊಸ ಆ್ಯಪ್‌ ಒಂದನ್ನು ಬಿಡುಗಡೆ ಮಾಡಲು ಇಲಾಖೆ ಮುಂದಾಗಿದೆ. ಈ ಸಂಬಂಧ ಶಾಲೆಗಳಿಗೆ ಸುತ್ತೋಲೆ ನೀಡಿದೆ. ಶಾಲಾ ಕಟ್ಟಡ ದುರಸ್ತಿ, ಹೊಸ ಕಟ್ಟಡ ಬೇಡಿಕೆ, ಶಿಕ್ಷಕರ ಬೇಡಿಕೆ, ಮೂಲಭೂತ ಸೌಕರ್ಯ ಬೇಡಿಕೆ ಸೇರಿದಂತೆ ಶಾಲೆಯ ತುರ್ತು ಅಗತ್ಯಗಳಿಗೆ ಸ್ಪಂದಿಸಲು ಇನ್ನು ನೂತನವಾಗಿ ಬಿಡುಗಡೆಯಾಗುವ ಆ್ಯಪ್‌ ಮೂಲಕ ಎಸ್‌ಎಂಎಸ್‌ ಕಳುಹಿಸಿ ಪರಿಹಾರ ಕಂಡುಕೊಳ್ಳಬಹುದು. ಈ ಸಂದೇಶಗಳು ಸಂಬಂಧಪಟ್ಟವರ ಮೂಲಕ ನೇರಸ್ಪಂದನದ ಭರವಸೆ ಪಡೆಯುತ್ತದೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next