ರಾಯಚೂರು: “ದಕ್ಷಿಣ ಭಾರತದ ರಾಜ್ಯಗಳ ಅಭಿವೃದ್ಧಿಗೆ ಬಿಜೆಪಿ ಹೊರತಾದ ಪಕ್ಷಗಳೇ ಕಾರಣ. ಹೀಗಾಗಿ ಈ ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅ ಧಿಕಾರದಿಂದ ಕೆಳಗಿಳಿಯದ ಹೊರತು ದೇಶಕ್ಕೆ ಉಳಿಗಾಲವಿಲ್ಲ. ಮೋದಿಯವರ ಆರ್ಥಿಕ ನೀತಿಗಳು ದೇಶವನ್ನು ದಿವಾಳಿ ಎಬ್ಬಿಸಿವೆ. ಜಿಎಸ್‌ಟಿ ಜಾರಿಗೊಳಿಸಿ ಸಣ್ಣ ವ್ಯಾಪಾರಿಗಳು ಅತಂತ್ರ ಸ್ಥಿತಿಗೆ ಸಿಲುಕುವಂತೆ ಮಾಡಿದ್ದಾರೆ ಎಂದು ದೂರಿದರು.
ಕೊನೆಗೆ ಯಾರು ಯಾವ ಆಹಾರ ತಿನ್ನಬೇಕು ಎಂಬುದನ್ನು ಬಿಜೆಪಿಯವರೇ ನಿರ್ಧರಿಸುವ ಸ್ಥಿತಿ ಬಂದೊದಗಿದೆ. ಅವರಿಗೆ ಆ ಅಧಿ ಕಾರ ಕೊಟ್ಟವರು ಯಾರು? 40 ವರ್ಷದಲ್ಲಿ ಸಾಯದಷ್ಟು ಸೈನಿಕರು ಮೋದಿ ಅಧಿ ಕಾರದಲ್ಲಿ ಸತ್ತಿದ್ದಾರೆ.
ಮತ ವಿಭಜಿಸಿ ದೇಶ ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದ್ದ ಪ್ರಧಾನಿ ವಂಚನೆ ಮಾಡಿದರು. ರಾಯಚೂರು ಜಿಲ್ಲೆಗೂ ಐಐಟಿ ನೀಡದೇ ವಂಚಿಸಲಾಯಿತು. ದೇಶದ ಜನ ಸಂಪೂರ್ಣ ಬಹುಮತ ನೀಡಿ ಗೆಲ್ಲಿಸಿದರೂ ಅವರು ಉತ್ತಮ ಆಡಳಿತ ನೀಡಲಿಲ್ಲ ಎಂದರು.
ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಂಡು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ಹೆಲಿಕಾಪ್ಟರ್ ಕೂಡ ಪರಿಶೀಲನೆ ಮಾಡಿಸಿದ್ದಾರೆ. ಬಿಜೆಪಿಯವರ ಮನೆ ಮೇಲೆ ಐಟಿ ದಾಳಿ ಆಗಿದ್ದರೆ ತೋರಿಸಲಿ. ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿದ್ದಾರೆ.
ಆದರೆ, ಆ ದಾಳಿಯೇ ಶುದ್ಧ ಸುಳ್ಳು. ಹಣ ನೀಡಿ ಮತ ಪಡೆಯುವ ಸ್ಥಿತಿ ಬಿಜೆಪಿ ಸೃಷ್ಟಿಸಿದೆ. ಇವಿಎಂಗಳ ಸಂದೇಹ ಬಂದೊದಗಿದೆ. ಪಾರದರ್ಶಕ ಚುನಾವಣೆ ನಡೆಸಬೇಕಾದರೆ ಇವಿಎಂನಲ್ಲಿ ದಾಖಲಾದ ಮತಗಳ ಜತೆಗೆ ವಿವಿ ಪ್ಯಾಟ್‌ನಲ್ಲಿನ ಸ್ಲಿಪ್‌ಗ್ಳನ್ನು ಕೂಡ ಎಣಿಕೆ ಮಾಡುವ ವ್ಯವಸ್ಥೆ ಬರಬೇಕು ಎಂದರು.