Advertisement

ಆಧಾರ್‌ ಇಲ್ಲದಿದ್ರೆ ಆಧಾರವೇ ಇರಲ್ಲ!

11:27 AM Oct 02, 2017 | Team Udayavani |

ಈ ದಿನಗಳಲ್ಲಿ ಆಧಾರ್‌ ಇಲ್ಲವೆಂದರೆ ಮನುಷ್ಯನಿಗೆ ಆಧಾರವೇ ಇಲ್ಲ! ಐಡೆಂಟಿಟಿಯೂ ಇಲ್ಲ!  ಆಧಾರ್‌ ಕಾರ್ಡ್‌ ಎಲ್ಲದ್ದಕ್ಕೂ ಆಧಾರವಾಗಿರುವಾಗ ಅದನ್ನು ನಿಮ್ಮ ಮೊಬೈಲ್‌ ನಂಬರ್‌ಗೆ, ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡುವುದು ಅತ್ಯಗತ್ಯ. ಬೇರೆ ಬೇರೆ ಅಥಾರಿಟಿಗಳಿಗೆ ಆಧಾರ್‌ ಲಿಂಕ್‌ ಮಾಡಲು ಕೊನೆಯ ದಿನಾಂಕ ಯಾವಾಗ ಎಂಬುದು ನಿಮಗೆ ಗೊತ್ತಿರಲೇಬೇಕು. 

Advertisement

1. ಪಾನ್‌ ಕಾರ್ಡ್‌ ಲಿಂಕ್‌ಗೆ ಕೊನೆ ದಿನ ಡಿಸೆಂಬರ್‌ 31
ಈ ಮೊದಲು ಆದಾಯ ತೆರಿಗೆ ಪಾವತಿಸಲು ಪಾನ್‌ ನಂಬರ್‌ ಮಾತ್ರ ಸಾಕಿತ್ತು. 2017-18ನೇ ಸಾಲಿನ ವಿತ್ತೀಯ ಬಿಲ್‌ ಮಂಡಿಸಿದ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ, ತೆರಿಗೆ ಪಾವತಿಸಲು ಪಾನ್‌ ಸಂಖ್ಯೆಗೆ ಆಧಾರ್‌ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಪಾನ್‌ ಸಂಖ್ಯೆ ಬಳಸಿ ತೆರಿಗೆ ವಂಚನೆಯನ್ನು ತಡೆಯುವುದು ಇದರ ಉದ್ದೇಶ. ಆಧಾರ್‌ ಮತ್ತು ಪಾನ್‌ ಲಿಂಕ್‌ ಮಾಡಲು 2017ರ ಡಿಸೆಂಬರ್‌ 31 ಕಡೆಯ ದಿನ. 

ಆಧಾರ್‌-ಪಾನ್‌ ಲಿಂಕ್‌ ಹೇಗೆ?
-ಆಧಾರ್‌ ಮತ್ತು ಪಾನ್‌ ನಂಬರ್‌ ಗುರುತಿಟ್ಟುಕೊಳ್ಳಿ. 

-ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್‌ ಆಗಿ. ಈ ಮೊದಲೇ ರಿಜಿಸ್ಟರ್‌ ಆಗಿದ್ದರೆ, ನಿಮ್ಮ ಐ.ಡಿ, ಪಾಸ್‌ವರ್ಡ್‌ ಮತ್ತು ಹುಟ್ಟಿದ ದಿನಾಂಕ ಬಳಸಿ ಲಾಗಿನ್‌ ಆಗಿ. 

-ಆಧಾರ್‌ ಮತ್ತು ಪಾನ್‌ ಸಂಖ್ಯೆಗಳನ್ನು ಲಿಂಕ್‌ ಮಾಡುವಂತೆ ಕೇಳುವ ಒಂದು ವಿಂಡೊ ತೆರೆದುಕೊಳ್ಳುತ್ತದೆ. ಇಲ್ಲವೇ, ಮೆನು ಬಾರ್‌ನಲ್ಲಿ ಕಾಣಿಸುವ “ಪ್ರೊಫೈಲ್‌ ಸೆಟ್ಟಿಂಗ್‌’ಗೆ ಹೋಗಿ, “ಲಿಂಕ್‌ ಆಧಾರ್‌’ ಆಪ್ಶನ್‌ ಕ್ಲಿಕ್‌ ಮಾಡಿ. 

Advertisement

-ಕೆಲವೊಂದು ಅಗತ್ಯ ಮಾಹಿತಿಗಳನ್ನು- ಉದಾಹರಣೆಗೆ: ಹುಟ್ಟಿದ ದಿನಾಂಕ (ಪಾನ್‌ ಕಾರ್ಡ್‌ನಲ್ಲಿರುವಂತೆ), ಲಿಂಗ ಇತ್ಯಾದಿ ಭರ್ತಿ ಮಾಡಬೇಕು. ನೀವು ನೀಡಿದ ಮಾಹಿತಿಗೂ ಪಾನ್‌ ಕಾರ್ಡ್‌ನಲ್ಲಿರುವ ಮಾಹಿತಿಗೂ ವ್ಯತ್ಯಾಸವಿದ್ದರೆ ಆಧಾರ್‌ ಲಿಂಕ್‌ ಆಗುವುದಿಲ್ಲ. ನಂತರ 12 ಡಿಜಿಟ್‌ನ ಆಧಾರ್‌ ಸಂಖ್ಯೆಯನ್ನು ಭರ್ತಿ ಮಾಡಿ. ನಂತರ “ಲಿಂಕ್‌ ಆಧಾರ್‌’ ಬಟನ್‌ ಕ್ಲಿಕ್‌ ಮಾಡಿ. 

-ಕೊನೆಯಲ್ಲಿ ಆಧಾರ್‌-ಪಾನ್‌ ಎರಡೂ ಲಿಂಕ್‌ ಆಗಿದ್ದರೆ “ಸಕ್ಸಸ್‌ಫ‌ುಲ್‌’ ಎಂಬ ಸಂದೇಶ ಬರುತ್ತದೆ. 

2. ಮೊಬೈಲ್‌ ಸಂಖ್ಯೆಗೆ ಆಧಾರ್‌ ಲಿಂಕ್‌ ಮಾಡಲು ಕೊನೇ ದಿನ ಫೆ. 2018
ಎ) ಸಿಮ್‌ಗೆ ಆಧಾರ್‌ ಲಿಂಕ್‌ ಮಾಡೋದು ಹೇಗೆ?

– ಹತ್ತಿರದ ಆಧಾರ್‌ ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್‌ ಅಪ್ಡೆಟ್‌/ ಕರೆಕ್ಷನ್‌ ಫಾರ್ಮ್ ಮತ್ತು ಅಗತ್ಯ ಮಾಹಿತಿಗಳನ್ನು ನೀಡಿ. ಈ ಫಾರ್ಮ್ನ್ನು ಆಧಾರ್‌ ಕೇಂದ್ರದಿಂದ ಪಡೆಯಬಹುದು ಅಥವಾ ಯು.ಐ.ಡಿ.ಎ.ಐ. ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಬಹುದು. ನಿಮ್ಮ ಮೊಬೈಲ್‌ ಸಂಖ್ಯೆ ಮಾತ್ರ ಅಪ್ಡೆಟ್‌ ಆಗಿದೆ ಎಂದು ನಮೂದಿಸಿ. 

-ಏಜೆಂಟ್‌ಗಳು ನಿಮ್ಮ ಬಯೋಮೆಟ್ರಿಕ್‌ ಮಾಹಿತಿ  ಸೇರಿಸಿ, ಸ್ವೀಕೃತಿ ದಾಖಲೆ ನೀಡುತ್ತಾರೆ.  ಗರಿಷ್ಠ 10 ದಿನಗಳೊಳಗೆ ಅಪ್ಡೆಟ್‌ ಆಗುತ್ತದೆ. 

ಬಿ) ನಿಮ್ಮ ಹೊಸ ನಂಬರ್‌ ಅಪ್ಡೆಟ್‌ ಮಾಡಲು
-ಯು.ಐ.ಡಿ.ಎ.ಐ ವೆಬ್‌ಸೈಟ್‌ಗೆ ಹೋಗಿ. 

-ಅಲ್ಲಿ “ಅಪ್ಡೆಟ್‌ ಆಧಾರ್‌ ಡಿಟೇಲ್ಸ್‌ (ಆನ್‌ಲೈನ್‌) ಆಪ್ಶನ್‌ ಕ್ಲಿಕ್‌ ಮಾಡಿ. ಇಲ್ಲಿ ನಿಮಗೆ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ, ಇ-ಮೇಲ್‌ ಮತ್ತು ಮೊಬೈಲ್‌ ಸಂಖ್ಯೆಯನ್ನು ಅಪ್ಡೆಟ್‌ ಮಾಡಬಹುದು. 

-ಮುಂದೆ ಆಧಾರ್‌ ಸೆಲ್ಫ್ ಸರ್ವಿಸ್‌ ಅಪ್ಡೆಟ್‌ ಪೋರ್ಟಲ್‌ಗೆ ಹೋಗುತ್ತೀರಿ. ನಿಮ್ಮ ಆಧಾರ್‌ ಸಂಖ್ಯೆಯನ್ನು ಅಲ್ಲಿ ನಮೂದಿಸಿ, ನಿಮ್ಮ ಮೊಬೈಲ್‌ ಸಂಖ್ಯೆಗೆ ಬರುವ ಓ.ಟಿ.ಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ದಾಖಲಿಸಿ. ಅಲ್ಲಿ ಕಾಣಿಸುವ ಅಕ್ಷರಗಳನ್ನು ನಿಗದಿತ ಕಾಲಂ (ಬಾಕ್ಸ್‌)ನಲ್ಲಿ ಭರ್ತಿ ಮಾಡಿ. 

-ಆಗ “ಡಾಟ ಅಪ್ಡೆಟಿಂಗ್‌ ರಿಕ್ವೆಸ್ಟ್‌’ ಪೇಜ್‌ ತೆರೆದುಕೊಳ್ಳುತ್ತದೆ. ಅದರಲ್ಲಿ “ಫೀಲ್ಡ್‌$Õ ಟು ಅಪ್ಡೆಟ್‌’ ಸೆಲೆಕ್ಟ್ ಮಾಡಿ, “ಮೊಬೈಲ್‌ ಸಂಖ್ಯೆ’ ಸೆಲೆಕ್ಟ್ ಮಾಡಿ. ಅಲ್ಲಿ ಅಪ್ಡೆಟ್‌ ಆಗಬೇಕಾದ ನಿಮ್ಮ ಹೊಸ ಮೊಬೈಲ್‌ ನಂಬರ್‌ನ್ನು ನಮೂದಿಸಿ. 

3. ಆಧಾರ್‌ ವಿವರಗಳನ್ನು ಬ್ಯಾಂಕ್‌ಗೆ ನೀಡಲು ಕಡೇ ದಿನ ಡಿಸೆಂಬರ್‌ 31 
ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಲು ಕೊನೆಯ ದಿನ 2017 ಡಿಸೆಂಬರ್‌ 31.  ನಿಮ್ಮ ಬ್ಯಾಂಕ್‌ನಲ್ಲಿ, ಬ್ಯಾಂಕ್‌ನವರು ನೆಟ್‌ ಬ್ಯಾಂಕಿಂಗ್‌, ಎ.ಟಿ.ಎಂ, ಫೋನ್‌, ಎಸ್‌ಎಂಎಸ್‌ ಅಥವಾ ಮೊಬೈಲ್‌  ಮೂಲಕ ಲಿಂಕ್‌ ಮಾಡಬಹುದು. 

ನೆಟ್‌ ಬ್ಯಾಂಕಿಂಗ್‌: ಬ್ಯಾಂಕ್‌ ವೆಬ್‌ಸೈಟ್‌ನ ಹೋಂ ಪೇಜ್‌ನಲ್ಲಿಯೇ “ಲಿಂಕ್‌ ಆಧಾರ್‌ ಟು ಬ್ಯಾಂಕ್‌ ಅಕೌಂಟ್‌’ ಎಂಬ ಆಪ್ಶನ್‌ ನೀಡಲಾಗಿದೆ. ನಿಮ್ಮ ಅಕೌಂಟ್‌ಗೆ ಲಾಗಿನ್‌ ಆದ ನಂತರವೂ, ಅಗತ್ಯ ಮಾಹಿತಿಗಳನ್ನು ನೀಡಿ ಲಿಂಕ್‌ ಮಾಡಬಹುದು.  ಒಂದೇ ಬ್ಯಾಂಕ್‌ನಲ್ಲಿ ಹಲವು ಖಾತೆಗಳನ್ನು ತೆರೆದಿದ್ದರೂ, ಅದಕ್ಕೆ ಕಾಮನ್‌ ಲಾಗಿನ್‌ ಐ.ಡಿ. ಇದ್ದರೂ ನೀವು ಎಲ್ಲ ಅಕೌಂಟ್‌ಗಳನ್ನು ಪ್ರತ್ಯೇಕವಾಗಿ ಆಧಾರ್‌ಗೆ ಲಿಂಕ್‌ ಮಾಡಬೇಕು. 

ಭೀಮ್‌: ಭೀಮ್‌ (BHIM) ಆ್ಯಪ್‌ ಮೂಲಕವೂ ಲಿಂಕ್‌ ಸಾಧ್ಯ. ನಿಮ್ಮ ಬ್ಯಾಂಕ್‌ನ ಆ್ಯಪ್‌ನಿಂದಲೂ ಆಧಾರ್‌ ಲಿಂಕ್‌ ಮಾಡಬಹುದು. ಕೆಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಎಸ್‌ಎಂಎಸ್‌ ಮೂಲಕ ಲಿಂಕ್‌ ಮಾಡುವ ಅವಕಾಶ ನೀಡಿವೆ. ಆದರೆ, ಮೊಬೈಲ್‌ ಸಂಖ್ಯೆ ನಿಮ್ಮ ಖಾತೆಗೆ ರಿಜಿಸ್ಟರ್‌ ಆಗಿರಬೇಕು. 

ಆಫ್ಲೈನ್‌ ರಿಕ್ವೆಸ್ಟ್‌: ನಿಮ್ಮ ಬ್ಯಾಂಕ್‌ ಬ್ರಾಂಚ್‌ಗೆ ಖುದ್ದಾಗಿ ಹೋಗಿ ಆಧಾರ್‌ ಲಿಂಕ್‌ ಮಾಡಬಹುದು. ಈ ರೀತಿ ಲಿಂಕ್‌ ಮಾಡಲು 3-4 ದಿನ ಬೇಕಾಗುತ್ತದೆ. ಎಲ್‌ಪಿಜಿ ಸಿಲಿಂಡರ್‌, ಸರಕಾರಿ ಸ್ಕಾಲರ್‌ಶಿಪ್‌ನಂಥ ಸೋಶಿಯಲ್‌ ಸೆಕ್ಯುರಿಟಿ ಸ್ಕೀಮ್‌ ಪಡೆಯಲು ಡಿಸೆಂಬರ್‌ 31ರೊಳಗೆ ಆಧಾರ್‌ ಸಂಖ್ಯೆ ನೀಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next