Advertisement
ಹೌದು, ಹೇಳಿ ಕೇಳಿ ದಶಕಗಳ ಕಾಲ ಬರದ ಬವಣೆಗೆ ಒಳಗಾಗಿದ್ದ ಜಿಲ್ಲೆಯು ಸಂಪೂರ್ಣ ಬಯಲು ಪ್ರದೇಶವಾ ದರೂ ಹಿಂದಿನ ಎರಡು, ಮೂರು ವರ್ಷದಲ್ಲಿ ಜಿಲ್ಲಾದ್ಯಂತ ಸುರಿದ ಭಾರೀ ವರ್ಷಾಧಾರೆಯ ಪರಿಣಾಮ ಜಿಲ್ಲೆಯಲ್ಲಿ ಹಸಿರು ಹೊದಿಕೆ ಹೆಚ್ಚಾಗುತ್ತಿದ್ದಂತೆ ವನ್ಯಜೀವಿಗಳ ಸಂತತಿ ಹೆಚ್ಚಾಗಿದೆ.
Related Articles
Advertisement
ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಅಕ್ರಮ ಗಣಿಗಾರಿಕೆಗೆ ಕುಖ್ಯಾತಿ ಆಗಿರುವ ಚಿಕ್ಕಬಳ್ಳಾಪುರ ತಾಲೂಕಿನ ಅಸುಪಾಸಿನಲ್ಲಿ ಗಣಿಗಾರಿಕೆ ಅರ್ಭಟ ಹೆಚ್ಚಾಗಿರು ವುದರಿಂದ ವನ್ಯ ಜೀವಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಚಿರತೆಗಳೇ ಸಾಕ್ಷಿ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನೂರಾರು ಕಡೆ ಗಣಿಗಾರಿಕೆ ಸದ್ದು ಇರುವುದರಿಂದ ವನ್ಯ ಜೀವಿಗಳಿಗೆ ಸೂಕ್ತ ವಾಸ ಸ್ಥಾನ ಸಿಗದೇ ಗ್ರಾಮಗಳಿಗೆ ಲಗ್ಗೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ ಅರಣ್ಯ ಪ್ರದೇಶದ ಬೆಟ್ಟ, ಗುಡ್ಡಗಳಲ್ಲಿ ಮೀತಿ ಮಿರಿ ನಡೆಯುತ್ತಿರುವ ಗಣಿಗಾರಿಕೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಿಬೇಕಿಲ್ಲ. ಮಂಡಿಕಲ್ಲು, ಪೆರೇಸಂದ್ರ ಸುತ್ತಮುತ್ತ ಸಾಕಷ್ಟು ಗಣಿಗಾರಿಕೆ ನಡೆಯುತ್ತಿದ್ದು, ರಾತ್ರಿ ವೇಳೆ ಗಣಿಗಾರಿಕೆಗೆ ಬಳಸುವ ಸಿಡಿಮುದ್ದುಗಳ ಸ್ಫೋಟಕ್ಕೆ ಬೆದರಿ ಚಿರತೆ, ಕರಡಿಗಳು ಕಾಡಿನಿಂದ ಜನವಸತಿ ಪ್ರದೇಶಗಳಿಗೆ ನುಗ್ಗಿ ಬರುತ್ತಿವೆ. ಕೆಲವೊಮ್ಮೆ ರಸ್ತೆ ದಾಟುವಾಗ ವಾಹನಗಳ ಡಿಕ್ಕಿಯಾಗಿ ಚಿರತಗೆಳು ಸಾವುಗೀಡಾಗುತ್ತಿರುವುದು ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ.
ಜಿಲ್ಲೆಯಲ್ಲಿ ಕಳೆದ 10 ವರ್ಷದಲ್ಲಿ 7 ಚಿರತೆಗಳು ಮೃತಪಟ್ಟಿವೆ. ಕೆಲವೊಂದು ಚಿರತೆಗಳು ಅಪಘಾತದಲ್ಲಿ ಸತ್ತಿವೆ. ಚಿರತೆ ದಾಳಿಯಿಂದ ಯಾವುದೇ ಸಾವುನೋವು ಜಿಲ್ಲೆಯಲ್ಲಿ ಸಂಭವಿಸಿಲ್ಲ. ಚಿರತೆಗಳು ಕಾಣಿಸಿಕೊಂಡ ಕಡೆ ಅರಣ್ಯ ಇಲಾಖೆ ನಿಗಾವಹಿಸಿ ಸಾರ್ವಜನಿಕರನ್ನು ಎಚ್ಚರದಿಂದ ಇರುವಂತೆ ಅರಿವು ಮೂಡಿಸಲಾಗಿದೆ.-ಬಿ.ಆರ್.ರಮೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ
-ಕಾಗತಿ ನಾಗರಾಜಪ್ಪ