Advertisement
ಶತಮಾನದ ಹಿಂದೆಯೇ ರಾಜಾ ಮಾಲೋಜಿರಾವ್ ಘೋರ್ಪಡೆ ನಗರದಲ್ಲಿ ಕೇಂದ್ರ ಗ್ರಂಥಾಲಯ ಸ್ಥಾಪಿಸಿದ್ದರು. 1976ರಿಂದ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿರುವ ಗ್ರಂಥಾಲಯ ಗಾಂಧಿ ಸರ್ಕಲ್‌ನಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಮಳೆಗಾಲ ಸಂದರ್ಭದಲ್ಲಿ ಕಟ್ಟಡವಿಡಿ ಸೋರುತ್ತಿದೆ. ಗ್ರಂಥಾಲಯಕ್ಕೆ ಹೊಸ ಕಟ್ಟಡದ ಅವಶ್ಯಕತೆಯಿದೆ. ಮುಧೋಳ ಮೀಸಲು ಕ್ಷೇತ್ರವಾಗಿದ್ದು, ಕಟ್ಟಡಕ್ಕೆ ವಿಶೇಷ ಅನುದಾನ ದೊರೆಯಲಿದೆ. ಭೂ ಸೇನಾ ನಿಗಮದಿಂದ ನೀಲನಕ್ಷೆ ತಯಾರಿಸಲಾಗಿದ್ದು, ಉಪಮುಖ್ಯಮಂತ್ರಿಗೋವಿಂದ ಕಾರಜೋಳ ಶಿಫಾರಸು ಪತ್ರ ಪಡೆದು ಸರ್ಕಾರಕ್ಕೆ ಕಳುಹಿಲಾಗುವುದು ಎಂದು ಗ್ರಂಥಾಲಯ ಸಿಬ್ಬಂದಿತಿಳಿಸುತ್ತಾರೆ. ಸುಮಾರು 30-35 ಲಕ್ಷ ರೂ.ಗಳಲ್ಲಿ ನೂತನ ಕಟ್ಟಡದ ನೀಲನಕ್ಷೆ ಸಿದ್ಧಗೊಂಡಿದ್ದು, ಸರ್ಕಾರದ ಅನುಮೋದನೆ ಇನ್ನೂ ದೊರೆತಿಲ್ಲ.
Related Articles
Advertisement
ಸುಣ್ಣ-ಬಣ್ಣವಿಲ್ಲ: ನಗರದಲ್ಲಿ ರಾಜ್ಯ ಹೆದ್ದಾರಿ ಮೇಲೆ 2009ರಲ್ಲಿ ನಿರ್ಮಾಣಗೊಂಡಿರುವ ಭವ್ಯ ಕಟ್ಟಡ ರನ್ನ ಗ್ರಂಥಾಲಯ ಉದ್ಘಾಟನೆಗೊಂಡು 10 ವರ್ಷಗಳಾದರೂ ಆಮೇಲೆ ಒಮ್ಮೆಯೂ ಸುಣ್ಣ ಬಣ್ಣ ಕಂಡಿಲ್ಲ. ನಗರಸಭೆಯ ನಲ್ಲಿಯಿಂದ ಕುಡಿಯುವ ನೀರು ಪಡೆಯಲಾಗುತ್ತಿದೆ. ಹಾಜಿರಾ ನಸರಿನ್ ಅವರೇ ವಿಶೇಷ ಆಸಕ್ತಿ ವಹಿಸಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಿಬ್ಬಂದಿ ಕೊರತೆಯಿದ್ದರೂ ಕಂಡುಬರುತ್ತಿಲ್ಲ. ಹಣ ಪೂರೈಸದ ನಗರಸಭೆ: ನಗರದ ಕಟ್ಟಡಗಳಿಗೆ ತೆರಿಗೆ ವಸೂಲಿ ಮಾಡುವಾಗ ಗ್ರಂಥಾಲಯ ಕರವೆಂದು ಶೇ. 6 ವಸೂಲಿ ಮಾಡಲಾಗುತ್ತದೆ. ಅದರಲ್ಲಿ ಶೇ.5.4 ಗ್ರಂಥಾಲಯಗಳಿಗೆ ಹಾಗೂ 0.6 ನಿರ್ವಹಣೆಗಾಗಿ ನಗರಸಭೆಗೆ ಸೇರಬೇಕು. ಆದರೆ ನಗರಸಭೆ ವಸೂಲಿ ಮಾಡಿದ ಹಣವನ್ನು ಗ್ರಂಥಾಲಯಕ್ಕೆ ಸಮರ್ಪಕವಾಗಿ ನೀಡುತ್ತಿಲ್ಲ. ಸುಮಾರು 20 ಲಕ್ಷಕ್ಕೂ ಅಧಿ ಕ ಹಣ ನಗರಸಭೆ ಗ್ರಂಥಾಲಯಕ್ಕೆ ನೀಡಬೇಕು. ಆದರೆ, ಮಧ್ಯ-ಮಧ್ಯೆ 1 ಲಕ್ಷ ರೂ. ನೀಡಿದೆ. ತಾಲೂಕಿನ ಇಂಗಳಗಿಯಲ್ಲಿ ಸಾರ್ವಜನಿಕ ಗ್ರಂಥಾಲಯವಿದ್ದು, ಅಲ್ಲಿ ಪ್ರಭಾರಿಯಾಗಿ ರಮೇಶ ಜಂಬಗಿ ಎಂಬುವವರು ಕಾರ್ಯ ನಿರ್ವಹಿಸುತ್ತಿದ್ದಾರೆ.
-ಮಹಾಂತೇಶ ಈ. ಕರೆಹೊನ್ನ