Advertisement

ಈ ಬಾರಿಯೂ ಮೋದಿ ಅಲೆ ಇದೆ; ಕಾಂಗ್ರೆಸ್‌ ಇನ್ನೂ 5 ವರ್ಷ ಕಾಯಬೇಕು: ಶಾ

08:57 AM Apr 03, 2019 | Sathish malya |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲೂ ಮೋದಿ ಅಲೆ ಇದೆ; ಆದುದರಿಂದ ಕಾಂಗ್ರೆಸ್‌ ಕನಿಷ್ಠ ಇನ್ನೂ ಐದು ವರ್ಷ ಕಾಯಬೇಕಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

Advertisement

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಿದ್ದಾಗ ಜನರಲ್ಲಿ ಬಹಳಷ್ಟು ನಿರೀಕ್ಷೆಗಳಿದ್ದವು; ಅವುಗಳಲ್ಲಿ ನಾವು ಬಹಳಷ್ಟನ್ನು ಪೂರೈಸಿದ್ದೇವೆ; ಕೆಲವು ವಿಷಯಗಳಲ್ಲಿ ನಾವು ಜನರ ನಿರೀಕ್ಷೆ ಮೀರಿದ ಸಾಧನೆ ಮಾಡಿದ್ದೇವೆ ಎಂದು ಅಮಿತ್‌ ಶಾ ಅವರು ಝೀ ನ್ಯೂಸ್‌ ಏರ್ಪಡಿಸಿದ ಇಂಡಿಯಾ ಕಾ ಡಿಎನ್‌ಎ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು.

ಮುಂದುವರಿದು ಮಾತನಾಡಿದ ಅಮಿತ್‌ ಶಾ, ಬಿಜೆಪಿಗೆ ಪ್ರತಿ ಚುನಾವಣೆಯೂ ಒಂದು ಸವಾಲು; ಹಾಗಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಯೊಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಪ್ರಧಾನಿ ಮೋದಿ ಅವರು ದೇಶಕ್ಕೆ ನಿರ್ಣಾಯಕ ನಾಯಕತ್ವ ನೀಡಿರುವುದರಿಂದಲೇ ದೇಶದಲ್ಲಿ ಮೋದಿ ಅಲೆ ಇದೆ; ಅಂತೆಯೇ ಇಡಿಯ ವಿಶ್ವ ಈಗ ಭಾರತದೆಡೆಗೆ ನೋಡುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next