Advertisement

ಜಾಧವ್‌ ಬಗ್ಗೆ ಮಾಹಿತಿಯೇ ಇಲ್ಲ

03:50 AM Apr 14, 2017 | |

ಇಸ್ಲಾಮಾಬಾದ್‌/ನವದೆಹಲಿ: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೊಳಗಾದ ಜಾಧವ್‌ ಅವರ ಇರುವಿಕೆ ಎಲ್ಲಿದೆ ಎಂದೇ ಗೊತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬ ವಿವರವೂ ಇಲ್ಲ. ರಾಜತಾಂತ್ರಿಕ ಭೇಟಿಗೆ 13 ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್‌ ಬಗ್ಲಾಯ್‌ ಹೇಳಿದ್ದಾರೆ. ಇಡೀ ದೇಶ ಜಾಧವ್‌ ಅವರ ಹಿಂದಿದ್ದು, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದ್ದಾರೆ.

Advertisement

ಶಿಕ್ಷೆ ಜಾರಿಗೆ ಇಂಗಿತ: ಪಾಕಿಸ್ತಾನದಲ್ಲಿ ಗೂಢಚರೆ ನಡೆಸಿದ ಆರೋಪದ ಮೇಲೆ ಗಲ್ಲುಶಿಕ್ಷೆಗೊಳಗಾದ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದರಲ್ಲಿ ಯಾವುದೇ ರಾಜಿಯಾಗದಿರಲು ಪಾಕ್‌ ಸೇನೆಯ ಉನ್ನತ ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಸೇನಾ ಮುಖ್ಯಸ್ಥ ಖಮರ್‌ ಬಾಜ್ವಾ ನೇತೃತ್ವದಲ್ಲಿ ರಾವಲ್ಪಿಂಡಿಯಲ್ಲಿ ನಡೆದ ಕಾಪ್ಸ್‌ì ಕಮಾಂಡರ್ ಸಭೆಯಲ್ಲಿ ಸೇನಾ ಜನರಲ್‌ಗ‌ಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಿಲಿಟರಿ ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿದೆ. ಭಾರತದಿಂದ ಜಾಧವ್‌ ಬಗ್ಗೆ ಒತ್ತಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೇನೆ ಈ ನಿರ್ಧಾರ ತಳೆದಿದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next