Advertisement

ಭಾರತದಿಂದ ವಿಶ್ವಕ್ಕೆ ಭಾರೀ ನಿರೀಕ್ಷೆಯಿದೆ

10:03 AM Oct 02, 2019 | mahesh |

ಚೆನ್ನೈ: ಭಾರತದಿಂದ ವಿಶ್ವವು ತುಂಬಾ ನಿರೀಕ್ಷೆಯನ್ನು ಹೊಂದಿದೆ. ನಮ್ಮ ಸರಕಾರವು ಭಾರತವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲಿದ್ದು, ಇದರಿಂದ ಇಡೀ ವಿಶ್ವಕ್ಕೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ ಹೇಳಿದ್ದಾರೆ. ಐಐಟಿ ಮದ್ರಾಸ್‌ 56ನೇ ಘಟಿಕೋ ತ್ಸವದಲ್ಲಿ ಮಾತನಾಡಿದ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಹಲವು ದೇಶಗಳ ಮುಖಂಡರು, ಉದ್ಯಮಿಗಳನ್ನು ಭೇಟಿ ಮಾಡಿದ್ದೇನೆ. ಎಲ್ಲರಲ್ಲೂ ಭಾರತದ ಬಗ್ಗೆ ನಿರೀಕ್ಷೆಗಳಿದ್ದವು. ಭಾರತದ ಯುವ ಜನರ ಸಾಮರ್ಥ್ಯದ ಬಗ್ಗೆ ಅವರಲ್ಲಿ ವಿಶ್ವಾಸವಿತ್ತು ಎಂದಿದ್ದಾರೆ.

Advertisement

ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಅನಂತರದಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡಿಗೆ ಆಗಮಿಸಿದ ಅವರು, ದೇಶವನ್ನು ಅತ್ಯುನ್ನತವಾಗಿಸುವುದು ಕೇವಲ ಕೇಂದ್ರ ಸರಕಾರದ ಜವಾಬ್ದಾರಿಯಲ್ಲ. 130 ಕೋಟಿ ಭಾರತೀಯರ ಕೆಲಸ ಎಂದಿದ್ದಾರೆ.

ತಮಿಳರ ಓಲೈಸಿದ ಮೋದಿ!: ಇತ್ತೀಚೆಗೆ ಹಿಂದಿ ದಿನದಂದು ಗೃಹ ಸಚಿವ ಅಮಿತ್‌ ಶಾ ಹೇಳಿಕೆ ತಮಿಳುನಾಡಿನಲ್ಲಿ ಭಾರೀ ವಿವಾದ ವನ್ನು ಸೃಷ್ಟಿಸಿತ್ತು. ಇದರಿಂದಾಗಿ, ತಮಿಳು ನಾಡಿನಲ್ಲಿ ಕೇಂದ್ರ ಸರಕಾರದ ವಿರೋಧಿ ಅಲೆಯೂ ಕಾಣಿಸಿಕೊಂಡಿತ್ತು. ಆದರೆ, ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ತಮಿಳು ಭಾಷೆಯ ಇತಿಹಾಸವನ್ನು ಪ್ರಧಾನಿ ಮೋದಿ ಪ್ರಸ್ತಾವಿಸಿ, ತಮಿಳು ಕವಿಯ ಸಾಲುಗಳನ್ನೂ ಓದಿದ್ದರು. ಇದೇ ವಿಚಾರ ವನ್ನು ಐಐಟಿ ಮದ್ರಾಸ್‌ನಲ್ಲೂ ಮೋದಿ ಮತ್ತೂಮ್ಮೆ ಪ್ರಸ್ತಾವಿಸಿದರು. ಈ ಒಟ್ಟು ನಡೆಯನ್ನು ತಮಿಳುನಾಡಿನ ಜನರನ್ನು ಓಲೈಸಲು ಮೋದಿ ಮಾಡಿದ ತಂತ್ರ ಎಂದೇ ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಎಂದಿನಂತೆ ತಮಿಳಿನಲ್ಲೇ ಮಾತನ್ನು ಆರಂಭಿಸಿದರು. ವಿಶೇಷವಾದ ತಮಿಳುನಾಡು ರಾಜ್ಯ ದಲ್ಲಿದ್ದೇನೆ. ಅತ್ಯಂತ ಹಳೆಯ ಭಾಷೆ ತಮಿಳಿಗೆ ಇದು ತವರಾಗಿದೆ ಎಂದೂ ಅವರು ಹೇಳಿದರು.

ಭಾರತದ ಅಗತ್ಯವೂ ಗಮನದಲ್ಲಿರಲಿ: ದೇಶ, ವಿದೇಶಗಳಲ್ಲಿ ಭಾರತದ ಕೀರ್ತಿ ಯನ್ನು ಪಸರಿಸಿದ್ದು, ಐಐಟಿ ಹಿರಿಯ ವಿದ್ಯಾರ್ಥಿ ಗಳು. ನೀವು ಎಲ್ಲೇ ಕೆಲಸ ಮಾಡುತ್ತಿರಲಿ, ಎಲ್ಲೇ ವಾಸಿಸುತ್ತಿರಲಿ. ನಿಮ್ಮ ತವರು ದೇಶ ಭಾರತದ ಅಗತ್ಯಗಳ ಬಗ್ಗೆ ಚಿಂತನೆ ನಡೆಸಿ. ನಿಮ್ಮ ಕೆಲಸ ಹಾಗೂ ಸಂಶೋಧನೆ ಹೇಗೆ ಭಾರತಕ್ಕೆ ನೆರವಾಗ ಬಹುದು ಎಂದು ಯೋಚಿಸಿ ಎಂದಿದ್ದಾರೆ.

ಜಾಗತಿಕ ಸಮಸ್ಯೆ ಪರಿಹಾರದ ಭರವಸೆ: ಜಾಗತಿಕ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡುಕೊಳ್ಳಲು ಬದ್ಧವಾಗಿದ್ದು, ಇದಕ್ಕೆ ಅತ್ಯುತ್ತಮ ಸಂಶೋಧನೆ ಮೂಲ ಸೌಕರ್ಯ ವನ್ನು ಹೊಂದಿದೆ ಎಂದಿದ್ದಾರೆ. ಶಾಲೆಯಿಂದ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯ ವರೆಗೆ ಒಂದು ಸುಸ್ಥಿರ ಸೌಲಭ್ಯ ರೂಪಿ ಸಲಾಗಿದ್ದು, ಇದು ನಾವೀನ್ಯಕ್ಕೆ ಪೂರಕ ವಾಗಿದೆ. ಹೀಗಾಗಿಯೇ ವಿಶ್ವದ ಸ್ಟಾರ್ಟಪ್‌ಗ್ಳ ಪೈಕಿ ಪ್ರಮುಖ 3ನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next