Advertisement

ಕಾಶಿ ವಿಶ್ವನಾಥ ಕಾರಿಡಾರ್ ಕಾರ್ಯಕ್ರಮದಲ್ಲಿ ಒಂದು ಲೋಪವಾಗಿದೆ: ಹೆಚ್.ವಿಶ್ವನಾಥ್

12:49 PM Dec 13, 2021 | Team Udayavani |

ಮೈಸೂರು: ಸಾವಿರಾರು ವರ್ಷಗಳ ಹಿಂದೆ ರಾಜ ಮಹಾರಾಜರ ದಾಳಿಗೆ ಕಾಶಿ ತುತ್ತಾಗಿ ಹಾಳಾಗಿತ್ತು. ಅದನ್ನು ಇಂದೂರಿನ ಮಹಾರಾಣಿ ಅಹಲ್ಯ ಬಾಯಿ ಔರ್ಕರ್ ರಕ್ಷಣೆ ಮಾಡಿದರು. ಯುದ್ದಕ್ಕೆ ಬದಲಾಗಿ ಬುದ್ದಿವಂತಿಕೆಯಿಂದ ಕಾಶಿ ವಿಶ್ವನಾಥ ದೇವಾಲಯ ಉಳಿಸಿದ್ದರು. ಇಂದು ವಿಶ್ವನಾಥ ಕಾರಿಡಾರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಒಂದು ಲೋಪವಾಗಿದೆ. ವಾರಣಾಸಿ ಜೀರ್ಣೋದ್ದಾರ ಮಾಡಿದವರನ್ನು ಇಲ್ಲಿ ಮರೆಯಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಿಂದೂ ಧ್ವಜವನ್ನು ಹಾರಿಸಿದವರು ಅಹಲ್ಯ ಬಾಯಿ ಔರ್ಕರ್. ಅವರು ಯಾವಾಗಲೂ ಶಿವನ‌ ಹೆಸರಿನಲ್ಲೇ ಆಡಳಿತ ಮಾಡಿದವರು. ಅವರನ್ನು ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮರೆತಿದ್ದಾರೆ. ಇದು ಚರಿತ್ರೆಯನ್ನು ಮರೆತಂತಾಗಿದೆ. ನೀವು ಚರಿತ್ರೆ ಮುಚ್ಚಿ ಹಾಕಲು ಹೊರಟಿದ್ದೀರ? ತಕ್ಷಣದಲ್ಲಿ ಆ ಸ್ಥಳದಲ್ಲಿ ಅಹಲ್ಯ ಬಾಯಿ ಔರ್ಕರ್ ಪ್ರತಿಮೆ ಸ್ಥಾಪಿಸಿ. ವಾರಣಾಸಿ ವಿಮಾನ ನಿಲ್ದಾಣಕ್ಕೆ ಅಹಲ್ಯ ಬಾಯಿ ಔರ್ಕರ್ ಹೆಸರಿಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ವಿಶ್ವನಾಥ್ ಮನವಿ ಮಾಡಿದರು.

ಉತ್ತರ ಪ್ರದೇಶದಲ್ಲಿ ಒಂದೂವರೆ ಕೋಟಿ ಜನ ಕುರುಬರಿದ್ದಾರೆ. ಕುರುಬ ಜನಾಂಗಕ್ಕೆ ಸೇರಿದ ಅಹಲ್ಯಾಬಾಯಿಯವರನ್ನು ಮರೆತಿರುವುದು ಪ್ರಮಾದ ಎಂದು ವಿಶ್ವನಾಥ್ ಹೇಳಿದರು.

ಇದನ್ನೂ ಓದಿ:ರಾತ್ರಿಯಾಗುತ್ತಿದ್ದಂತೆ ಲೈಟ್‌ ಆಫ್ ಮಾಡಿ ಕಾಲ ಕಳೆಯುತ್ತಿದ್ದ ರಾಜಧಾನಿ ಮಂದಿ

ಕಾಗಿನೆಲೆ ಸ್ವಾಮಿಗಳ ಜಗದ್ಗುರುಗಳನ್ನು ಮರೆತಿತಿದ್ದೀರಾ? ಕುರುಬರು ನಿಮಗೆ ಅಫೇಥ್ಯವಾಗುತ್ತಿದ್ದಾರಾ? ಯಾಕೆ ಕುರುಬರನ್ನು ನೀವು ಮರೆಯುತ್ತಿದ್ದೀರಿ? ನಿರಂಜನಾಪುರಿ ಪ್ರಸನ್ನ ಸ್ವಾಮಿಗಳನ್ನು ಕರೆದಿಲ್ಲ. ಬಸವರಾಜ ಬೊಮ್ಮಾಯಿ ಸಹಾ ಮರೆತುಬಿಟ್ಟರಾ? ನಮ್ಮದು ಸಹಾ ದೊಡ್ಡ ಮಠ ಸ್ವಾಮಿ. ಹಾವೇರಿ ಕಲಬುರಗಿ ರಾಯಚೂರು ಸೇರಿ ನಾಲ್ಕು ಕಡೆಯಿದೆ. ನಮ್ಮ ಕಾಗಿನೆಲೆ ಪಕ್ಕಾ ಹಿಂದೂಗಳ ಮಠ. ಮೊದಲ ಸ್ವಾಮಿಗಳು ಪಕ್ಕಾ ಆರ್ ಎಸ್ಎಸ್ ನವರು. ಹಿಂದೂ ಧರ್ಮದ ಪ್ರತಿಪಾದಕರಾಗಿದ್ದವರು. ಅಹಲ್ಯ ಬಾಯಿ ಸಮಾಜದ ಗುರುಗಳನ್ನು ಮರೆತಿದ್ದೀರಾ. ಆಗಾದರೆ ನಾನು ಕುರುಬರು ನಿಮಗೆ ಬೇಡವೇ ಎಂದು ವಿಶ್ವನಾಥ್ ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next