Advertisement

ರಂಗೇರುತ್ತಿದೆ ಚುನಾವಣಾ ಕಣ

02:24 PM May 19, 2019 | Suhan S |

ಭಟ್ಕಳ: ಚುನಾವಣೆ ನಡೆಯಲಿರುವ 23 ವಾರ್ಡ್‌ಗಳಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದ್ದು, ಕೊನೆಯ ದಿನ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದೆ. 23 ವಾರ್ಡ್‌ಗಳಿಗೆ ಒಟ್ಟೂ 54 ಅಭ್ಯರ್ಥಿಗಳು ಕಣದಲ್ಲಿದ್ದು ಮೇ 20 ರಂದು ನಾಮಪತ್ರ ವಾಪಸ್‌ಗೆ ಕೊನೆಯ ದಿನವಾಗಿದೆ. ಎಷ್ಟು ಅಭ್ಯರ್ಥಿಗಳು ಅಂತಿಮ ಕಣದಲ್ಲಿರುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Advertisement

ಇನ್ನೇನು ಲೋಕಸಭಾ ಚುನಾವಣೆ ಮುಗಿದು ಮತ ಎಣಿಕೆ ಆಗಬೇಕಿದ್ದಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು ಹಲವು ಕಡೆಗಳಲ್ಲಿ ರಾಜಕೀಯ ನಾಯಕರಿಗೆ ನುಂಗಲಾರದ ತುತ್ತಾಗಿದ್ದರೆ, ಭಟ್ಕಳದಲ್ಲಿ ಮಾತ್ರ ರಾಜಕೀಯ ಪ್ರವೇಶವೇ ಇಲ್ಲ ಎಂದರೂ ತಪ್ಪಿಲ್ಲ. ಒಟ್ಟೂ ಚುನಾವಣೆಗೆ ನಿಂತ 54 ಅಭ್ಯರ್ಥಿಗಳಲ್ಲಿ ಕೇವಲ 16 ಅಭ್ಯರ್ಥಿಗಳು ಮಾತ್ರ ಪಕ್ಷದವರಾಗಿದ್ದು ಉಳಿದವರೆಲ್ಲ ಪಕ್ಷೇತರರೇ ಆಗಿದ್ದಾರೆ.

ಭಟ್ಕಳ ಪುರಸಭೆಯಲ್ಲಿ ಮೊದಲಿಂದಲೂ ಪಕ್ಷಕ್ಕೆ ಹೆಚ್ಚು ಒತ್ತುಕೊಡದೇ ಇಲ್ಲಿನ ತಂಜೀಂ ಸಂಸ್ಥೆಯವರು ನಿಗದಿಪಡಿಸುವ ಅಭ್ಯರ್ಥಿಗಳೇ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುತ್ತಾರೆ. ಇದರಿಂದಾಗಿ ಹೆಚ್ಚಿನ ವಾರ್ಡ್‌ಗಳಲ್ಲಿ ಯಾವ ಪಕ್ಷದ ಆಟವೂ ನಡೆಯುವುದಿಲ್ಲ. ಸ್ವತಹ ಜೆಡಿಎಸ್‌ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಕೂಡಾ ಈ ಬಾರಿ ಚುನಾವಣೆಗೆ ಸ್ಪರ್ಧಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಜೆಡಿಎಸ್‌ಗೆ ದೊಡ್ಡ ಆಘಾತವಾಗಿದೆ. ಕೇವಲ ಎರಡು ಅಭ್ಯರ್ಥಿಗಳೊಂದಿಗೆ ಪಕ್ಷ ತೃಪ್ತಿ ಪಟ್ಟುಕೊಂಡಿದೆ. ಈಗಾಗಲೇ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ವಾರ್ಡ್‌ ನಂ.1ರಲ್ಲಿ ಸಬಿನಾ ತಾಜ್‌, 2ರಲ್ಲಿ ಮೊಹಮ್ಮದ್‌ ಪರ್ವೇಜ್‌ ಕಾಶಿಂಜಿ, 5ರಲ್ಲಿ ಜಗನ್ನಾಥ ಗೊಂಡ, 9ರಲ್ಲಿ ಸಬಿನಾ ಶಿಂಗೇರಿ, 12ರಲ್ಲಿ ನಾಯ್ತೆ ಅಬ್ದುಲ್ ರವೂಫ್‌, 13ರಲ್ಲಿ ಅಶಿಯಾ ನಿದಾ ಸಿದ್ದಿಬಾಪಾ, 14ರಲ್ಲಿ ರುಬಿನಾ, 17ರಲ್ಲಿ ಮೊಹತೆಶಂ ಮೊಹಮ್ಮದ್‌ ಅಜೀಮ್‌, 21ರಲ್ಲಿ ಚಾಮುಂಡಿ ಫಾತಿಮಾ ಕಾಸರ್‌ ಒಂದೊಂದೇ ನಾಮ ಪತ್ರ ಸಲ್ಲಿಕೆಯಾಗಿದ್ದು ಎಲ್ಲಾ ವಾರ್ಡ್‌ಗಳಲ್ಲಿಯೂ ನಾಮಪತ್ರ ಕ್ರಮಬದ್ಧವಾಗಿ ಇರುವುದರಿಂದ ಇವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಚುನಾವಣೆ ನಡೆಯಲಿರುವ 3ನೇ ವಾರ್ಡ್‌ನಲ್ಲಿ ಪ್ರಿಯಾ ಫೆರ್ನಾಂಡೀಸ್‌ ಮತ್ತು ಕಾರ್ಮೆಲಿನ್‌ ಡಿಸೋಜ, 4ರಲ್ಲಿ ಜುದಯ ನಾಯ್ಕ, ಇಸ್ಮಾಯಿಲ್ ಶಂಶಾದ್‌ ಮುಕ್ತೇಸರ್‌, ಮುಹಮ್ಮದ್‌ ಮುಬಾಶಿರ್‌ ಹಲ್ಲಾರೆ, 6ರಲ್ಲಿ ಖರೂರಿ ಮೊಹಿದ್ದೀನ್‌ ಅಲ್ತಾಫ್‌, ಮೊಹಿದ್ದೀನ್‌ ಸಲೀತ್‌ ದಾಮುದಿ, 7ರಲ್ಲಿ ಸುಮಾ ಮಡಿವಾಳ, ಝರೀನ, ನಮತಾ ಸುರೇಶ ನಾಯ್ಕ, 9ರಲ್ಲಿ ಪಾಸ್ಕಲ್ ಗೋಮ್ಸ್‌, ವಿಕ್ಟರ್‌ ಗೋಮ್ಸ್‌, 10ರಲ್ಲಿ ಫರಜಾನಾ ಖಾನ್‌, ರಾಜವತಿ ನಾಯ್ಕ, 11ರಲ್ಲಿ ವೆಂಕಟೇಶ ನಾಯ್ಕ, ಮಾರುತಿ ಶೇಟ್, ರಾಘವೇಂದ್ರ ಶೇಟ್, ಉದಯ ರಾಯ್ಕರ್‌, ರಾಜು ಶೇಟ್, ಸಂದೀಪ ಕೊಲ್ಲೆ, 15ರಲ್ಲಿ ಕುಮಾರ ನಾಯ್ಕ, ಅನಂತ ದೇವಾಡಿಗ, ನಾಗರಾಜ ನಾಯ್ಕ, ಮೋಹನ ನಾಯ್ಕ, 16ರಲ್ಲಿ ಮಹಮ್ಮದ್‌ ಕೈಸರ್‌ ಮೊತೆಶಂ, ಮಹಮ್ಮದ್‌ ಶಾಹಿದ್‌ ಅರ್ಮಾರ್‌, ಶಿಂಗೇರಿ ಜಾವೇದ್‌ ಮಹಮ್ಮದ್‌, 18ರಲ್ಲಿ ಜಯಂತಿ ಮಿಂಚಿ, ಆಯಿಶಾ ಹಬೀಬ್‌ ಅಹಮ್ಮದ್‌, 19ರಲ್ಲಿ ನಾರಾಯಣ ಗವಾಳಿ, ರವೀಂದ್ರ ಸುಬ್ಬ ಮಂಗಳ, ಮಂಜುನಾಥ ಕೊರಾರ, ರಾಘವೇಂದ್ರ ಗವಾಳಿ, 20ರಲ್ಲಿ ಫಯಾಜ್‌ ಹುಸೇನ್‌ ಮುಲ್ಲಾ, ಮಹಮ್ಮದ್‌ ಶಾಹಿದ್‌ ಅರ್ಮಾರ್‌, 22ರಲ್ಲಿ ರಜನಿಬಾಯಿ ಪ್ರಭು, ಪ್ರತಿಮಾ ನಾಯ್ಕ, ನಸೀಮ್‌ ಅಫ್ರೂೕಜ್‌ ಮುಲ್ಲಾ, 23ರಲ್ಲಿ ಯಶೋಧರ ನಾಯ್ಕ, ಅರುಣ ನಾಯ್ಕ, ಕೃಷ್ಣಾನಂದ ಪೈ, ಮುಸ್ತಫಾ ಕಣದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next