ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ 1957ರಿಂದ ಮೊದಲ್ಗೊಂಡು 2018 ರವರೆಗೆ ಅಂದರೆ 15 ವರ್ಷಗಳ ಅವಧಿಗೆ ಚುನಾವಣೆ ನಡೆದು 9 ಮಂದಿ ಶಾಸಕರಾಗಿ ಆಯ್ಕೆಯಾದರೂ ಈವರೆಗೆ ಕ್ಷೇತ್ರಕ್ಕೆ ಸಚಿವ ಸ್ಥಾನ ಯೋಗ ಮಾತ್ರ ಯಾರಿಗೂ ಒಲಿದಿಲ್ಲ. ಗೋಪಾಲ ಪೂಜಾರಿ ಅವರು ನಾಲ್ಕುಬಾರಿ, ಮಂಜಯ್ಯ ಶೆಟ್ಟಿಯವರು ಎರಡು ಬಾರಿ, ಎ.ಜಿ. ಕೊಡ್ಗಿ, ಜಿ.ಎಸ್. ಆಚಾರ್ ತಲಾ ಎರಡು ಬಾರಿ, ಹಲ್ಸನಾಡು ಸುಬ್ಬರಾವ್, ಅಪ್ಪಣ್ಣ ಹೆಗ್ಡೆ, ಐ.ಎಂ.ಜಯರಾಮ್ ಶೆಟ್ಟಿ, ಕೆ. ಲಕ್ಷ್ಮೀ ನಾರಾಯಣ ಹಾಗೂ ಬಿ.ಎಂ. ಸುಕುಮಾರ್ ಶೆಟ್ಟಿ ತಲಾ ಒಂದೊಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಈವರೆಗೆ ಯಾರಿಗೂ ಸಚಿವರಾಗುವ ಅವಕಾಶ ಸಿಕ್ಕಿಲ್ಲ. ಕಳೆದ ಬಾರಿ ಗೋಪಾಲ ಪೂಜಾರಿ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಿಂದೆ ಇಲ್ಲಿನ ಶಾಸಕರಾಗಿದ್ದ ಎ.ಜಿ. ಕೊಡ್ಗಿ ಅವರು 3ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದರು. ಇದನ್ನು ಹೊರತುಪಡಿಸಿದರೆ ಯಾವ ಹುದ್ದೆಯೂ ಬೈಂದೂರಿಗೆ ಸಿಕ್ಕಿಲ್ಲ.