Advertisement

ಜನೌಷಧ ಕೇಂದ್ರದಲ್ಲೂ ಗುಣಮಟ್ಟದ ಔಷಧವಿದೆ: ಡಾ|ರಾಜೇಂದ್ರ ಪ್ರಸಾದ್‌

11:32 PM Jun 12, 2019 | mahesh |

ನಗರ: ಕೇಂದ್ರ ಸರಕಾರ ಜಾರಿಗೆ ತಂದಿರುವ ಜನೌಷಧ ಕೇಂದ್ರ ಕೇವಲ ಬಡವರದ್ದಾಗಿರದೆ ಎಲ್ಲ ಜನರ ಔಷಧ ಕೇಂದ್ರವಾಗಿದೆ ಎಂದು ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯ ಡಾ| ರಾಘವೇಂದ್ರ ಪ್ರಸಾದ್‌ ಬಂಗಾರಡ್ಕ ಹೇಳಿದರು.

Advertisement

ನಗರದ ಸೈನಿಕ ಭವನದಲ್ಲಿ ಆಯುಷ್ಮಾನ್‌ ಭಾರತ್‌ ಮತ್ತು ಜನೌಷಧ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಜನೌಷಧ ಕೇಂದ್ರದ ಕುರಿತು ಯಾವುದೇ ಕೀಳರಿಮೆ ಅಥವಾ ಸಂದೇಹ ಬೇಡ. ರಾಷ್ಟ್ರೀಯ ವೈದ್ಯಕೀಯ ಪ್ರಯೋಗ ಶಾಲೆಯಲ್ಲಿ ಪ್ರಮಾಣೀಕರಿಸಿಯೇ ಬಂದ ಔಷಧವನ್ನು ಇಲ್ಲಿ ಪೂರೈಕೆ ಮಾಡಲಾಗುತ್ತದೆ. ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ, ಗುಣಮಟ್ಟದ ಔಷಧ ಪೂರೈಸುವುದು ಜನೌಷಧ ಕೇಂದ್ರದ ಪ್ರಮುಖ ಉದ್ದೇಶ ಎಂದರು.

ದರ ಕಡಿಮೆ ಹೇಗೆಂದರೆ…
ಜನೌಷಧ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ಹೇಗೆ ಔಷಧ ಸಿಗುತ್ತದೆ ಎನ್ನುವ ಸಂಶಯವಿರಬಹುದು. ಅಲ್ಲಿ ಕೇವಲ ಉತ್ಪಾದನ ವೆಚ್ಚವನ್ನು ಹಾಕುತ್ತಾರೆ. ಬೇರೆ ಯಾವುದೇ ವೆಚ್ಚವನ್ನು ಹಾಕದೇ ಲಾಭಂಶವನ್ನು ಕೂಡಾ ಇಡುವುದಿಲ್ಲ. ಅಲ್ಲಿ ಸಿಗುವ ಮಾತ್ರೆಯ ಬಣ್ಣ ಬೇರೆ ಇರಬಹುದು. ಆದರೆ ಮಾತ್ರೆ ಒಂದೇ ಆಗಿರುತ್ತದೆ. ಇಲ್ಲಿ 600ರಿಂದ 800 ಬಗೆಯ ಔಷಧಗಳನ್ನು ಮಾರಾಟ ಮಾಡಲಾಗುತ್ತದೆ. ಜನೌಷಧದ ಕುರಿತ ಪ್ರಾಥಮಿಕ ಮಾಹಿತಿ ಎಲ್ಲರಲ್ಲೂ ಇರಬೇಕು ಎಂದು ಹೇಳಿದರು. ರಮೇಶ್‌ ರೈ ಅವರು ಜನೌಷಧದ ಪ್ರಯೋಜನವನ್ನು ಹೇಳಿದರು. ಮಾಜಿ ಸೈನಿಕರ ಸಂಘದ ತುಳಸಿದಾಸ್‌ ಉಪಸ್ಥಿತರಿ ದ್ದರು.ಮಾಜಿ ಸೈನಿಕ ಕರ್ನಲ್‌ ಜಿ.ಡಿ. ಭಟ್‌ ಸ್ವಾಗತಿಸಿ, ವಂದಿಸಿದರು. ರಮೇಶ್‌ ಬಾಬು ಕಾರ್ಯಕ್ರಮ ನಿರ್ವಹಿಸಿದರು.

ಮಹತ್ವದ ಬೆಳವಣಿಗೆ
ಸರಕಾರ ಅನೇಕ ಯೋಜನೆಗಳು ಎಪಿಎಲ್‌, ಬಿಪಿಎಲ್‌ ಬಳಕೆದಾರರಿಗೆ ಮಾತ್ರ ಇರುತ್ತದೆ. ಆದರೆ ಜನೌಷಧ ಎಲ್ಲ ಜನತೆಗೂ ಸಮಾನ ದರದಲ್ಲಿ ಲಭ್ಯವಾಗುತ್ತದೆ. ಆಯುಷ್ಮಾನ್‌ ಭಾರತ್‌ ಆರೋಗ್ಯದ ವಿಷಯದಲ್ಲಾದ ಉತ್ಕೃಷ್ಟವಾದ ಹಾಗೂ ಮಹತ್ವದ ಬೆಳವಣಿಯಾಗಿದೆ ಎಂದುರಾಘವೇಂದ್ರ ಪ್ರಸಾದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next