Advertisement
ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಅಂಗವಾಗಿ ಶ್ರವಣಬೆಳಗೊಳದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ಜೈನ ಯುವ ಸಮ್ಮೇಳನದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು. ಸಂಬಂಧಗಳ ಕೊಂಡಿ ಕಳಚುತ್ತಿವೆ. ಹಿಂದೆ ಒಟ್ಟು ಕುಟುಂಬಗಳಿದ್ದವು. ಇಂದು ಚಿಕ್ಕ ಕುಟುಂಬಗಳಾಗುತ್ತಿವೆ.
Related Articles
Advertisement
ಜೈಪುರದ ಎಸ್.ಪಿ. ಭಾರಿಲ್ಲಾ ಭಾವನೆಗಳ ಪರಿಣಾಮ ಏನಾಗಬಹುದು ಎಂಬುದರ ಕುರಿತು ಮಾತನಾಡಿ, ಮನುಷ್ಯ ಮೊದಲು ನಿರ್ಣಯ ತೆಗೆದುಕೊಂಡು ನಂತರ ಯೋಚನೆ ಮಾಡುತ್ತಾನೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುಂಚಿತವಾಗಿ ಸೂಕ್ಷ್ಮವಾಗಿ ಅವಲೋಕಿಸಬೇಕು. ಮನುಷ್ಯ ತಾನು ಅಮರ ಎಂದು ತಿಳಿದು ಜೀವಿಸುತ್ತಿದ್ದು, ಅದು ತಪ್ಪು ನಿರ್ಣಯ ಎಂದರು.
ಇಂದೋರ್‌ನ ಸೌರಭ್ ಶಾಸಿ ಕ್ಷಮೆಯ ಶಕ್ತಿ ಕುರಿತು ವಿಷಯ ಮಾತನಾಡಿ, ಯಾವುದೇ ವ್ಯಕ್ತಿ ಉತ್ತಮ ಆಲೋಚನೆ ಹೊಂದಿರಬೇಕು. ನಮ್ಮ ಕ್ರಿಯೆಗಳಿಗಿಂತ ಭಾವನೆಗಳಿಗೆ ಹೆಚ್ಚು ಮಹತ್ವವಿದೆ ಎಂದರು. ಗೋಷ್ಠಿಯ ಸಾನ್ನಿಧ್ಯವನ್ನು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಹಿಸಿದ್ದರು.
ಮಹಾಮಸ್ತಕಾಭಿಷೇಕ ಮಹೋತ್ಸವದ ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಸತೀಶ್ ಚಂದ್ ಜೈನ್, ಸಮ್ಮೇಳನದ ಉಸ್ತುವಾರಿ ಹಾಗೂ ಕಾರ್ಯದರ್ಶಿ ವಿನೋದ್ ದೊಡ್ಡಣ್ಣನವರ್, ರಾಷ್ಟ್ರೀಯ ಜೈನ ಯುವ ಸಮ್ಮೇಳನದ ಉಪ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಸಿಂಹ ಕಾಸ್ಲಿವಾಲ್, ಮುಖ್ಯ ಸಂಯೋಜಕ ಹಸುಖ್ ಜೈನ್ ಗಾಂಧಿ ಉಪಸ್ಥಿತರಿದ್ದರು.