Advertisement
ಒಮ್ಮೆ ಎಲ್ಲರೂ ಸೇರಿದೆವು. ವಿದ್ಯಾರ್ಥಿ ಸಂಘದ ಅಧ್ಯಕ್ಷನ ಜೊತೆಗೂಡಿ ಕಾಲೇಜು ಆವರಣದಲ್ಲಿ ಕ್ರಿಕೆಟ್ ಲೀಗ್ ಟೂರ್ನಮೆಂಟ್‌ನ್ನು IPL ಮಾದರಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿದೆವು. ಬಹಳ ನಿರೀಕ್ಷೆಗೂ ಮೀರಿ ಯಶಸ್ಸನ್ನು ಗಳಿಸಿದೆವು. ಇದು ಕಳೆದುಹೋದ ಅಧ್ಯಾಯದ ಕಥೆ. ಇದರ ಮಂದುವರಿಕೆ ಇನ್ನಷ್ಟು ಆಸಕ್ತಿದಾಯಕವಾಗಿದೆ.
Related Articles
ಸತ್ಯ ಹೇಳಬೇಕೆಂದರೆ ಕಳೆದವರ್ಷ ನಾನು ಮಾಡಿದ ಪಿಪಿಟಿಯ ಸಂಪೂರ್ಣ ಯಶಸ್ಸು ನನ್ನ ಸಹೋದರನಿಗೆ ಸಲ್ಲಬೇಕು. ಆದರೆ, ಈ ಬಾರಿ ಸಹೋದರನಲ್ಲಿ ಹೇಳ್ಳೋಣವೆಂದರೆ ಯಾಕೋ ಅದು ಅಸಾಧ್ಯದ ಮಾತಾಗಿತ್ತು. ಅವನು ಬೇರೇನೋ ಕೆಲಸದಲ್ಲಿ ಬಿಝಿಯಾಗಿದ್ದ. ಆದರೂ ಪ್ರಯತ್ನ ಬಿಡಲಿಲ್ಲ. ಕೆಲವು ವಿಚಾರಗಳನ್ನು ಗೆಳೆಯರಲ್ಲಿ ಕೇಳಿ ತಿಳಿದೆ. ಆದರೆ, ಇದು ಹೇಳಿದಷ್ಟು ಸುಲಭವಲ್ಲ ಅಂತನ್ನಿಸಿತು. ಯಾರಲ್ಲಿ ಹೇಳಿಕೊಳ್ಳುವುದು, ನನ್ನ ಸಂಕಟವನ್ನು !
Advertisement
ಸೇವ್ ಮಾಡಿದ್ದು ಎಲ್ಲಿಗೆ ಹೋಯಿತು !ಆಗಲೇ ಅವರು ಕೊಟ್ಟ ದಿನದ ಗಡು ಸಮೀಪಿಸಿತ್ತು. ಇನ್ನು ಕೂತರೆ ಆಗದೆಂದು ತಿಳಿದು ಲಾಪ್‌ಟಾಪ್ ಹಿಡಿದು ಶುರುಮಾಡಿದೆ. ಗೆಳೆಯನಿಗೆ ಕರೆ ಮಾಡಿ ಹಲವು ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದೆ. ಒಂದು ಹಂತದ ಎಲ್ಲ ಪ್ರಕ್ರಿಯೆಗಳನ್ನು ಸಂಜೆಯ ಹೊತ್ತಿಗೆ ಮುಗಿಸಿದೆ. ಸಂಜೆಯ ಹೊತ್ತಿಗೆ 110ಕ್ಕಿಂತಲೂ ಅಧಿಕ ಸ್ಲೆ„ಡ್‌ಗಳು ಸಿದ್ಧವಾಗಿದ್ದವು. ಕೆಲಸ ಮುಗಿದಾಗ ಮುಂಜಾನೆ 3 ಗಂಟೆಯಾಗಿತ್ತು. ದೋಷಗಳೆಲ್ಲವನ್ನು ಸರಿಪಡಿಸಿದೆ. ಮತ್ತೆ ಮತ್ತೆ ಚೆಕ್ ಮಾಡಿದೆ. ಮರುದಿನಕ್ಕೆ ಬೇಕಾಗಿದ್ದ ಡಾಟಾಗಳೆಲ್ಲವನ್ನು ಸೇವ್ ಮಾಡಿ ಹಾಸಿಗೆಯಲ್ಲಿ ಬಿದ್ದುಕೊಂಡೆ. ಬೆಳಗ್ಗೆ ಏಳುವಾಗ ತಡವಾದುದರಿಂದ ಸೂರ್ಯ ಆಗಲೇ ಮೂಡಿದ್ದ. ಇನ್ನು ಏನು ಮಾಡುವುದು! ಫೈಲ್ ಸೇವ್ ಮಾಡಿದ್ದು ಮಾತ್ರ, ಅದನ್ನು ಇನ್ನೂ ಪೆನ್‌ಡ್ರೈವ್‌ಗೆ ಹಾಕಿರಲಿಲ್ಲ. ಮತ್ತೂಂದೆಡೆ ಕಾಲೇಜಿಗೆ ಟೈಮ್ ಆಗಿತ್ತು. ನನ್ನ ಲ್ಯಾಪ್‌ಟಾಪ್ ತೆರೆದು ನನ್ನ ಸಹೋದರ ನನಗೆ ಸಹಾಯ ಮಾಡಲು ಮುಂದಾದ. ಅವನು ಪೆನ್ ಡ್ರೈವ್ ಹಾಗಿ ಫೈಲ್ ಹುಡುಕಿದರೂ ಅದು ಸಿಗಲಿಲ್ಲ. “”ಎಲ್ಲೋ ಇದೆ ನಿನ್ನ ಪಿಪಿಟಿ ಫೈಲ್? ನನಗೆ ಇನ್ನೂ ಕಾಣಿಸುತ್ತಿಲ್ಲ. ನೀನು ಸಿದ್ಧಗೊಳಿಸಿದ್ದೀಯಾ ಇಲ್ಲವಾ?” ಎಂದೆಲ್ಲ ಕೇಳತೊಡಗಿದ. ಫೈಲ್ ಕಾಣುತ್ತಿಲ್ಲ ಎಂದು ಹೇಳುತ್ತಿರುವ ಸಹೋದರನ ಮಾತು ನನ್ನ ಕಿವಿಗೆ ಕಾದ ಸೀಸದಂತೆ ಹೊಯ್ಯುತ್ತಿತ್ತು. ನಾನು ಕೂಡ ಹುಡುಕಿದೆ. ಫೈಲ್ ಸಿಗಲಿಲ್ಲ. ಎಲ್ಲಿ ಹೋಯಿತು! ಅದನ್ನು ಅಂದೇ ನನ್ನ ಗೆಳೆಯನಿಗೆ ಹಸ್ತಾಂತರಿಸಿ ಪ್ರಸೆಂಟೇಶನ್‌ಗೆ ಬೇರೆ ಸಿದ್ಧವಾಗಬೇಕಿತ್ತು. ದೇವರು ಕೈಬಿಡಲಿಲ್ಲ !
ನಾನು ಇಡೀ ರಾತ್ರಿ ಮಾಡಿದ ಪ್ರಯತ್ನ ವ್ಯರ್ಥವಾಯಿತಲ್ಲ ಎಂದು ಬೇಸರ ಪಟ್ಟೆ, ನನ್ನ ಕಣ್ಣುಗಳು ಹನಿಗೂಡಿದವು. ನನ್ನ ಮಾತು ಇಂಗಿ ಹೋಯಿತು. ಮತ್ತೆ ಮತ್ತೆ ಮೌಸನ್ನು ಓಡಾಡಿಸುತ್ತ ಫೈಲನ್ನು ಹುಡುಕಿದೆ. ಹೊಸ ಫೈಲ್ ಸಿಗಲಿಲ್ಲ. ಹಳೆಯ ಫೈಲ್ ಇತ್ತು. ಅದಿನ್ನೂ ಅಪೂರ್ಣವಾಗಿತ್ತು. ಅದು ಸಿಕ್ಕಿದರೂ ಸುಖವಿಲ್ಲ. ನನ್ನ ಸಹೋದರ ತಾನೂ ಕೊಂಚ ಹೊತ್ತು ಹುಡುಕಿ ಆಮೇಲೆ ನಡೆದುಬಿಟ್ಟ. ನನ್ನ ಪರಿಶ್ರಮದ ಅರಿವು ಅವನಿಗೆ ಹೇಗೆ ಗೊತ್ತಾಗಬೇಕು ! ಏನು ಮಾಡೋದು ಎಂದು ತೋಚಲೇ ಇಲ್ಲ. ಪಟ್ಟ ಪರಿಶ್ರಮವೆಲ್ಲ ನೀರ ಮೇಲೆ ಮಾಡಿದ ಹೋಮದಂತೆ ವ್ಯರ್ಥವಾಯಿತಲ್ಲ ! ನನ್ನ ಕಾಲೇಜಿನ ಸಹೋದರರಿಗೆ ಏನೆಂದು ಉತ್ತರಿಸಲಿ! ದೇವರ ಮೊರೆ ಹೋಗಿ ಪಟ್ಟ ಶ್ರಮವು ವ್ಯರ್ಥವಾಗದಿರಲಿ ಎಂದು ಮನದÇÉೇ ಪ್ರಾರ್ಥಿಸಿದೆ. ಒಮ್ಮೆ ಪ್ರಯತ್ನ ಮಾಡಿ ನೋಡೋಣ ಎಂದು ಬಹಳ ಸಂಕಟದಿಂದ ಕಂಪ್ಯೂಟರ್‌ನ ಪರದೆ ತೆರೆದೆ. ಏನೂ ಸಿಗಲಿಲ್ಲ.
ಲಾಪ್‌ಟಾಪ್‌ನ ಶಟ್‌ಡೌನ್ ಕಡೆಯಲ್ಲಿ ಬೆರಳಿಟ್ಟಾಗ ಏನೋ ಒಂದು ಅರ್ಥವಾಗದ ಸಂದೇಶ ಪರದೆ ಮೇಲೆ ಬಂತು. ಒಂದು ಪವಾಡವೇ ನಡೆಯಿತು. ಆ ಕ್ಷಣಕ್ಕೆ ಜೀವ ಮರಳಿ ಬಂದದ್ದು ಸುಳ್ಳಲ್ಲ.ಎಲ್ಲಿ ಅಡಗಿತ್ತೋ ಆ ಫೈಲ್, ಸ್ಕ್ರೀನ್ ಮೇಲೆ ಅದು ಕಂಗೊಳಿಸುತ್ತಿತ್ತು. ನನಗೆ ನಂಬಲು ಸಾಧ್ಯವಾಗಲಿಲ್ಲ. ಸಹೋದರನನ್ನು ಕಿರುಚಿ ಕರೆದೆ. ಅವನು ಕೂಡ ಬಂದು ನೋಡಿದ. “ಅರೆ, ಇದೆಲ್ಲಿತ್ತು? ನಾವಿಬ್ಬರು ಎಷ್ಟೊಂದು ಹುಡುಕಿದರೂ ಸಿಗದ್ದು ಎಲ್ಲಿ ಮರೆಯಾಗಿತ್ತು. ಏನೇ ಇರಲಿ, ಆ ದೇವರು ದೊಡ್ಡವನು’ ಎಂದು ಮನದಲ್ಲೇ ಅವನನ್ನು ಸ್ಮರಿಸಿದೆವು. ಪೆನ್ ಡ್ರೈವ್‌ಗೆ ಕಾಪಿ ಮಾಡಲು ಸಹೋದರ ಸಹಕರಿಸಿದ. ಕೆಲವೊಮ್ಮೆ ಹೀಗಾಗುತ್ತದೆ. ಅದೃಷ್ಟ ಕೈಕ್ಟೊಟಿತು ಎಂದು ಭಾವಿಸುತ್ತೇವೆ. ಆದರೆ, ದೇವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿ ರುತ್ತಾನೆ. ಒಂದು ಮಾತ್ರ ಸತ್ಯ, ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಅದರ ಫಲ ವ್ಯರ್ಥವಾಗುವುದೇ ಇಲ್ಲ. ಇದು ನನ್ನ ಅನುಭವ ! ಗಣೇಶ್ ಕುಮಾರ್
ಪ್ರಥಮ ಎಂ.ಸಿ.ಜೆ., ಸ್ನಾತಕೋತ್ತರ ಪದವಿ, ಮಂಗಳೂರು ವಿ. ವಿ.