Advertisement

ಶೀಘ್ರವೇ ಫ್ರಿಡ್ಜ್, ವಾಷಿಂಗ್‌ ಮಷೀನ್‌ ದರ ಇಳಿಕೆ ಸಾಧ್ಯತೆ

08:58 AM Jul 09, 2022 | Team Udayavani |

ನವದೆಹಲಿ:ಮನೆಗೆ ಫ್ರಿಡ್ಜ್, ವಾಷಿಂಗ್‌ ಮಷೀನ್‌, ಎ.ಸಿ. ಖರೀದಿ ಮಾಡಲು ಮುಂದಾಗಿದ್ದೀರಾ? ಹಾಗಿದ್ದರೆ ಕೊಂಚ ತಡೆಯಿರಿ. ಶೀಘ್ರವೇ ಅವುಗಳ ದರಗಳಲ್ಲಿ ಇಳಿಕೆಯಾಗಲಿದೆ.

Advertisement

ಏಕೆಂದರೆ ಅವುಗಳ ಉತ್ಪಾದನೆ ಬೇಕಾಗುವ ತ್ರಾಮ ಮತ್ತು ಸ್ಟೀಲ್‌ನ ಬೆಲೆಗಳಲ್ಲಿ ಇಳಿಕೆಯಾಗುವ ಸಾಧ್ಯತೆಗಳು ಇವೆ. ಫೆ.24ರಿಂದ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಶುರುವಾದ ಬಳಿಕ ತಾಮ್ರ, ಉಕ್ಕು, ಅಲ್ಯುಮಿನಿಯಂ ದರ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿತ್ತು. ತಾಮ್ರ ಈಗ ಶೇ.21, ಉಕ್ಕು ಶೇ.19, ಅಲ್ಯುಮಿನಿಯಂ ಶೇ. 19ರಷ್ಟು ಇಳಿಕೆಯಾಗಿವೆ. ಹೀಗಾಗಿ, ಕಂಪನಿಗಳು ಕೂಡ ಅವುಗಳ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಚಿಂತನೆ ನಡೆಸಿವೆ.

ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಫ್ರಿಡ್ಜ್, ಎ.ಸಿ., ವಾಷಿಂಗ್‌ ಮಷೀನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಲಿದ್ದಾರೆ ಮತ್ತು ಹಣದುಬ್ಬರ ಪ್ರಮಾಣ ಇಳಿಕೆಯಾಗಲು ನೆರವಾಗಲಿದೆ. ಹಲವು ಕಾರಣಗಳಿಂದ ಎರಡು ವರ್ಷಗಳ ಅವಧಿಯಲ್ಲಿ ಗೃಹೋಪಯೋಗಿ ವಸ್ತುಗಳ ದರ ಶೇ.20ಕ್ಕೆ ಏರಿಕೆಯಾಗಿದೆ ಎಂದು ಐಸಿಐಸಿ ಸೆಕ್ಯುರಿಟೀಸ್‌ ನಡೆಸಿದ ಅಧ್ಯಯನದಲ್ಲಿ ತಿಳಿಸಲಾಗಿದೆ.

ಗ್ರಾಹಕರಿಗೆ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳು ಸಿಗುವುದರಿಂದ ಕಂಪನಿಗಳಿಗೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಅನುಕೂಲವಾಗುತ್ತದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಕಂಪನಿಗಳಿಗೆ ಕೂಡ ಅನುಕೂಲವಾಗಿ ಪರಿಣಮಿಸಲಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್‌ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next