Advertisement

ವಿವಿಗಳಲ್ಲಿ ಸಂಶೋಧನೆಗೆ ಆದ್ಯತೆ ಬೇಕಿದೆ: ಡಾ.ಮೋಹನ್‌ ದಾಸ್‌ ಪೈ

04:56 PM Jun 26, 2021 | Team Udayavani |

ಬೆಂಗಳೂರು: ಭಾರತದಲ್ಲಿ ಬೋಧನಾಆಧಾರಿತ ವಿಶ್ವವಿದ್ಯಾಲಯವ್ಯವಸ್ಥೆ ಇದೆಯೇ ಹೊರತು, ಸಂಶೋಧನೆ ಆಧಾರಿತವಿಶ್ವವಿದ್ಯಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿಶ್ವದ ಶ್ರೇಷ್ಠವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನಮಗೆ ಸ್ಥಾನ ಪಡೆಯಲುಸಾಧ್ಯವಾಗುತ್ತಿಲ್ಲ ಎಂದು ಮಣಿಪಾಲ್‌ ಗ್ಲೋಬಲ್‌ ಶಿಕ್ಷಣದ ಅಧ್ಯಕ್ಷ ಡಾ.ಟಿ.ವಿ.ಮೋಹನ್‌ದಾಸ್‌ಪೈಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ದಿಶಾ ಭಾರತ್‌ ಸಂಸ್ಥೆಯು ಬೆಂಗಳೂರುವಿಶ್ವವಿದ್ಯಾಲಯದ ಸಹಯೋಗದಲ್ಲಿಹಮ್ಮಿಕೊಂಡಿರುವ ವಿಕಸನ ಸರಣಿ ಉಪನ್ಯಾಸಕಾರ್ಯಕ್ರಮದಲ್ಲಿ ಶುಕ್ರವಾರ “ಸಂಶೋಧನೆ ಮತ್ತುಅನ್ವೇಷಣೆ’ ಕುರಿತು ಮಾತನಾಡಿ, ಭಾರತದಲ್ಲಿಸಾವಿರಕ್ಕೂ ಅಧಿಕ ವಿಶ್ವವಿದ್ಯಾಲಯಗಳು ಇವೆ.ಆದರೆ, ವಿಶ್ವದ ನೂರು ಶ್ರೇಷ್ಠ ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ನಮಗೆ ಸಾಧ್ಯವಾಗಿಲ್ಲ.ಕಾರಣ, ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ಆ್ಯಂಡ್‌ಡಿ)ಯಲ್ಲಿನಾವುಸಾಕಷ್ಟುಸಾಧಿಸಬೇಕಿದೆ. ನಮ್ಮಲ್ಲಿ ಐತಿಹಾಸಿಕ ಶೈಕ್ಷಣಿಕ ಪರಂಪರೆ, ಶ್ರೇಷ್ಠಶಿಕ್ಷಣ ಸಂಸ್ಥೆಗಳಿದ್ದರೂ, ಅದನ್ನು ಮುಂದುವರಿಸಿಕೊಂಡುಬರಲು ವಿಫಲರಾಗಿದ್ದೇವೆ ಎಂದುಕಳವಳ ವ್ಯಕ್ತಪಡಿಸಿದರು.

ಭಾರತ ಸ್ವಾತಂತ್ರ್ಯ ಪಡೆದ ನಂತರ ಸಾಕ್ಷರತೆಗೆ ನಿರೀಕ್ಷಿತಪ್ರಮಾಣದಲ್ಲಿ ಒತ್ತು ನೀಡಿಲ್ಲ. ಮಹಿಳಾ ಶಿಕ್ಷಣಕ್ಕೂ ಪ್ರೋತ್ಸಾಹ ಸಿಕ್ಕಿರಲಿಲ್ಲ. ಶಿಕ್ಷಣ ಸಂಸ್ಥೆಗಳನ್ನು ತೆರೆದರೆ ಸಾಲದು. ದಾಖಲಾತಿ,ಕಲಿಕೆ, ಬೋಧನೆ, ಸಂಶೋಧನೆಗೆ ಉತ್ತೇಜನವೂ ಬೇಕು.ಪ್ರಾಥಮಿಕ ಶಿಕ್ಷಣವೇ ಉನ್ನತ ಶಿಕ್ಷಣದ ಬುನಾದಿಯಾಗಿದೆ.ಈನಿಟ್ಟಿನಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು. ಪ್ರತಿಭಾವಂತರು ಇಲ್ಲಿಯೇ ಸ್ನಾತಕೋತ್ತರ ಹಾಗೂ ಪಿಎಚ್‌.ಡಿಮಾಡುವಂತಾಗಬೇಕು ಮತ್ತು ಅವರ ಸೇವೆ ದೇಶಕ್ಕೆಲಭ್ಯವಾಗಬೇಕು ಎಂದು ಹೇಳಿದರು.

ಸರ್ಕಾರಗಳು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಹಾಗೂಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಯುವಜನರನ್ನು ಸಂಶೋಧನೆಗೆ ಉತ್ತೇಜಿಸುವ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸಬೇಕು. ಸಂಶೋಧನೆ ವಿಷಯದಲ್ಲಿ ಖಾಸಗಿ ಹಾಗೂಸರ್ಕಾರಿ ಸಂಸ್ಥೆಗಳ ನಡುವೆ ತಾರತಮ್ಯ ಇರಬಾರದು.
ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಸಂಶೋಧನೆ ಮಾಡಿದರೂ, ಸರ್ಕಾರಅದಕ್ಕೆ ಹಣಕಾಸು ಸೌಲಭ್ಯ ಒದಗಿಸುವಂತಾಗಬೇಕು. ಸಂಶೋಧನೆಗಳು ದೀರ್ಘ‌ಕಾಲ ಹಾಗೂಅಲ್ಪಕಾಲದಲ್ಲಿ ನಡೆಯುತ್ತದೆ. ವಿಶ್ವವಿದ್ಯಾಲಯದಲ್ಲಿದೀರ್ಘ‌ಕಾಲದ ಸಂಶೋಧನೆ ನಡೆಯುತ್ತದೆ ಮತ್ತುಇದಕ್ಕೆ ವಿಶೇಷ ಪ್ರಯತ್ನ ನಿರಂತರವಾಗಿನಡೆಯುತ್ತಿರುತ್ತದೆ. ಆದರೆ, ಇಂದಿನ ಅಗತ್ಯತೆಗೆತಕ್ಕಂತೆ ಕೈಗಾರಿಕೆಗಳಿಗೆ ಬೇಕಾಗುವಸಂಶೋಧನೆಗಳು ಅಲ್ಪಕಾಲಿಕವಾ ಗಿರುತ್ತದೆ ಎಂದು ವ್ಯಾಖ್ಯಾನ ಮಾಡಿದರು.

ಬಿಹಾರದ ನಲಂದ ವಿಶ್ವವಿದ್ಯಾಲಯದ ಕುಲಪತಿ ಡಾ.ಸುನೈನಾ ಸಿಂಗ್‌ ಮಾತನಾಡಿ,ಸಂಶೋಧನೆಗೆ ಯಾವುದೇ ವಿಭಾಗದಲ್ಲಿ ಮಿತಿ ಹಾಕಿಕೊಳ್ಳಬಾರದು. ವಿವಿಗಳು ಎಲ್ಲ ವಿಭಾಗದಲ್ಲೂ ಸಂಶೋಧನೆಗೆವಿಶೇಷ ಆದ್ಯತೆ ನೀಡಬೇಕು. ಇದಕ್ಕೆ ಪೂರಕವಾದ ಪಠ್ಯಕ್ರಮಸಿದ್ಧಪಡಿಸಬೇಕು. ಶಿಕ್ಷಣ ಕ್ಷೇತ್ರದ ಪುನರ್‌ ವಿಮರ್ಶೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಕೂಲವಾಗಿದೆ ಎಂದರು.ಐಐಟಿ, ಐಐಎಂ ಸೇರಿದಂತೆ ನೂರಕ್ಕೂ ಅಧಿಕ ರಾಷ್ಟ್ರೀಯಶಿಕ್ಷಣ ಸಂಸ್ಥೆಗಳು, ಐವತ್ತಕ್ಕೂ ಅಧಿಕ ಕೇಂದ್ರೀಯವಿಶ್ವವಿದ್ಯಾಲಯಗಳಿವೆ. ಇವುಗಳಕೊಡುಗೆ ಏನು ಎಂಬುದನ್ನುಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಸದೃಢಯೋಜನೆಯ ಜತೆಗೆ ಜ್ಞಾನಾರ್ಜನೆಗೆ ಇರುವ ಮಾರ್ಗಗಳಶೋಧನೆ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next