Advertisement

ಕಾರ್ಮಿಕ ಇಲಾಖೆಯಿಂದ ಬಹಳಷ್ಟು ಅನುಕೂಲ ಇದೆ, ಅದು ನಿಜವಾದ ಫಲಾನುಭವಿಗಳಿಗೆ ತಲುಪಬೇಕು: ಆರಗ

05:33 PM Oct 01, 2024 | Kavyashree |

ತೀರ್ಥಹಳ್ಳಿ: ಈಗಾಗಲೇ 100ಕ್ಕೂ ಹೆಚ್ಚು ಮಂದಿಗೆ ಕಾರ್ಮಿಕ ಕಿಟ್ ವಿತರಣೆ ಮಾಡಿದ್ದೇವೆ. ಈಗ ಉಳಿದ ಕಿಟ್ ಗಳನ್ನು ನೀಡಲಾಗುತ್ತಿದೆ. ಕಾರ್ಮಿಕ ಇಲಾಖೆಯಿಂದ ಬಹಳಷ್ಟು ಅನುಕೂಲ ಇದೆ. ಆದರೆ ಅದು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅದನ್ನು ನಿಜವಾದ ಕಾರ್ಮಿಕರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಆ.1ರ ಮಂಗಳವಾರ ತಾ.ಪಂ. ಸಭಾಂಗಣದಲ್ಲಿ ಕಾರ್ಮಿಕರಿಗೆ ಕಿಟ್ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಇರುವಾಗ ಕಾರ್ಮಿಕ ಇಲಾಖೆಯಲ್ಲಿ 7 ಸಾವಿರ ಕೋಟಿ ಹಣ ಇತ್ತು. ಕೊರೋನ ಸಂದರ್ಭದಲ್ಲಿ ತೀರ್ಥಹಳ್ಳಿಗೆ 15 ಸಾವಿರ ಕಿಟ್ ಬಂದಿತ್ತು. ಹಾಗೆಯೇ 5 ಸಾವಿರ ಹಣ ಪ್ರತಿಯೊಬ್ಬರ ಅಕೌಂಟ್ ಗೆ ಹಾಕಲಾಗಿತ್ತು. ಯಾವುದೇ ಕೆಲಸ ಆರಂಭ ಮಾಡುವಾಗ ಲೈಸೆನ್ಸ್ ಮಾಡಿಸುತ್ತೇವೆ ಹಾಗೆ ಅದನ್ನು ನವೀಕರಣ ಮಾಡುವ ಕೆಲಸ ಸಹ ನಿಮ್ಮಿಂದ ಆಗಬೇಕು ಎಂದರು.

ಕಾರ್ಮಿಕರು ಎಂದರೆ ಗಾರೆ, ಮ್ಯಾಕಾನಿಕ್,  ಕ್ಷೌರಿಕರು, ಟೈಲರ್ ಹೀಗೆ ಎಲ್ಲರಿಗೂ ಅನುಕೂಲ ಇದೆ. ನಿಜವಾದ ಕಾರ್ಮಿಕ ಫಲಾನುಭವಿಗಳು ಸರಿಯಾದ ದಾಖಲೆ ಕೊಡಬೇಕು. ಮದುವೆಯಾದರೆ 50 ಸಾವಿರ ಹಣ ಬರುತ್ತದೆ. ಮಕ್ಕಳಿಗೆ ಸ್ಕಾಲರ್ಶಿಪ್ ಕೊಡಲಾಗುತ್ತದೆ. ತೀರ್ಥಹಳ್ಳಿಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿಗಳು ಕಡಿಮೆಯಿದ್ದಾರೆ. ತೀರ್ಥಹಳ್ಳಿ ಶಿವಮೊಗ್ಗಕ್ಕೆ ಒಬ್ಬರೇ ಅಧಿಕಾರಿಗಳು ಇದ್ದಾರೆ. ಹಾಗಾಗಿ ಸಮಸ್ಯೆ ಇದೆ ಎಂದು ಹೇಳಿದರು.

ಪ್ರತಿಯೊಬ್ಬ ಕಾರ್ಮಿಕರಿಗೂ ಮಾಹಿತಿ ತಿಳಿಯಬೇಕು. ಸರ್ಕಾರದಿಂದ ಬರುವ ಪ್ರತಿಯೊಂದು ಯೋಜನೆಗಳು ಜನರಿಗೆ ತಲುಪುವಂತೆ ಅಧಿಕಾರಿಗಳು ಮಾಡಬೇಕು ಎಂದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಸುಚಿತ್ರ ಮಾತನಾಡಿ, ಒಂದು ಬಾರಿ ಕಿಟ್ ವಿತರಣೆ ಮಾಡಿದ್ದಾಗ ಕೆಲವರು ಬಂದು ಗಲಾಟೆ ಮಾಡಿದರು. ಕಾರ್ಮಿಕ ಇಲಾಖೆಯ ಜಾಗದಲ್ಲಿ ಸಮಸ್ಯೆಯಾಗಿದ್ದ ಕಾರಣ ಬೇರೆಡೆ ಜಾಗದಲ್ಲಿ 1000 ರೂ. ಹಣ ನೀಡಿ ಕಿಟ್ ಇಡಲಾಗಿತ್ತು. ಆದರೆ ಕೆಲವರು ಆ ವಿಷಯದಲ್ಲಿ ರಾಜಕೀಯ ಮಾಡಿ ತಡ ಮಾಡಿದರು. ಆ ಕಾರಣದಿಂದ ತಡವಾಯಿತು ಎಂದಾಗ ಶಾಸಕರು ಮಾತ್ರ ಹಂಚುವುದು ಎಂದು ಪ್ರಶ್ನೆ ಮಾಡುತ್ತಾರೆ, ಅವರ ಅಪ್ಪನ ಮನೆಯಿಂದ ತಂದು ಹಂಚುತ್ತಾರ?  ಇಂತಹ ವಿಷಯದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಏನಿದೆ? ಎಂದು ಆರಗ ಗರಂ ಆದರು.

Advertisement

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತುಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಜ್ಯೋತಿ, ಮೋಹನ್ ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next