“ಸ್ವಾತಿ, ಇವತ್ತಿನ ಶಾಪಿಂಗ್ ಪ್ಲಾನ್ ಕ್ಯಾನ್ಸಲ್ ಕಣೆ, ಹುಡುಗನ ಮನೆಯವರು ಬರ್ತಿದ್ದಾರೆ ನನ್ನ ನೋಡೋಕೆ’ ಎಂದು ಒಂದೇ ಉಸಿರಿನಲ್ಲಿ ಹೇಳಿ, ವಾರ್ಡ್‌ರೋಬಿನ ಬಾಗಿಲು ತೆಗೆದು ಬಟ್ಟೆ ಹುಡುಕಲು ತೊಡಗಿದಳು ಗೆಳತಿ ನಮ್ರತಾ. “ಅಲ್ವೇ , ರಜೆ ಇಲ್ಲಾ ಅಂತಿದ್ದೆ. ಈಗ ಹುಡುಗನ್ನ ನೋಡೋಕೋಸ್ಕರ ಊರಿಗೆ ಹೋಗ್ತಿದೀಯ?’ ಎಂದೆ ಕುತೂಹಲದಿಂದ. ಅದಕ್ಕೆ ಅವಳು, “ಹುಡುಗ ಬೆಂಗಳೂರಿನÇÉೇ ಕೆಲಸದಲ್ಲಿದ್ದಾನಂತೆ. ಅವನಿಗೂ ರಜೆ ಸಿಗೋದು ಕಷ್ಟ, ನನಗೂ ರಜೆ ಇಲ್ಲ. ಹಾಗಾಗಿ ಇÇÉೇ ನಮ್ಮ ಚಿಕ್ಕಪ್ಪನ ಮನೆಗೇ ಇವತ್ತು ಬರೋಕೆ ಹೇಳಿದಾರೆ’ ಎಂದಳು.
ವಧು ಪರೀಕ್ಷೆ ಅಂದರೆ ಸೀರೆ ಉಟ್ಕೊàಬೇಕು, ತಾನೇ ಕೈಯಾರೆ ಕಾಫಿ- ಉಪ್ಪಿಟ್ಟು ಮಾಡಿಕೊಡಬೇಕು ಅಂತೆಲ್ಲಾ ಅಂದುಕೊಂಡಿದ್ದ ನಾನು, “ನಮ್ರತಾ ಸೀರೆ ಇದ್ಯಾ ನಿನ್ನ ಹತ್ರ?’ ಎಂದೆ. “ನಿಂದೊಳ್ಳೆ ಕತೆ. ಈಗೆಲ್ಲಾ ಯಾವ ಹುಡುಗಿ ಸೀರೆ ಉಟ್ಟು, ಮಲ್ಲಿಗೆ ಮುಡಿದು, ಉಗುರಿಂದ ನೆಲ ಗೀರುತ್ತಾ ಹುಡುಗನ ಮುಂದೆ ನಾಚಿ ನಿಲ್ತಾಳೆ ಹೇಳು. ನಾನಂತೂ ಚೂಡಿ ಹಾಕ್ಕೋತೀನಿ’ ಅಂದು ತನ್ನಿಷ್ಟದ ಕಡುನೀಲಿ ಚೂಡಿದಾರ್ ತೊಟ್ಟು, ಬಿಂದಾಸ್ ಆಗಿ ಚಿಕ್ಕಮ್ಮನ ಮನೆಗೆ ಹೊರಟಳು.
ನಾನು ತುಂಬಾ ಕುತೂಹಲದಿಂದ ಸಂಜೆ ಅವಳು ಬರುವುದನ್ನೇ ಕಾಯುತ್ತಿದ್ದೆ. ಸಂಜೆ ಸುಸ್ತಾಗಿ ವಾಪಸಾದ ನಮ್ರತಾಳನ್ನು, “ಏನಾಯೆ¤à ಹುಡುಗ ಒಪ್ಪಿದನಾ?’ ಕೇಳಿದೆ. ಅದಕ್ಕೆ ಅವಳು, “ಹುಡುಗನೂ ಒಪ್ಪಿದ, ಅವರ ಮನೆಯವರೂ ಒಪ್ಪಿಕೊಂಡ್ರು. ನಾನೇ ಬೇಡ ಅಂದೆ. ಅವರ ಅಮ್ಮನಿಗೆ ದುಡ್ಡಿನಾಸೆ ಜಾಸ್ತಿ. ಮದುವೇನ ಜೋರಾಗೇ ಮಾಡಿಕೊಡಬೇಕಂತೆ. ಹುಡುಗಿಗೆ ಮೈತುಂಬಾ ಬಂಗಾರದ ಜೊತೆಗೆ ಒಂದು ಸೈಟ್ ಕೊಟ್ಟರೆ ಸಾಕಂತೆ! ಇದು ವರದಕ್ಷಿಣೆ ಅಲ್ಲ, ಮುಂದೆ ನಿಮ್ಮ ಮಗಳ ಜೀವನ ಸುಖವಾಗಿರಬೇಕಲ್ಲ, ಅದಕ್ಕೆ… ಅನ್ನೋ ಮಾತು ಬೇರೆ. ಅದಕ್ಕೆ ನಾನೇ ಈ ಸಂಬಂಧ ಬೇಡ ಅಂದೆ. ಈಗಲೇ ಇಷ್ಟೊಂದು ಒರಟಾಗಿ ಮಾತಾಡೋ ಹುಡುಗಿ ನಮಗೂ ಬೇಡ ಅಂತ ಅವರೂ ಹೊರಟರು’ ಅಂದಳು.
ಅವಳ ಬಾಡಿದ ಮುಖ ನೋಡಿ, ಪಾಪ, ಸಂಬಂಧ ಕುದುರಿಲ್ಲ ಅನ್ನೋ ಬೇಜಾರಿರಬೇಕು ಅಂದುಕೊಂಡು, “ಯಾಕೇ ಬೇಜಾರಾಗ್ತಿದೆಯಾ ಕೇಳಿದೆ?’ ಅದಕ್ಕವಳು ಅಳು ಮುಖ ಮಾಡಿ, “ಹೂಂ, ಕಣೇ. ಇದ್ದಿದ್ದೊಂದು ರಜೇನೂ ಹೋಯ್ತಲ್ಲೇ. ನೀನು ನೋಡು, ನನ್ನ ಬಿಟ್ಟು ಎಷ್ಟೊಂದೆಲ್ಲಾ ಶಾಪಿಂಗ್ ಮಾಡ್ಕೊಂಡು ಬಂದಿದ್ದೀಯ’ ಎಂದಳು. ಇಬ್ಬರೂ ಜೋರಾಗಿ ನಕ್ಕೆವು.
(ವಧುಪರೀಕ್ಷೆ ಅನ್ನೋದು ಪ್ರತಿ ಹೆಣ್ಣಿನ ಬದುಕಿನಲ್ಲಿ ಸದಾ ಕಾಡುವ ದೃಶ್ಯಾವಳಿ. ಅಂಥ ಅನುಭವಗಳು ನಿಮ್ಮ ಬದುಕಿನಲ್ಲೂ ಆಗಿದ್ದರೆ, ಅದರ ಕತೆಯನ್ನು 80- 100 ಪದಗಳ ಮಿತಿಯಲ್ಲಿ ಸ್ವಾರಸ್ಯವಾಗಿ ಬರೆದು, ನಮಗೆ ಕಳುಹಿಸಿ. ಇಮೇಲ್: uv.avalu@gmail.com)
– ಸ್ವಾತಿ ಕೆ.ಎಚ್.