ಅದೊಂದು ದಿನ ರಿಯ ನಟ ಸುಂದರ್‌ರಾಜ್ ಅವರು ರಿಲೈನ್ಸ್ ಸ್ಟೋರ್‌ಗೆ ಹೋಗಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಅವರ ಕಣ್ಣಿಗೆ ಬಿದ್ದಿದ್ದಾನೆ. ನೋಡೋಕೆ ಚೆನ್ನಾಗಿದ್ದೀಯ, ನೀನ್ಯಾಕೆ ನಟ ಆಗಬಾರದು ಎಂದು ಕೇಳಿದ್ದಾರೆ. ಒಂದಿಷ್ಟು ಫೋಟೋ ತೆಗೆಸು ಎಂದು ಸಲಹೆ ಕೊಟ್ಟಿದ್ದಾರೆ. ಸರಿ ಸುಂದ್ರಣ್ಣನ ಮಾತು ಕೇಳಿ ಆ ಹುಡುಗ ಫೋಟೋ ತೆಗೆಸಿಕೊಳ್ಳುವುದಕ್ಕೆ ಹೋಗಿದ್ದಾನೆ. ಫೋಟೋ ತೆಗಿಸಿ ಹೊರಬರುವಷ್ಟರಲ್ಲಿ, ಅವನ ಮನಸ್ಸಿನಲ್ಲಿ ಒಂದು ಗಟ್ಟಿ ನಿರ್ಧಾರವಾಗಿದೆ. ಜೀವನದಲ್ಲಿ ಏನಾದರೂ ಮಾಡಿದರೆ ಅದು ಫೋಟೋಗ್ರಫಿ ಮಾತ್ರ ಎಂದು.
ಹಾಗೆ ತೀರ್ಮಾನಿಸಿ 12 ವರ್ಷಗಳಾಗಿವೆ. ಕಟ್ ಮಾಡಿದರೆ, ಈಗ ಆ ಹುಡುಗ ಕನ್ನಡ ಚಿತ್ರರಂಗದ ಜನಪ್ರಿಯ ಛಾಯಾಗ್ರಾಹಕ. ಸಿನಿಮಾಗೂ ಅವರೇ ಬೇಕು, ಮದುವೆ ಚಿತ್ರ ತೆಗೆಯುವುದಕ್ಕೂ ಅವರೇ ಬೇಕು, ಪೋರ್ಟ್‌ಫೋಲಿಯೋಗೂ ಅವರೇ ಸರಿ … ಎಂದು ಚಿತ್ರರಂಗ ನಂಬುವಷ್ಟರ ಮಟ್ಟಿಗೆ ಭುವನ್ ಗೌಡ ಬೆಳೆದಿದ್ದಾರೆ. ಐದು ಸಾರದ ಸಂಬಳ ಸಿಕ್ಕರೆ ಸಾಕು ಎಂದು ಮಂಡ್ಯದಿಂದ ಬೆಂಗಳೂರಿಗೆ ಒಬ್ಬ ಹುಡುಗ, àಗೆ ಜನಪ್ರಿಯವಾಗಲು ಕಾರಣವೇನು? ಭುವನ್ ಗೌಡ ಸಂಕೋಚದಿಂದಲೇ ತಮ್ಮ ಲೈಫ್ಸ್ಟೋರಿಯನ್ನು ಹೇಳಿಕೊಳ್ಳುತ್ತಾ ಹೋದರು.
“ಅದು ಎಲ್ಲಾ ಶುರುವಾಗಿದ್ದು 12 ವರ್ಷಗಳ ಹಿಂದೆ …’ ಭುವನ್ ಗೌಡ ತಲೆ ಬಗ್ಗಿಸಿಯೇ ಇದ್ದರು. ಹಳೆಯದ್ದನ್ನೆಲ್ಲೆ ನೆನಪಿಸಿಕೊಳ್ಳುತ್ತಿದ್ದರು ಅನಿಸುತ್ತೆ. ಆ ನೆನಪಲ್ಲೇ ಅವರು ಒಂದೊಂದೇ ಮಾತು ಹೆಕ್ಕಿ ಹೇಳುತ್ತಿದ್ದರು. “ನಮ್ಮದು ವ್ಯವಸಾಯದ ಕುಟುಂಬ. ಮಂಡ್ಯ ಕಡೆಯೋರು ನಾವು. 12 ವರ್ಷಗಳ ಂದೆ ಬೆಂಗಳೂರಿಗೆ ಬಂದೆ. ಐದು ಸಾರ ಸಂಬಳದ ಕೆಲಸ ಸಿಕ್ಕರೆ ಸಾಕು ಅಂತ ಬಂದೋನು ನಾನು. ಸಿಮೆಂಟ್ ಸಪ್ಲೆç ಅಂಗಡೀಲಿ ಕೆಲಸಕ್ಕಿದ್ದೆ. ವಾಚ್ ರಿಪೇರಿ ಮಾಡ್ತಿದ್ದೆ. ರಿಲಯನ್ಸ್‌ನಲ್ಲೂ ಕೆಲಸಕ್ಕೆ ಇದ್ದೆ. ಸುಂದರ್‌ರಾಜ್ ಅವರು ನಮ್ಮ ಕ್ಲೆçಂಟು. ಅವರು ಒಮ್ಮೆ ಅಂಗಡಿಗೆ ಬಂದಿದ್ದರು. ನೋಡೋಕೆ ಚೆನ್ನಾಗಿದ್ದೀಯ. ನಟ ಆಗಬಹುದು. ಒಂದು ಫೋರ್ಟ್‌ಫೋಲಿಯೋ ಮಾಡಿಸು ಅಂತ ಸಲಹೆ ಕೊಟ್ಟರು. ಯಾಕೆ ಒಂದು ಚಾನ್ಸ್ ತಗೋಬಾರದು ಅಂತ ನಾನೂ ಹೋದೆ. ಫೋಟೋ ತೆಗೀವಾಗ, ಚೆನ್ನಾಗಿದೆ ಅನಿಸಿತು. ಯಾಕೆ ನಾನು ಇದ್ದನ್ನೇ ಮಾಡಬಾರದು ಅಂತ ಯೋಚನೆ ಬಂತು. ಅವತ್ತೇ ಡಿಸೈಡ್ ಮಾಡಿದೆ. ಆದರೆ, ಛಾಯಾಗ್ರಾಹಕ ಆಗಬಾರದು’ ಎಂದು ನೆನಪಿಸಿಕೊಳ್ಳುತ್ತಾ ಹೋದರು ಭುವನ್ ಗೌಡ.
ಫೋಟೋಗ್ರಾಫರ್ ಆಗಬೇಕು ಎಂದು ತೀರ್ಮಾನಿಸಿದ್ದರು ಭುವನ್. ಆದರೆ, ಅದು ಅಷ್ಟು ಸುಲಭವಾಗಿರಲಿಲ್ಲವಂತೆ. “ಒಬ್ಬರ ಹತ್ತಿರ ಅಸಿಸ್ಟೆಂಟ್ ಆಗಿ ಸೇರಿಕೊಂಡೆ. ಫೋಟೋ ತೆಗೆಯುವುದಿರಲಿ, ಕ್ಯಾಮೆರಾ ಕೂಡಾ ಮುಟ್ಟೋಕೆ ಆಗುತ್ತಿರಲಿಲ್ಲ. ಅಲ್ಲಿದ್ದಾಗಲೇ ನಾನು ಫ್ರೆàುಂಗ್, ಲೈಟಿಂಗ್ ಎಲ್ಲಾ ನಿಧಾನಕ್ಕೆ ಕಲಿತುಕೊಂಡೆ. ಕೊನೆಗೊಂದು ದಿನ ಏನೋ ಮನಸ್ಥಾಪಮಾತು. ಅವರು ಗೆಟೌಟ್ ಅಂದರು. ಹೊರಟು ಬಂದುಬಿಟ್ಟೆ. ಬೆಂಗಳೂರಲ್ಲಿ ನಮ್ಮಜ್ಜಿ ಇದ್ದರು. ಅವರ ಹತ್ತಿರ ಹೋಗಿ, ಒಂದು ಕ್ಯಾಮೆರಾ ಕೊಂಡುಕೊಳ್ಳೋಕೆ ದುಡ್ಡು ಬೇಕು ಅಂದೆ. ಅವರ ಹತ್ತಿರಾನೂ ದುಡ್ಡಿರಲಿಲ್ಲ. ಬೇಕಾದರೆ ಸಾಲ ಕೊಡಿಸುತ್ತೀನಿ ಎಂದು ಸಾಲ ಕೊಡಿಸಿದರು. ನಾನು ಕ್ಯಾಮೆರಾ ಕೊಂಡೆ. ನಿಜ ಹೇಳ್ತೀನಿ. ನಾನು ಕ್ಯಾಮೆರಾ ವ್ಯೂಫೈಂಡರ್ ಸಹ ಸರಿಯಾಗಿ ನೋಡಿರಲಿಲ್ಲ. ಇನ್ನು ಚಿತ್ರರಂಗದಲ್ಲಿ ಯಾರ ಪರಿಚಯವೂ ಇರಲಿಲ್ಲ. ಕ್ರಮೇಣ ಕಲೆಯುತ್ತಾ ಹೋದೆ. ಟ್ರಯಲ್ ಆ್ಯಂಡ್ ಎರರ್ ಮೇಲೆ ಫೋಟೋಗ್ರಫಿ, ಅಡೋಬ್ ಫೋಟೋಶಾಪ್ ಎಲ್ಲಾ ಕಲಿತೆ …’
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರ ಬಗ್ಗೆ ಭುವನ್ ಆಗ ಮಾತು ಶುರು ಮಾಡಿದರು. “ಅಲ್ಲಲ್ಲಿ ಒಂದೊಂದು ಸಿನಿಮಾದಲ್ಲಿ ಸ್ಟಿಲ್ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದೆ. ಇಲ್ಲಿ ಸರಿಯಾಗಿ ದುಡ್ಡು ಕೊಡುತ್ತಿರಲಿಲ್ಲ. ಹಾಗಾಗಿ ಬೇಸರ ಆಗೋದು. ಅದೊಂದು ದಿನ ಮುರಳಿ ಒಂದು ಆಫರ್ ಕೊಟ್ಟರು. ನಾನು ಅವರ “ಮುರಾರಿ’ ಚಿತ್ರಕ್ಕೆ ಕೆಲಸ ಮಾಡಿದ್ದೆ. ಅವರು “ಉಗ್ರಂ’ ಚಿತ್ರ ಆಗಷ್ಟೇ ಶುರುವಾಗಿತ್ತು. ಒಮ್ಮೆ ಬಂದು ನಿರ್ದೇಶಕರನ್ನ ನೋಡೋಕೆ ಹೇಳಿದ್ದರು. ನಾನು ಹೋಗಿ ಪ್ರಶಾಂತ್ ನೀಲ್ ಅವರ ಜೊತೆಗೆ ಮಾತಾಡಿ, ಆ ಸಿನಿಮಾದ ಸ್ಟಿಲ್ ಫೋಟೋಗ್ರಾಫರ್ ಆದೆ. ದಿನಾ ನಾನು ತೆಗೆದ ಫೋಟೋಗಳನ್ನು ತೋರಿಸಿದ್ದೆ. ಪ್ರಶಾಂತ್‌ಗೆ ಅದು ಇಷ್ಟ ಆಯೆ¤àನೋ? ಅಷ್ಟರಲ್ಲಿ ನಿರ್ದೇಶಕರಿಗೂ, ಛಾಯಾಗ್ರಾಹಕರಿಗೂ ಕ್ಲಾಶ್ ಆಯ್ತು. ಆಗ ಪ್ರಶಾಂತ್ ಅವರು ನೀನೇ ಮುಂದುವರೆಸು ಎಂದರು. ಕೊನೆಗೆ ರಕುಮಾರ್ ಸನಾ ಅವರನ್ನು ಪರಿಚುಸಿದೆ. ಅವರೂ ಒಂದು ಹಮತದಲ್ಲಿ ಬಿಝಿಯಾದರು. ಆಗ ನನಗೆ ಆಪ್ಶನ್ ಇರಲಿಲ್ಲ. ನಾನೇ ಛಾಯಾಗ್ರಹಕನಾಗಿ ಕೆಲಸ ಶುರು ಮಾಡಿದೆ. 39 ದಿನಗಳ ಕಾಲ ಚಿತ್ರೀಕರಣ ಮಾಡಿದೆ’ ಎಂದ ಹೇಳುತ್ತಾ ಹೋದರು ಭುವನ್.
“ಉಗ್ರಂ’ ಚಿತ್ರ ಟ್ ಆಗಿದ್ದೇ ಆಗಿದ್ದು … ಭುವನ್ ಕನ್ನಡ ಚಿತ್ರರಂಗದಲ್ಲಿ ಕ್ರಮೇಣ ಬಿಝಿಯಾದರು. “ಉಗ್ರಂ’ ಆದ ನಂತರ ಹಲವು ಚಿತ್ರಗಳ ಫೋಟೋಶೂಟ್‌ಗಳನ್ನು ಮಾಡಿದರಂತೆ. ಮಧ್ಯೆಮಧ್ಯೆ ಪೋರ್ಟ್‌ಫೋಲಿಯೋಗಳು, “ರಥಾವರ’ ಮತ್ತು “ಪುಷ್ಪಕ ಮಾನ’ ಚಿತ್ರಗಳ ಚಿತ್ರೀಕರಣ, ಜನಾರ್ಧನ ರೆಡ್ಡಿ ಮಗಳು ಮತ್ತು ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆ ಫೋಟೋಗ್ರಫಿಗೆ ಭುವನ್ ಒಂದಲ್ಲ ಒಂದು ಕೆಲಸಗಳಲ್ಲಿ ಬಿಝಿಯಾಗಿದ್ದಾರೆ.
ಎಲ್ಲಾ ಸರಿ, ಅಜಿುದ ಪಡೆದ ಸಾಲ ಕೊಟ್ಟಾಯ್ತಾ? ಓ ಎಂಬ ಉದ್ಘಾರ ತೆಗೆದರು ಭುವನ್ ಗೌಡ. “ಆಗ ನನ್ನ ಪರಿಸ್ಥಿತಿ ಸರಿ ಇಲ್ಲ. ಸಾಲ ತೆಗೆದುಕೊಳ್ಳಬೇಕಾುತು. ಇವತ್ತು ದೇವರು ಚೆನ್ನಾಗಿಟ್ಟಿದ್ದಾನೆ. ದಿನಕ್ಕೆ ಐದು ಲಕ್ಷ ಸಂಭಾವನೆ ಪಡೆಯುವಂತ ಕೆಲಸ ಕೊಟ್ಟಿದ್ದಾನೆ. ನಮ್ಮ ಅಪ್ಪ-ಅಮ್ಮ ಈಗಲೂ ವ್ಯವಸಾಯ ಮಾಡುತ್ತಿದ್ದಾರೆ. ನಾವು ಚಿಕ್ಕವರಿದ್ದಾಗ ಕುರಿ ಮೇುಸಿಕೊಂಡಿದ್ದವರು. ಟೂಲ್ಹರ್ ನೋಡಿ ಖುಪಡುತ್ತಿದ್ದವರು. ಈಗ ಜೀವನ ಸಾಕಷ್ಟು ಬದಲಾಗಿದೆ’ ಎಂದು ಭುವನ್ ಹೇಳುತ್ತಿರುವಾಗಲೇ ಅವರಿಗೆ ಏನೋ ನೆನಪುತು.
“ನಿಜ ಹೇಳಬೇಕೆಂದರೆ, ನಾನು 5 ಪರ್ಸೆಂಟ್ ಅಷ್ಟೇ ಕಲಿತಿರಬಹುದು. ಇಲ್ಲಿ ಪ್ರತಿ ದಿನ ಅಪ್‌ಡೇಟ್ ಆಗಬೇಕು. ಫೋಟೋ ತೆಗೆಯೋದಷ್ಟೇ ಅಲ್ಲ, ಫೋಟೋ ಶಾಪ್ ಚೆನ್ನಾಗಿ ಗೊತ್ತಿರಬೇಕು. ಈ ಕಲಿಕೆಗೆ ಅಂತ್ಯ ಇಲ್ಲ. ಪ್ರಾಕ್ಟೀಸ್ ಮಾಡಿದಷ್ಟು ಹೊಸ ಹೊಸ ಷಯಗಳನ್ನು ಕಲಿಯಬಹುದು. ಇದುವರೆಗೂ ನಾನು ಕಲಿತಿದ್ದೇ ಈ ತರಹ ಪ್ರಾಕ್ಟೀಸ್ ಮಾಡಿ. ನನಗೆ ಲೈಟಿಂಗ್ ಮತ್ತು ಫ್ರೆàುಂಗ್ ಬಗ್ಗೆ ಒಂದಿಷ್ಟು ಗೊತ್ತಿತ್ತು. ಹಾಗಾಗಿ ಛಾಯಾಗ್ರಹಣ ಈಸಿ ಆಯ್ತು’ ಎನ್ನುತ್ತಾರೆ ಭುವನ್.
ಭುವನ್ ಗೌಡ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವುದು ಮೂರೇ ಚಿತ್ರಗಳಿಗಾದರೂ, ಸಿನಿಮಾಗಳ ಫೋಟೋ ಶೂಟ್, ಪೋಸ್ಟರ್ ಶೂಟ್ ಸಿಕ್ಕಾಪಟ್ಟೆ ಮಾಡಿದ್ದಾರೆ. ಸಿಕ್ಕಾಪಟ್ಟೆ ಅಂದರೆ ಸುಮಾರು 250 ಸಿನಿಮಾಗಳಿರಬಹುದು ಎನ್ನುತ್ತಾರೆ ಅವರು. “ಗಜಕೇಸರಿ’, “ಐರಾವತ’, “ರನ್ನ’, “ಮಾಸ್ಟರ್‌ಪೀಸ್’, “ರಾಜಕುಮಾರ್’, “ಉಗ್ರಂ’ಗೆ ಹಲವು ಚಿತ್ರಗಳ ಪೋಸ್ಟರ್ ಶೂಟ್ ಅವರು ಮಾಡಿದ್ದಾರೆ.
ಸರಿ ಮುಂದೆ?
ಸದ್ಯಕ್ಕಂತೂ ಪ್ರಶಾಂತ್ ನೀಲ್ ನಿರ್ದೇಶನದ ಎರಡನೆಯ ಚಿತ್ರ “ಕೆ.ಜಿ.ಎಫ್’ ಇದೆ. ಅದು ಮುಗಿಯುವವರೆಗೂ ಬೇರೆ ಮಾತಿಲ್ಲ ಎಂದು ಭುವನ್ ತೀರ್ಮಾನಿಸಿದ್ದಾಗಿದೆ. ಅದೇ ಕೆಲಸದ ಗುಂಗಿನಲ್ಲಿ ಭುವನ್ ಎದ್ದು ಹೊರಟರು.
ಬರಹ: ಚೇತನ್; ಚಿತ್ರಗಳು: ಮನು ಮತ್ತು ಸಂಗ್ರಹ